ಉದಾರವಾದಿ ವಿಜಯ್ ಸದ್ಯ ಬಿಜಿಲ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೆ ಈ ಚಿತ್ರದ ಶೂಟಿಂಗ್ ಮುಗಿದಿದೆ. ಈ ಚಿತ್ರಕ್ಕಾಗಿ ದುಡಿದ ತಮ್ಮ ತಂಡದವರೆಲ್ಲರಿಗೂ ಗೋಲ್ಡನ್ ರಿಂಗ್ ನೀಡಿದ್ದಾರೆ. ಈ ಬಿಜಿಲ್ ಚಿತ್ರದ ಹೆಸರಿರುವ 400 ರಿಂಗ್ಗಳನ್ನು ಹಂಚಿದ್ದಾರೆ.
ವಿಜಯ್, ಹೀಗೆ ಉಡುಗೊರೆ ನೀಡುವುದು ಇದೇ ಮೊದಲಲ್ಲ. ಈ ಹಿಂದೆ ಸಾಕಷ್ಟು ಬಾರಿ ತಮ್ಮ ಚಿತ್ರತಂಡದವರಿಗೆ ಹಲವು ಬಗೆಯ ವಸ್ತುಗಳನ್ನು ನೀಡಿದ್ದಾರೆ. 2011 ರಲ್ಲಿ ಸಣ್ಣ ಮಕ್ಕಳಿಗೆ ಬಂಗಾರ ಉಂಗುರ ನೀಡಿದ್ದರು.
ಇನ್ನು ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಬಿಜಿಲ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಲ್ಪಥಿ ಎಸ್. ಎಜಿಎಸ್ ಎಂಟರ್ಟ್ರೇನ್ಮೆಂಟ್ ಬ್ಯಾನರ್ನಡಿ ಈ ಸಿನಿಮಾ ಸಿದ್ಧವಾಗುತ್ತಿದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.