ಕನ್ನಡದ ಬಹುನಿರೀಕ್ಷಿತ, ಪ್ರೇಕ್ಷಕರು ಅತ್ಯಂತ ಕುತೂಹಲದಿಂದ ನೋಡಲು ಕಾಯುತ್ತಿರುವ ಬಿಗ್ ಬಾಸ್ ಸೀಸನ್ 8 ಆರಂಭವಾಗಲು ಕೇವಲ ಎರಡು ದಿನ ಬಾಕಿ ಇದೆ. ಈ ವಿಚಾರವಾಗಿ ಮಾತನಾಡಿರುವ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ಶೋ ನಿರ್ದೇಶಕ ಪರಮೇಶ್ ಗುಂಡ್ಕಲ್, ಹಲವಾರು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಏನಂದ್ರು ಸುದೀಪ್?: ಸಾಮಾನ್ಯವಾಗಿ 'ಬಿಗ್ ಬಾಸ್ ಸೀಸನ್' ಶುರುವಾಯ್ತು ಅಂದ್ರೆ ಸಾಕು ಎಲ್ಲಾ ವಯೋಮಾನದವರು ಇದನ್ನು ಅತ್ಯಂತ ಉತ್ಸುಕರಾಗಿ ನೋಡ್ತಾರೆ. ಅದರಲ್ಲೂ ಈ ಕಾರ್ಯಕ್ರಮವನ್ನು ರಂಜನೀಯವಾಗಿ ನಡೆಸಿಕೊಡ್ತಿರೋ ನಾಯಕ ಕಿಚ್ಚ ಸುದೀಪ್ ಅವರ ಪ್ರಿಪ್ರೆಶನ್ ಹೇಗಿರುತ್ತೆ ಅನ್ನೋ ಕಾತುರತೆಯೂ ಅಷ್ಟೇ ಪ್ರಮಾಣದಲ್ಲಿ ಇರೋದು ಸಹಜ. ಇದೀಗ ಪ್ರೇಕ್ಷಕರಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರುವ ಕಿಚ್ಚ, ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
'ನಾನು ಯಾವುದಕ್ಕೂ ಪ್ರಿಪೇರ್ ಆಗಿ ಹೋಗಲ್ಲ, ಸಿನಿಮಾ ಶೂಟಿಂಗ್ನಲ್ಲಿ ಏನು ನಡೆಯುತ್ತೆ ಅನ್ನೋದು ಕನ್ಫರ್ಮ್ ಇರುತ್ತೆ. ಇಲ್ಲಿ ಏನಾಗುತ್ತೆ ಅನ್ನೋದು ಗೊತ್ತಿರಲ್ಲ. ನನಗೂ ಕಂಟೆಸ್ಟೆಂಟ್ಗಳಿಗೂ ಲೈವ್ ನಡೆಯುತ್ತಿರುತ್ತೆ. ಅವರೇನು ಮಾತಾಡ್ತಾರೆ ಅನ್ನೋದ್ರ ಮೇಲೆ ನಾನು ಏನು ಮಾತಾಡಬೇಕು ಅನ್ನೋದನ್ನ ಡಿಸೈಡ್ ಮಾಡ್ಬೇಕು. ಶೋ ಸ್ಟಾರ್ಟ್ ಆಗ್ತಿದ್ದ ಹಾಗೇ ಕ್ಯಾಮರಾ ನೋಡ್ಕೊಂಡು ಕೆಲವು ಲೈನ್ಗಳನ್ನ ಹೇಳ್ತೀವಿ. ಅವರಿಗೂ ನಮಗೂ ಕನೆಕ್ಟ್ ಆಗ್ತಿದ್ದ ಹಾಗೆ ಅದು ಎಲ್ಲಿಗೆ ಹೋಗುತ್ತೆ ಅನ್ನೋದೇ ಗೊತ್ತಾಗಲ್ಲ' ಎಂದಿದ್ದಾರೆ.
'ಇದಕ್ಕೆ ಪ್ರಿಪೇರ್ ಆಗಿ ಹೋಗೋಕಾಗಲ್ಲ. ಸಿನಿಮಾ ನನಗೆ ಐಡೆಂಟಿಟಿ. ಸಿನಿಮಾ ನನ್ನ ಜೀವನದ ದೊಡ್ಡ ಭಾಗ. ನನ್ನನ್ನ ನಾನೇ ಬದಲಾಯಿಸಿಕೊಳ್ಳಬೇಕಾಗುತ್ತೆ. ಇನ್ನು ಸೀಸನ್ ಒಂದರಿಂದಲೂ ಬಿಗ್ ಬಾಸ್ ಕಾರ್ಯಕ್ರಮ ಬ್ಯಾಲೆನ್ಸ್ ಮಾಡ್ಕೊಂಡ್ ಬರ್ತಿದ್ದೀನಿ. ನಾನು ಬ್ಯಾಲೆನ್ಸ್ ತಪ್ಪಿದ್ರೆ ಏನಾಗುತ್ತೋ ಗೊತ್ತಿಲ್ಲ ಎಂದಿದ್ದಾರೆ.
ಹುಚ್ಚ ವೆಂಕಟ್ ಗೆಲ್ತಿದ್ರು: ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ಮನೆಯಲ್ಲಿ ಕೈ ಎತ್ತದಿದ್ದರೆ ಆ ವರ್ಷ ಅವ್ರೇ ಗೆಲ್ತಿದ್ರು. ಅಷ್ಟು ಚೆನ್ನಾಗಿ ಹುಚ್ಚ ವೆಂಕಟ್ ಅವರಿಗೆ ವೋಟ್ಗಳು ಬರ್ತಿದ್ವು ಎಂದಿರುವ ಅವರು, ಬಿಗ್ ಬಾಸ್ ಸೀಸನ್ 6ರ ನಿರೂಪಣೆ ನನಗೆ ಸಖತ್ ಟಫ್ ಆಗಿತ್ತು ಎಂದಿದ್ದಾರೆ.
ಸತತ ಏಳು ಬಿಗ್ ಬಾಸ್ ಸೀಸನ್ಗಳನ್ನ ನಿರ್ದೇಶನ ಮಾಡುತ್ತಿರುವ ಪರಮೇಶ್ ಗುಂಡ್ಕಲ್ ಮಾತನಾಡಿ, ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿರುತ್ತೆ. ಮನೆಯಿಂದ ಹಿಡಿದು, 17 ಜನ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಬಹುತೇಕ ಸೆಲೆಬ್ರಿಟಿಗಳು ಆಗಿರುತ್ತಾರೆ. ಕೊರೊನಾ ಹಿನ್ನೆಲೆ ಎಲ್ಲಾ ಸ್ಪರ್ಧಿಗಳನ್ನ ಕ್ವಾರಂಟೈನ್ ಮಾಡಲಾಗುತ್ತೆ ಅಂತಾ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದಿದ್ದಾರೆ.