ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿರುವ, ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ನಿರೀಕ್ಷೆಗೂ ಮೀರಿ ಮೂಡಿ ಬಂದಿದೆ.
ದುರ್ಯೋಧನ ಪಾತ್ರಧಾರಿ ದರ್ಶನ್ ಅವರ 50 ನೇ ಸಿನಿಮಾ ಕುರುಕ್ಷೇತ್ರ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದೆ. ಪೌರಾಣಿಕ ಚಿತ್ರವೊಂದನ್ನು ಅಚ್ಚಕಟ್ಟಾಗಿ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ. ಚಿತ್ರದ ಅದ್ಧೂರಿ ಮೇಕಿಂಗ್, ದರ್ಶನ್ ಅವರ ಅಬ್ಬರ 3Dಯಲ್ಲಿ ನೋಡುವುದೇ ಬಲು ಚಂದ. ಕನ್ನಡ ಭಾಷೆಯ ಸೊಗಡು, ಸಂಭಾಷಣೆ, ಹಾಡುಗಳಿಗೆ ಪ್ರೇಕ್ಷಕರ ಸಿಳ್ಳೆ-ಚಪ್ಪಾಳೆಗಳು ಭರಪೂರವಾಗಿ ಕೇಳಿ ಬರುತ್ತಿವೆ. ದಿವಂಗತ ನಟ ಅಂಬರೀಶ್ ಅವರ ಕೊನೆಯ ಚಿತ್ರ ಕುರುಕ್ಷೇತ್ರ ಅಭಿಮಾನಗಳಿಂದ ಫುಲ್ ಮಾರ್ಕ್ಸ್ ಪಡೆದಿದೆ.
ಅಂಬಿ ನಟಿಸಿರುವ ಭೀಷ್ಮ ಹಾಗೂ ರವಿಶಂಕರ ಅವರ ಶಕುನಿ ಪಾತ್ರಗಳು ನೋಡುಗರಿಗೆ ಕಿಕ್ ಕೊಡುತ್ತವೆ. ಅಭಿಮನ್ಯುನಾಗಿ ನಿಖಿಲ್ ಪಾತ್ರದ ಜೊತೆಗೆ ಡೈಲಾಗ್ ಡೆಲಿವರಿ ಹಾಗೂ ಯುದ್ಧ ಸನ್ನಿವೇಶದಲ್ಲಿ ಗಮನ ಸೆಳೆಯುತ್ತಾರೆ. ಕ್ಲೈಮಾಕ್ಸ್ನಲ್ಲಿ ಭೀಮ ಪಾತ್ರಧಾರಿ ಡ್ಯಾನಿಶ್ ಅಖ್ತರ್ ಮತ್ತು ದುರ್ಯೋಧನ ದರ್ಶನ್ ಗದಾಯುದ್ಧ ರೋಮಾಂಚನಕಾರಿಯಾಗಿದೆ.