ಸ್ಯಾಂಡಲ್ವುಡ್ ಕೃಷ್ಣ ಅಜಯ್ ರಾವ್ ಅಭಿನಯದ 'ಕೃಷ್ಣ ಟಾಕೀಸ್' ಚಿತ್ರದ ಡಬ್ಬಿಂಗ್ ಕಾರ್ಯ ಕಂಪ್ಲೀಟ್ ಆಗಿದೆ. ನಿರ್ದೇಶಕ ಆನಂದಪ್ರಿಯ ಕಳೆದ 15 ದಿನಗಳಿಂದ ಚಿತ್ರದ ಪಾತ್ರಗಳ ಡಬ್ಬಿಂಗ್ ಕಾರ್ಯವನ್ನು ಮುಗಿಸಿದ್ದಾರೆ. ಡಬ್ಬಿಂಗ್ ಕಾರ್ಯವನ್ನು ಮುಗಿಸಿರುವ ಚಿತ್ರತಂಡ ಈಗ ರೀ ರೆಕಾರ್ಡಿಂಗ್ನಲ್ಲಿ ಬಿಜಿಯಾಗಿದೆ.
![krishna talkeis Dubbing complete](https://etvbharatimages.akamaized.net/etvbharat/prod-images/kn-bng-4-krishnatalkeis-dubbing-complete-ka10012_15122019180752_1512f_1576413472_180.jpg)
![krishna talkeis Dubbing complete](https://etvbharatimages.akamaized.net/etvbharat/prod-images/kn-bng-4-krishnatalkeis-dubbing-complete-ka10012_15122019180752_1512f_1576413472_710.jpg)
ಇನ್ನು ಕೆಲವೇ ದಿನಗಳಲ್ಲಿ ಕೃಷ್ಣ ಟಾಕೀಸ್ ಚಿತ್ರ ಸೆನ್ಸಾರ್ ಬೋರ್ಡ್ ಕದ ತಟ್ಟಲಿದೆ. ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾದ ನಂತರ ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆದರೆ ಜನವರಿ ಎರಡನೇ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಆನಂದಪ್ರಿಯ ತಿಳಿಸಿದ್ದಾರೆ.
![krishna talkeis Dubbing complete](https://etvbharatimages.akamaized.net/etvbharat/prod-images/kn-bng-4-krishnatalkeis-dubbing-complete-ka10012_15122019180752_1512f_1576413472_983.jpg)
![krishna talkeis Dubbing complete](https://etvbharatimages.akamaized.net/etvbharat/prod-images/kn-bng-4-krishnatalkeis-dubbing-complete-ka10012_15122019180752_1512f_1576413472_664.jpg)
ಇನ್ನು ಈ ಚಿತ್ರದಲ್ಲಿ ಅಜಯ್ ರಾವ್ಗೆ ನಾಯಕಿಯಾಗಿ ಸಿಂಧು ಲೋಕನಾಥ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದು, ಕಿಚ್ಚ ಸುದೀಪ್ ಒಂದು ಟಪಾಂಗುಚ್ಚಿ ಹಾಡನ್ನು ಹಾಡಿದ್ದಾರೆ.