ETV Bharat / sitara

ಬೆಂಗಳೂರಿನ ಎರಡು ಕಡೆ ಇಂದು 'ಕುರುಕ್ಷೇತ್ರ' ಚಿತ್ರದ 100ನೇ ದಿನದ ಕಾರ್ಯಕ್ರಮ

author img

By

Published : Feb 21, 2020, 10:11 AM IST

ಇಂದು ಸಂಜೆ 7 -9 ವರೆಗೆ ಯಶವಂತಪುರದ ಜೆ.ಪಿ. ಪಾರ್ಕ್​ನಲ್ಲಿ ನಡೆಯಲಿರುವ 'ಕುರುಕ್ಷೇತ್ರ’ 100 ನೇ ದಿನಗಳ ಕಾರ್ಯಕ್ರಮದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಎಲ್ಲರೂ ಆಗಮಿಸಲಿದ್ದಾರೆ. ಆದರೆ ಇಲ್ಲಿ ಸಾರ್ವಜನಿಕರಿಗೆ, ಅಭಿಮಾನಿಗಳಿಗೆ ಅವಕಾಶವಿಲ್ಲ. ನಂತರ ರಾತ್ರಿ 9 -11 ಗಂಟೆವರೆಗೆ ಲಗ್ಗೆರೆಯ ಡಾ. ವಿಷ್ಣುವರ್ಧನ್​​​​​​​​​​​​​​​​​​​​​​​​​​​​​​​​​​​​​ ಆಟದ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಇಂದು ಕುರುಕ್ಷೇತ್ರ 100ನೇ ದಿನದ ಕಾರ್ಯಕ್ರಮ
Kurukshetra movie 100 days function in Bangalore

2020 ರಲ್ಲಿ 100 ದಿನಗಳ ಕಾರ್ಯಕ್ರಮ ಆಚರಿಸಿಕೊಳ್ಳುತ್ತಿರುವ ಮೊದಲ ಸಿನಿಮಾ ಎಂದರೆ 'ಕುರುಕ್ಷೇತ್ರ' ಸಿನಿಮಾ. ಕಳೆದ ವರ್ಷ 'ಯಜಮಾನ' ಸಿನಿಮಾ 100 ದಿನಗಳ ಆಚರಣೆ ಮಾಡಿತ್ತು. ಮಹಾಶಿವರಾತ್ರಿಯಂದೇ ಚಿತ್ರದ 100 ದಿನಗಳ ಆಚರಣೆ ಮಾಡಬೇಕು ಎಂದೇ ಮೊದಲೇ ನಿರ್ಧರಿಸಿದ್ದ ಮುನಿರತ್ನ ಇಂದು ಬೆಂಗಳೂರಿನ ಎರಡು ಕಡೆಗಳಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದಾರೆ.

ಇಂದು ಸಂಜೆ 7 -9 ವರೆಗೆ ಯಶವಂತಪುರದ ಜೆ.ಪಿ. ಪಾರ್ಕ್​ನಲ್ಲಿ ನಡೆಯಲಿರುವ 'ಕುರುಕ್ಷೇತ್ರ’ 100 ನೇ ದಿನಗಳ ಕಾರ್ಯಕ್ರಮದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಎಲ್ಲರೂ ಆಗಮಿಸಲಿದ್ದಾರೆ. ಆದರೆ ಇಲ್ಲಿ ಸಾರ್ವಜನಿಕರಿಗೆ, ಅಭಿಮಾನಿಗಳಿಗೆ ಅವಕಾಶವಿಲ್ಲ. ನಂತರ ರಾತ್ರಿ 9 -11 ಗಂಟೆವರೆಗೆ ಲಗ್ಗೆರೆಯ ಡಾ. ವಿಷ್ಣುವರ್ಧನ್​​​​​​​​​​​​​​​​​​​​​​​​​​​​​​​​​​​​​ ಆಟದ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಕಾರ್ಯಕ್ರಮಕ್ಕೆ ಕೂಡಾ ಚಿತ್ರದ ಕಲಾವಿದರು, ತಂತ್ರಜ್ಞರು ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಒಂದು ಅದ್ಧೂರಿ ಚಿತ್ರಕ್ಕೆ ಎರಡು ಅದ್ಧೂರಿ ಕಾರ್ಯಕ್ರಮಗಳು ನಡೆಯುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು ಎನ್ನಬಹುದು. ದರ್ಶನ್ ಅವರ 50 ನೇ ಸಿನಿಮಾ 100 ದಿನಗಳನ್ನು ಪೂರೈಸಿ 100 ಕೋಟಿ ರೂಪಾಯಿ ಗಳಿಕೆ ಕಂಡಿರುವುದು ಚರಿತ್ರೆ ಪುಟಗಳಲ್ಲಿ ಸೇರಿದೆ. ಕನ್ನಡ ಚಿತ್ರರಂಗದ ಹಲವಾರು ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿರುವುದು, 3 ಡಿ ತಂತ್ರಜ್ಞಾನ ಸಿನಿಮಾ ಗೆಲ್ಲಲು ಕಾರಣ ಎನ್ನಬಹುದು. ಪೌರಾಣಿಕ ಸಿನಿಮಾವೊಂದು 3 ಡಿ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲು ಎನ್ನಬಹುದು.

ದರ್ಶನ್, ಡಾ. ಅಂಬರೀಶ್, ವಿ. ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ರವಿಶಂಕರ್, ಶ್ರೀನಿವಾಸಮೂರ್ತಿ, ಡಾ ಶ್ರೀನಾಥ್, ಡಾ. ಭಾರತಿ ವಿಷ್ಣುವರ್ಧನ್ ,ಸ್ನೇಹ, ಮೇಘನ ರಾಜ್, ಹರಿಪ್ರಿಯಾ, ರವಿ ಚೇತನ್, ಸೋನು ಸೂದ್, ದಾನಿಶ್ ಸೇಠ್​​​ ಸೇರಿ ಹಲವಾರು ನಟರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಾಕ್​ಲೈನ್ ವೆಂಕಟೇಶ್ ಈ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡಿದ್ದಾರೆ. ಚಿತ್ರಕ್ಕೆ ಜಯನನ್ ವಿನ್ಸೆಂಟ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ, ಜೋನಿ ಹರ್ಷ ಸಂಕಲನ ಇದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.