ಆಗಸ್ಟ್ 2ರ ಬದಲಾಗಿ 9ರಂದು ತೆರೆಗೆ ಬರುತ್ತಿರುವ ಕುರುಕ್ಷೇತ್ರದಿಂದ ಕನ್ನಡದ ಕೆಲ ಸಿನಿಮಾಗಳಿಗೆ ಆತಂಕ ಎದುರಾಗಿದೆ. ರಾಜ್.ಬಿ.ಶೆಟ್ಟಿ ಅಭಿನಯದ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ಕೋಮಲ್ ಕುಮಾರ್ ಅಭಿನಯದ ‘ಕೆಂಪೇಗೌಡ 2’ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಿಮಿಕ್’ ಸಿನಿಮಾಗಳು 9 ರಂದೇ ಬಿಡುಗಡೆ ಎಂದು ಹೇಳಿಕೊಂಡಿದ್ದವು. ಆದರೆ, ಡಿ ಬಾಸ್ ದರ್ಶನ್ ಅಭಿನಯದ 50 ನೇ ಸಿನಿಮಾ ‘ಮುನಿರತ್ನ ಕುರುಕ್ಷೇತ್ರ’ ಆಗಸ್ಟ್ 9ಕ್ಕೆ ಬಿಡುಗಡೆ ಆಗುತ್ತಿರುವುದು ಈಗ ಸಂದಿಗ್ದ ಪರಿಸ್ಥಿತಿ ನಿರ್ಮಾಣ ಆಗುವಂತೆ ಮಾಡಿದೆ.
![kurukshetra](https://etvbharatimages.akamaized.net/etvbharat/prod-images/gubbi-mele-brahmastra-poster1564192624928-8_2707email_1564192635_1083.jpg)
ಭಾರಿ ಹೈಪ್ ಕ್ರಿಯೇಟ್ ಮಾಡಿರುವ ಬಹುಕೋಟಿ ಬಂಡವಾಳದ ಕುರುಕ್ಷೇತ್ರದ ಜತೆ ಬಿಡುಗಡೆಯಾದರೆ, ಚಿತ್ರಮಂದಿರಗಳ ಕೊರತೆಯಾಗಲಿದೆ. ಬಾಕ್ಸಾಫೀಸಿನಲ್ಲೂ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಈ ಅಂಶ ಮನಗಂಡಿರುವ ನಿರ್ಮಾಪಕ ಚಂದ್ರಶೇಖರ್, ತಮ್ಮ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರವನ್ನು ಆಗಸ್ಟ್ 15ಕ್ಕೆ ಮುಂದೂಡಿದ್ದಾರೆ. ಇತ್ತ ಕುರುಕ್ಷೇತ್ರ ನಿರ್ದೇಶಕ ನಾಗಣ್ಣ ಅವರ ಮತ್ತೊಂದು ನಿರ್ದೇಶನದ ಚಿತ್ರ ‘ಗಿಮಿಕ್’ ಮುಂದಕ್ಕೆ ಹೋಗುವ ಎಲ್ಲ ಸಾಧ್ಯತೆ ಇದೆ.
![kurukshetra](https://etvbharatimages.akamaized.net/etvbharat/prod-images/gimmik-poster-of-ganesh1564192624929-40_2707email_1564192635_790.jpg)
ಆದರೆ, ಒಂದು ತಿಂಗಳಿನಿಂದ ಹೇಳಿಕೊಂಡು ಬಂದಿದ್ದ ಕೋಮಲ್ ಕುಮಾರ್ ಅಭಿನಯದ ‘ಕೆಂಪೇಗೌಡ 2’ ಮಾತ್ರ ಆಗಸ್ಟ್ 9 ಬಿಟ್ಟು ಅಲುಗಾಡುವುದಿಲ್ಲ ಎಂಬ ಸುದ್ದಿ ಬಂದಿದೆ. ಇದು ಶಂಕರ್ಗೌಡ ನಿರ್ದೇಶನದ ಮೂರು ವರ್ಷಗಳಿಂದ ತಯಾರಾದ ಕೋಮಲ ಕುಮಾರ್ ಅವರು ಕಟ್ಟಿದ ಕೂಸು. ಸಕಲ ಸಿದ್ದತೆ ಮಾಡಿಕೊಂಡು ಚಿತ್ರ ಮಂದಿರಗಳ ಬುಕಿಂಗ್ ಸಹ ಆಗಿರುವುದರಿಂದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಜೊತೆ ‘ಕೆಂಪೇಗೌಡ 2’ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
![kurukshetra](https://etvbharatimages.akamaized.net/etvbharat/prod-images/kempe-gowda-2-poster1564192624928-24_2707email_1564192635_567.jpg)