ಟ್ರೇಲರ್ ಹಾಗೂ ಹಾಡುಗಳಿಂದಲೇ ಸಖತ್ ಸೌಂಡ್ ಮಾಡುತ್ತಿರುವ ಸ್ಯಾಂಡಲ್ವುಡ್ನ ಸಿನಿಮಾ 'ಬ್ರಹ್ಮಚಾರಿ' ರಿಲೀಸ್ಗೂ ಮುನ್ನವೇ ಸೇಲಾಗಿದೆ.
ಕೆಜಿಎಫ್, ಪೈಲ್ವಾನ್ ಅಂತಹ ಬಿಗ್ ಸಿನಿಮಾಗಳನ್ನು ವಿತರಿಸಿದ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ, 'ಬ್ರಹ್ಮಚಾರಿ' ಚಿತ್ರದ ವಿತರಣೆ ಹಕ್ಕನ್ನು ಖರೀದಿಸಿದ್ದಾರೆ. ಈ ವಿಷಯವನ್ನು ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ಅವರೇ ಖಚಿತ ಪಡಿಸಿದ್ದು ನನ್ನ ಬ್ಯಾನರ್ನ ಯಾವ ಚಿತ್ರವೂ ರಿಲೀಸ್ಗೂ ಮುನ್ನ ಸೇಲಾಗಿರಲಿಲ್ಲ. ಈ ಚಿತ್ರದ ಮೇಲೆ ಅವರಿಗೆ ಇರುವ ನಂಬಿಕೆ ಹಾಗೂ ಚಿತ್ರದ ಟ್ರೇಲರ್ಗೆ ಸಿಕ್ಕಿರೋ ರೆಸ್ಪಾನ್ಸ್‌ನಿಂದ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ನಮ್ಮ ಜೊತೆ ಅಸೋಷಿಯೇಟ್ ಆಗಿದ್ದಾರೆ ಎಂದರು.
ಅಲ್ಲದೇ ಬ್ರಹ್ಮಚಾರಿ ಚಿತ್ರವನ್ನು ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಬಿಡುಗಡೆ ಮಾಡುವ ಪ್ಲಾನ್ ಇದ್ದು, ಮಾತುಕತೆ ನಡೆಯುತ್ತಿದೆ. ಆದರೆ ವಿದೇಶದಲ್ಲಿ ಬೇರೆ ವಿತರಕರು ರಿಲೀಸ್ ಮಾಡ್ತಾರೆ ಎಂದು ಉದಯ್ ಮೆಹ್ತಾ 'ಬ್ರಹ್ಮಚಾರಿ' ಬ್ಯುಸಿನೆಸ್ ಬಗ್ಗೆ ಹೇಳಿದ್ರು.