ಬೆಂಗಳೂರು : 'ಕುರುಕ್ಷೇತ್ರ' ರಿಲೀಸ್‌ಗೂ ಮುನ್ನ ವಿತರಕ ರಾಕ್‌ಲೈನ್ ವೆಂಕಟೇಶ್ ಮಂತ್ರಿ ಸ್ಕ್ವೇರ್‌ನ ಐನಾಕ್ಸ್‌ನಲ್ಲಿ ಕಳೆದ ರಾತ್ರಿ ಸೆಲೆಬ್ರಿಟಿ ಶೋ ಏರ್ಪಡಿಸಿದ್ದರು.
ಈ ಸೆಲೆಬ್ರಿಟಿ ಶೋಗೆ ದರ್ಶನ್ ತನ್ನ ತಾಯಿ ಎಂದೇ ಅಕ್ಕರೆಯಿಂದ ಕರೆಯುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಗಮಿಸಿದ್ದರು. ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಚಂದನವನದ ನಟರು ಆಗಮಿಸಿ ಚಿತ್ರ ನೋಡಿ ಖುಷಿ ಪಟ್ಟರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅಂಬರೀಶ್, 'ದರ್ಶನ್ ಅಂದ್ರೆ ದುರ್ಯೋಧನ, ದುರ್ಯೋಧನ ಅಂದ್ರೆ ದರ್ಶನ್. ದುರ್ಯೋಧನ ಪಾತ್ರಕ್ಕೆ ದರ್ಶನ್ ಪರ್ಫೆಕ್ಟ್. ಆ ಗೆಟಪ್, ಆ ವಾಕ್, ಎಲ್ಲಾ ಸಖತ್ ಆಗಿ ಮೂಡಿ ಬಂದಿದೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದ್ರು. ಅಲ್ಲದೇ ದಚ್ಚು ಅಭಿನಯದ 'ಕುರುಕ್ಷೇತ್ರ' ಸಿನಿಮಾವನ್ನು ಕರ್ನಾಟಕದ ಪ್ರೇಕ್ಷಕರು ನೂರು ವರ್ಷ ನೆನಪಿಸ್ಕೋಬೇಕು. ನನಗೆ ಇದು ಒಂದು ಭಾವನಾತ್ಮಕ ಸಿನಿಮಾ. ಅಂಬರೀಶ್ ಅವರನ್ನು ಕೊನೆಯ ಬಾರಿಗೆ ತೆರೆಯ ಮೇಲೆ ನೋಡುವಂತಹ ಅವಕಾಶ ಸಿಕ್ಕಿತು ಎಂದರು.
ಮುಂದುವರಿದು ಮಾತನಾಡಿದ ಅವರು, ಅರ್ಜುನ್ ಸರ್ಜಾ ಹಾರ್ಟ್ ಟಚಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ನಿಖಿಲ್ ಸೂಪರ್ ಪರ್ಫಾಮೆನ್ಸ್ ಚಿತ್ರದಲ್ಲಿದೆ. ರವಿಚಂದ್ರನ್ ಅವರ 'ಕೃಷ್ಣ'ನ ಪಾತ್ರ ನಾವ್ಯಾರೂ ನಮ್ಮ ನಿರೀಕ್ಷೆಗೂ ಮಿಗಿಲಾಗಿದೆ ಎಂದು ಖುಷಿ ವ್ಯಕ್ತಪಡಿಸಿದ್ರು.
ದರ್ಶನ್ ಮಾತನಾಡಿ, ಮದರ್ ಇಂಡಿಯಾ ನನ್ನ ತಬ್ಬಿಕೊಂಡು ಫಸ್ಟ್ ರಿಯಾಕ್ಷನ್ ಕೊಟ್ರು. ನಾನು ಏನೋ ಅಂದುಕೊಂಡಿದ್ದೆ ಏನೋ ಮಾಡಿದಿಯಾ ಅಂದ್ರು ಎಂದು ಮೆಚ್ಚುಗೆಯ ಮಾತಾಡಿದ್ರು. ಆದ್ರೆ ತಕ್ಕ ಮಟ್ಟಿಗೆ ಮಾಡಿದೀವಿ ಅಷ್ಟೇ. ಅಂಬಿ ಸರ್ 'ಮೆಜೆಸ್ಟಿಕ್'ನಿಂದ ಕೊನೆಯ ಸಿನಿಮಾವರೆಗೂ ನನ್ನ ಜೊತೆಯಲ್ಲೇ ಇದ್ದರು. ಕೆಲವರಿಗೆ ಮಾತ್ರ ಆ ಭಾಗ್ಯ ಸಿಗುತ್ತೆ ಎಂದು ಭಾವುಕರಾದ್ರು.
ಇನ್ನು, ಕೊನೆಯಲ್ಲಿ 3 ನಿಮಿಷದ ಒಂದು ಸೀನ್ ಇದೆ, ದಯವಿಟ್ಟು ಅದನ್ನು ಮಿಸ್ ಮಾಡದೇ ನೋಡಿ ಎಂದು ದಚ್ಚು ಅಭಿಮಾನಿಗಳಿಗೆ ಮನವಿ ಮಡಿದ್ರ.
ಸಿನಿಮಾ ನೋಡಿದ ನಂತರ ಮಾತನಾಡಿದ ದೊಡ್ಡಣ್ಣ, ಅಂಬಿಯವರ ಅಭಿನಯದ ಕೊನೆ ಚಿತ್ರ ಇದು ಎಂದು ಭಾವುಕರಾದ್ರು.