ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50 ನೇ ಸಿನಿಮಾ ಹಾಗೂ ಸ್ಯಾಂಡಲ್ವುಡ್ ಬಹುನಿರೀಕ್ಷಿತ ಚಿತ್ರ 'ಕುರುಕ್ಷೇತ್ರ' ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಅದ್ದೂರಿ ಮೇಕಿಂಗ್ ಹಾಗೂ ಕಥೆಯಿಂದಾಗಿ ಈ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.
- " class="align-text-top noRightClick twitterSection" data="">
ಚಿತ್ರದಲ್ಲಿ ಪಾಂಡವರು, ಕೌರವರ ರಣರಂಗದ ಘರ್ಜನೆ ಜೋರಾಗಿಯೇ ಕೇಳಿಬಂದಿದೆ. ತಮ್ಮ ಪ್ರಭುತ್ವ ಸಾಧಿಸಿಕೊಳ್ಳಲು ಎರಡೂ ಗುಂಪುಗಳು ರಣ ಕಲಿಗಳಂತೆ ಯುದ್ಧಭೂಮಿಯಲ್ಲಿ ಹೋರಾಡುವ ದೃಶ್ಯ ಮೈ ರೋಮಾಂಚನಗೊಳಿಸಲಿದೆ. ಅಟ್ಟಹಾಸದಲ್ಲಿ ರಾಜವೈಭೋಗದಿಂದ ಮೆರೆಯುವ ಧುರ್ಯೋಧನ, ಶಕುನಿಯ ಕುತಂತ್ರದ ಮಾತುಗಾರಿಕೆ, ಶ್ರೀಕೃಷ್ಣನ ಹೋರಾಟದ ಜೊತೆಗೆ ಸಂಧಾನದ ಪರ್ವ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚುವಂತೆ ಮಾಡಿದೆ. ಜೊತೆಗೆ ರಣರಂಗದಲ್ಲಿ ಧುರ್ಯೋಧನ ಹಾಗೂ ಭೀಮ ಮದಗಜಗಳಂತೆ ಅಟ್ಟಹಾಸದಿಂದ ಹೋರಾಡುವ ಕಾಳಗವಂತೂ ಮೈ ನಡುಕ ಹುಟ್ಟಿಸುವಂತಿದೆ.
ಇನ್ನು ಕರ್ಣ, ಭೀಷ್ಮರ ಮಿಂಚಿನ ಬಾಣಗಳ ಸುರಿಮಳೆ ಭೂಲೋಕವನ್ನೇ ತಲ್ಲಣಗೊಳಿಸುವಂತೆ ಮಾಡಿದೆ. ಚಿತ್ರದಲ್ಲಿ ಧುರ್ಯೋಧನನಾಗಿ ದರ್ಶನ್, ಭೀಷ್ಮನಾಗಿ ರೆಬಲ್ ಸ್ಟಾರ್ ಅಂಬರೀಷ್, ಕರ್ಣನಾಗಿ ಅರ್ಜುನ್ ಸರ್ಜಾ, ಅರ್ಜುನನ ಪಾತ್ರದಲ್ಲಿ ಸೋನು ಸೂದ್ ಹಾಗೂ ಶಕುನಿಯ ಪಾತ್ರದಲ್ಲಿ ರವಿಶಂಕರ್, ಧರ್ಮರಾಯನಾಗಿ ಶಶಿಕುಮಾರ್, ಬಲಭೀಮನಾಗಿ ಡ್ಯಾನಿಷ್ ಅಕ್ತರ್, ನಕುಲ, ಸಹದೇವನ ಪಾತ್ರದಲ್ಲಿ ಯಶಸ್ ಸೂರ್ಯ ಹಾಗೂ ಚಂದನ್ ಕಾಣಿಸಿಕೊಂಡಿದ್ದಾರೆ. ಸದ್ಯ ಕುರುಕ್ಷೇತ್ರ ಚಿತ್ರದ ಎರಡನೇ ಟ್ರೇಲರ್ ಎಲ್ಲಾ ನಟರ ಅಭಿಮಾನಿಗಳಿಗೆ ಖುಷಿ ತಂದಿದೆ. ನಿರ್ದೇಶಕ ನಾಗಣ್ಣ ನಿರ್ದೇಶನದ ಸಿನಿಮಾ ಆಗಸ್ಟ್ 2ಕ್ಕೆ ವಿಶ್ವಾದ್ಯಂತ ತೆರೆಕಾಣಲಿದೆ.