ಬೆಂಗಳೂರು: ಯಾವುದೇ ಆಸ್ಪತ್ರೆಗಳಲ್ಲಿ ರೋಗಿಗಳ ಪ್ರಾಣ ಉಳಿಸಿ ಅವರ ಆರೋಗ್ಯ ಸುಧಾರಿಸುವ ಸೇವೆ ಮಾಡವುದರಲ್ಲಿ ವೈದ್ಯರಷ್ಟೇ ಅಲ್ಲ, ನರ್ಸ್‌ಗಳು ಪ್ರಮುಖ ಪಾತ್ರವಹಿಸುತ್ತಾರೆ. ನರ್ಸ್‌ಗಳು ಬಹಳ ತಾಳ್ಮೆ ಹಾಗೂ ನಗುಮುಖದಿಂದ, ನಿಸ್ವಾರ್ಥದಿಂದ ರೋಗಿಗಳ ಸೇವೆ ಮಾಡುತ್ತಾರೆ. ಇಂತಹ ನರ್ಸ್ ಗಳಿಗಾಗಿ, ವಿಶ್ವಾದ್ಯಂತ ಮೇ 12ರ ದಿನವನ್ನ ಇಂಟರ್ ನ್ಯಾಷನಲ್ ನರ್ಸ್ ಡೇ ಎಂದು ಆಚರಣೆ ಮಾಡಲಾಗುತ್ತೆ. ಈ ದಿನವನ್ನ ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಬಹಳ ವಿಶೇಷವಾಗಿ ಆಚರಣೆ ಮಾಡಿದ್ದಾರೆ.
ಓದಿ: ಹಣವಿಲ್ಲದೆ ಪರದಾಡುತ್ತಿದ್ದ ನಟಿ.. ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಕಿಚ್ಚ ಸುದೀಪ್ ನೆರವು
ವೈದ್ಯರು ಸೂಚಿಸುವ ಔಷಧಗಳನ್ನು, ಆಹಾರವನ್ನು ಕಾಲಕಾಲಕ್ಕೆ ಸರಿಯಾಗಿ ಕೊಟ್ಟು ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವವರೆಗೂ ಯಾವುದೇ ಸಂಕೋಚ ಅಸಹ್ಯ ಪಡದೇ ರೋಗಿಗಳನ್ನು ತುಂಬಾ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಾರೆ. ಹಗಲು ರಾತ್ರಿಯೆನ್ನದೇ ತಮ್ಮ ಕರ್ತವ್ಯ ಪಾಲಿಸುವ ನರ್ಸ್‌ಗಳು ಎಷ್ಟೋ ಮಂದಿಗೆ ದೇವರಾಗಿದ್ದಾರೆ.
ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿರುವ ನರ್ಸ್ ಗಳಿಗಾಗಿ, ಕಿಚ್ಚ ಸುದೀಪ್ ವಿಡಿಯೋ ಮೂಲಕ ಎಲ್ಲಾ ದಾದಿಯರಿಗೆ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲ ಅಪೋಲೊ ಆಸ್ಪತ್ರೆಯಲ್ಲಿರುವ ಎಲ್ಲಾ ನರ್ಸ್ ಗಳಿಗೆ ಕೇಕ್ ಹಾಗೂ ಸ್ವೀಟ್ ಗಳನ್ನ ನೀಡುವ ಮೂಲಕ ಸುದೀಪ್ ಆತ್ಮ ವಿಶ್ವಾಸ ತುಂಬಿದ್ದಾರೆ.
ಈ ಕೊರೊನಾ ಸಂದರ್ಭದಲ್ಲಿ ಸುದೀಪ್ ಬರೀ ಅಪೊಲೊ ಆಸ್ಪತ್ರೆಯಲ್ಲಿರುವ ನರ್ಸ್ ಗಳಿಗೆ ಮಾತ್ರವಲ್ಲದೇ, ವಿಶ್ವಾದ್ಯಂತ ಇರುವ ಪ್ರತಿಯೊಬ್ಬ ನರ್ಸ್ ಗಳಿಗೆ, ಪೈಲ್ವಾನ್ ಶುಭಾಶಯ ಹೇಳುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಸುದೀಪ್ ಮಾತುಗಳಿಗೆ ಅಪೋಲೊ ಆಸ್ಪತ್ರೆಯ ನರ್ಸ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.