ETV Bharat / sitara

ವಯಸ್ಸು ಜಸ್ಟ್​ 9, ನಟಿಸಿದ ಸಿನಿಮಾ 37.. ಈ ಲಿಟ್ಲ್‌'ಸ್ಟಾರ್‌' ಕಾಲ್‌ಶೀಟ್​ಗೆ ಎಲ್ಲರೂ ಕಾಯ್ತಾರೆ! - ಗಾಯ್​

ಯುಕೆಜಿ ಓದುತ್ತಿರುವ ಈತನ ತಮ್ಮ ಕೃಷ್ಣ ಚರಣ್​ ಹಾಗೂ ಹಿರಿಯ ಅಣ್ಣ ವಿಷ್ಣು ಚರಣ್ ಕೂಡ ಬಹುಬೇಡಿಕೆಯ ಬಾಲ ನಟರು. ಈ ಹುಡುಗನ ತಂದೆ ಫೋಟೋಗ್ರಾಫರ್​​.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : May 11, 2019, 2:15 PM IST

ಈ ಬಣ್ಣದ ಲೋಕವೇ ಹೀಗೆ.. ಕೆಲವರಿಗೆ ಅದೃಷ್ಟದ ದೇವತೆ ಬೇಗನೆ ಕೈ ಹಿಡಿಯುತ್ತಾಳೆ. ನೋಡು ನೋಡುತ್ತಿದ್ದಂತೆ ಗೆಲುವಿನ ಉತ್ತುಂಗಕ್ಕೆ ಕರೆದೊಯ್ಯುತ್ತಾಳೆ.

ಈ ಮೇಲಿನ ಫೋಟೋದಲ್ಲಿರುವ ಹುಡುಗನ ಹೆಸರು ಚಕ್ರಿ ಅಂತಾ. ವಯಸ್ಸು ಕೇವಲ 9. ಇನ್ನೂ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಈ ಕ್ಯೂಟ್ ಗಾಯ್​, ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾನೆ. ಪುಟ್ಟ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ್ದಾನೆ. ಈವರೆಗೆ ಬರೋಬ್ಬರಿ 37 ಚಿತ್ರಗಳಲ್ಲಿ ದೊಡ್ಡ ದೊಡ್ಡ ನಟರ ಜತೆ ತೆರೆ ಹಂಚಿಕೊಂಡಿದ್ದಾನೆ. ಕೆಲ ಸಿನಿಮಾಗಳಲ್ಲಿ ಈತನದೇ ಕೀ ರೋಲ್​ ಇರುತ್ತೆ.

ಕಳೆದ ಎರಡು ದಿನಗಳ ಹಿಂದೆಯಷ್ಟೆ ತೆರೆಕಂಡಿರುವ ಟಾಲಿವುಡ್​ ಮಹರ್ಷಿ ಚಿತ್ರದಲ್ಲೂ ಈತನದು ಮುಖ್ಯ ಪಾತ್ರ. ಮಹರ್ಷಿಯಲ್ಲಿ ಮೂಗನ ಪಾತ್ರವಾದರೂ ಅದಕ್ಕೆ ಗಟ್ಟಿತನವಿದೆ. ಕಥೆಯ ವೇಗ ಹೆಚ್ಚಿಸುವ ಲೀಡ್ ರೋಲ್​. ಮಹೇಶ್ ಬಾಬು ಜತೆಗಿನ ಮನೋಜ್ಞ ನಟನೆ ಪ್ರೇಕ್ಷಕರ ಮನತಟ್ಟುತ್ತೆ. ಮುಗ್ದ ಮುಖದ ಈ ಹುಡುಗನ ಅಭಿನಯ ಚಿತ್ರ ಮುಗಿದ ಮೇಲೂ ನೋಡುಗರ ಎದೆಯಲ್ಲಿ ಉಳಿದುಕೊಳ್ಳುತ್ತೆ.

ಮೂರನೇ ತರಗತಿ ಓದುತ್ತಿರುವ ಬಾಲ ನಟ ಚಕ್ರಿಯ ಇಬ್ಬರು ಸಹೋದರರು ಕೂಡ ಚಿತ್ರರಂಗದಲ್ಲಿದ್ದಾರೆ. ಯುಕೆಜಿ ಓದುತ್ತಿರುವ ಈತನ ತಮ್ಮ ಕೃಷ್ಣ ಚರಣ್​ ಹಾಗೂ ಹಿರಿಯ ಅಣ್ಣ ವಿಷ್ಣು ಚರಣ್ ಕೂಡ ಬಹುಬೇಡಿಕೆಯ ಬಾಲ ನಟರು. ಈ ಹುಡುಗನ ತಂದೆ ಫೋಟೋಗ್ರಾಫರ್​​. ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್​ ಜತೆ ಮಿರ್ಚಿ ಚಿತ್ರದಲ್ಲಿಯೂ ಈ ಬಾಲಕ ನಟಿಸಿದ್ದಾನೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.