2006 ರಲ್ಲಿ ಬಿಡುಗಡೆಯಾದ 'ನಾಯುಡಮ್ಮ' ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟಿ ವಿಜಯಶಾಂತಿ ಇದೀಗ ಮಹೇಶ್ ಬಾಬು ಸಿನಿಮಾ ಮೂಲಕ 13 ವರ್ಷಗಳ ನಂತರ ಮತ್ತೆ ನಟನೆಗೆ ವಾಪಸಾಗುತ್ತಿದ್ದಾರೆ. ಪ್ರಿನ್ಸ್ ಮಹೇಶ್‌ಬಾಬು ಅಭಿನಯದ 26 ನೇ ಸಿನಿಮಾ, ಅನಿಲ್ ರಾವಿಪೂಡಿ ನಿರ್ದೇಶನದ 'ಸರಿಲೇರು ನೀಕೆವರು' ಸಿನಿಮಾದಲ್ಲಿ ವಿಜಯಶಾಂತಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಇಷ್ಟು ವರ್ಷಗಳ ಬಳಿಕ ನಾನು ಮತ್ತೆ ಸಿನಿಮಾರಂಗಕ್ಕೆ ವಾಪಸ್ ಆಗಿರುವುದಕ್ಕೆ ಎಲ್ಲರೂ ನನ್ನನ್ನು ಅನುಮಾನದಿಂದ ನೋಡುತ್ತಿದ್ದಾರೆ. ನಾನು ರಾಜಕೀಯ ಬಿಟ್ಟು ಸಿನಿಮಾಗೆ ಬಂದಿದ್ದೇನೆ ಮತ್ತೆ ರಾಜಕೀಯಕ್ಕೆ ಹೋಗುವುದಿಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ, ಇದು ನಿಜ ಅಲ್ಲ. ನನಗೆ ಸಿನಿಮಾದಲ್ಲಿ ನಟಿಸಲು ಆಫರ್ಗಳು ಬರುತ್ತಲೇ ಇದ್ದವು. 6 ತಿಂಗಳ ಹಿಂದೆ ಕೂಡಾ ಒಳ್ಳೆಯ ಆಫರ್ ಬಂದಿತ್ತು. ಆದರೆ, ಲೋಕಸಭೆ ಚುನಾವಣೆ ಪ್ರಚಾರ ಸಂಬಂಧ ನಾನು ಸಿನಿಮಾಗೆ ಒಪ್ಪಿಕೊಳ್ಳಲಿಲ್ಲ. ಕಾಂಗ್ರೆಸ್ ನನಗೆ ಸ್ಟಾರ್ ಕ್ಯಾಂಪೇನರ್ ಪ್ರಚಾರ ಕಮಿಟಿ ಚೇರ್ಮನ್ ಸ್ಥಾನ ನೀಡಿ ಪ್ರಚಾರದ ಜವಾಬ್ದಾರಿ ವಹಿಸಿತ್ತು. ಆದರೆ, ರಾಜಕೀಯದಲ್ಲಿ ನಾನು ಸಕ್ರಿಯಳಾಗೇ ಇರುತ್ತೇನೆ ಎಂದು ವಿಜಯಶಾಂತಿ ಸ್ಪಷ್ಟಪಡಿಸಿದ್ದಾರೆ.
- " class="align-text-top noRightClick twitterSection" data="">
ಬಿಜೆಪಿ ಪಕ್ಷದ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ವಿಜಯಶಾಂತಿ ನಂತರ ಟಿಆರ್ಎಸ್ ಸೇರಿದರು. 2009-2014 ವರೆಗೂ ಟಿಆರ್ಎಸ್ ಸಂಸದೆಯಾಗಿ ಕಾರ್ಯ ನಿರ್ವಹಿಸಿ ನಂತರ ಕಾಂಗ್ರೆಸ್ ಸೇರಿದರು. ಕನ್ನಡದ ಕೆರಳಿದ ಹೆಣ್ಣು ಹಾಗೂ ವಿಜಯಶಾಂತಿ ಸಿನಿಮಾಗಳಲ್ಲಿ ಕೂಡಾ ಇವರು ನಟಿಸಿದ್ದಾರೆ.