ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಸಿನಿಮಾದ ಡಬ್ಬಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮುಂಬೈನಲ್ಲಿರುವ ಕಿಚ್ಚ ಸುದೀಪ್ ಬಾಲಿವುಡ್ನ ಬಹು ನಿರೀಕ್ಷಿತ ಸಿನಿಮಾ ದಬಾಂಗ್-3 ಪ್ರಮೋಷನ್ನಲ್ಲಿಯೂ ತೊಡಗಿಸಿಕೊಂಡಿದ್ದಾರೆ.
![Kichha Sudeep with Java Bike](https://etvbharatimages.akamaized.net/etvbharat/prod-images/kn-bng-02-kichha-sudeep-in-java-bike-photos-7204735_04122019135947_0412f_1575448187_887.jpg)
ಫಸ್ಟ್ ಟೈಮ್ ಸುಲ್ತಾನ್ ಸಲ್ಮಾನ್ ಖಾನ್ ಎದುರು ತೊಡೆ ತಟ್ಟಿ ನಿಂತಿರುವ ಸುದೀಪ್, ಇದೇ ತಿಂಗಳು 20ಕ್ಕೆ ಅಭಿಮಾನಿಗಳ ಮುಂದೆ ತೆರೆಯ ಮೇಲೆ ಬರಲಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಮುಂಬೈನಲ್ಲಿ, ದಬಾಂಗ್-3 ಸಿನಿಮಾದ ಪ್ರಮೋಷನ್ನನ್ನಲ್ಲಿ ಭಾಗವಹಿಸಿದ್ದಾರೆ.
![Kichha Sudeep with Java Bike](https://etvbharatimages.akamaized.net/etvbharat/prod-images/kn-bng-02-kichha-sudeep-in-java-bike-photos-7204735_04122019135947_0412f_1575448187_144.jpg)
ಈ ಸಂದರ್ಭದಲ್ಲಿ ಕಿಚ್ಚ ಸುದೀಪ್, ಎಸಿ ಕಾರು ಬಿಟ್ಟು ಓಲ್ಡ್ ಈಸ್ ಗೋಲ್ಡ್ ಜಾವಾ ಬೈಕ್ ಏರಿ ಸಂತಸ ಪಟ್ಟಿದ್ದಾರೆ. ಜಾವಾ ಬೈಕ್ ಮೇಲೆ ಕುಳಿತು ಕಿಚ್ಚ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸುದೀಪ್ ಜಾವಾ ಬೈಕ್ ಮೇಲೆ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಸಮಯದಲ್ಲಿ ನಟಿ ಸೋನಾಕ್ಷಿ ಸಿನ್ಹಾ, ಅರ್ಬಾಜ್ ಖಾನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.
![Kichha Sudeep with Java Bike](https://etvbharatimages.akamaized.net/etvbharat/prod-images/kn-bng-02-kichha-sudeep-in-java-bike-photos-7204735_04122019135947_0412f_1575448187_447.jpg)