ETV Bharat / sitara

ಕಾಲಿವುಡ್ ನಿರ್ದೇಶಕನ ಜೊತೆ ಸ್ಯಾಂಡಲ್​​ವುಡ್​​ ಬಾದಷಾ ಕಿಚ್ಚನ ಮುಂದಿನ ಸಿನಿಮಾ? - ನಿರ್ದೇಶಕ ವೆಂಕಟ್ ಪ್ರಭು

ಕಾಲಿವುಡ್ ನಿರ್ದೇಶಕ ವೆಂಕಟ್ ಪ್ರಭು ಜೊತೆ ಕಿಚ್ಚ ಸಿನಿಮಾ ಮಾಡ್ತಾರಾ ಅನ್ನೋದು ಸುದೀಪ್ ಹುಟ್ಟುಹಬ್ಬದ ದಿನ ಗೊತ್ತಾಗಲಿದೆ. ಇನ್ನು, ಕೊರೊನಾ ಹಾವಳಿ ನೋಡಿಕೊಂಡು ಈ ವರ್ಷದ ಅಂತ್ಯದೊಳಗೆ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆ ಆಗುವ ಲಕ್ಷಣಗಳಿವೆ..

ಕಾಲಿವುಡ್ ನಿರ್ದೇಶಕ ವೆಂಕಟ್ ಪ್ರಭು ಜೊತೆ ಕಿಚ್ಚ

author img

By

Published : Aug 25, 2021, 4:22 PM IST

ಕನ್ನಡ ಚಿತ್ರರಂಗ ಅಲ್ಲದೇ, ಭಾರತೀಯ ಸಿನಿಮಾ ರಂಗದಲ್ಲಿ ತಮ್ಮದೇ ಕ್ರೇಜ್ ಹುಟ್ಟು ಹಾಕಿದಾರೆ ನಟ ಕಿಚ್ಚ ಸುದೀಪ್. ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಸಿನಿಮಾದ ಶೂಟಿಂಗ್ ಮುಗಿಸಿರೋ ಕಿಚ್ಚ, ಸದ್ಯ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ.

ಮತ್ತೊಂದು ಕಡೆ ಟೀಸರ್ ನಿಂದಲೇ ಸೆನ್ಸೇಷನಲ್ ಕ್ರಿಯೇಟ್ ಮಾಡಿರೋ ಕೋಟ್ಟಿಗೊಬ್ಬ-3 ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅಂತಾ ಕಿಚ್ಚನ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಹೆಬ್ಬುಲಿ, ತಮ್ಮ ಮುಂದಿನ ಸಿನಿಮಾದ ಬಗ್ಗೆ ಯಾವ ನಿರ್ದೇಶಕನ‌ ಜೊತೆ ಅನ್ನೋದರ ಸಣ್ಣ ಸುಳಿವು ನೀಡಿದ್ದಾರೆ.

ತಮಿಳು ಚಿತ್ರರಂಗದಲ್ಲಿ ತಲಾ ಅಜಿತ್, ಸೂರ್ಯ, ಸಿಂಬು ಅವರಂತಹ ಸ್ಟಾರ್ ನಟರ ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿರುವ ಖ್ಯಾತ ನಿರ್ದೇಶಕರಾದ ವೆಂಕಟ್ ಪ್ರಭು ಇತ್ತೀಚಿಗಷ್ಟೇ, ಕಿಚ್ಚನ ಮನೆಗೆ ಭೇಟಿ ನೀಡಿದ್ದಾರೆ. ಇನ್ನು, ಸುದೀಪ್ ಮನೆಗೆ ಯಾರೇ ಗೆಸ್ಟ್ ಅಥವಾ ಸೆಲೆಬ್ರಿಟಿಗಳು ಬಂದರೂ, ಸ್ವತಃ ಕಿಚ್ಚ ಸುದೀಪ್ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸೋದು ವಿಶೇಷ.

ಕಿಚ್ಚನ ಈ ಆತಿಥ್ಯಕ್ಕೆ ತಮಿಳು ಚಿತ್ರದ ನಿರ್ದೇಶಕ ವೆಂಕಟ್ ಪ್ರಭು ಫಿದಾ ಆಗಿದ್ದು, ಕಿಚ್ಚನ ಜೊತೆಗೆ ಇರುವ ಫೋಟೋ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಎಂತಹ ಅದ್ಭುತ ಆತಿಥ್ಯ! ಧನ್ಯವಾದಗಳು ಸುದೀಪ್‌ ಅವರೇ, ನೀವು ಬಹಳ ಚೆನ್ನಾಗಿ ಅಡುಗೆ ಮಾಡ್ತೀರಾ.. ನಮ್ಮ ಮುಂದಿನ ಚಿತ್ರಕ್ಕಾಗಿ ನಾನು ಉತ್ಸುಕನಾಗಿದ್ದೇನೆ. ಅಡ್ವಾನ್ಸ್ ಹ್ಯಾಪಿ ಬರ್ತ್‌ಡೇ ಅಂತಾ ವೆಂಕಟ್ ಪ್ರಭು ಬರೆದುಕೊಂಡಿದ್ದಾರೆ.

ಕಾಲಿವುಡ್ ನಿರ್ದೇಶಕ ವೆಂಕಟ್ ಪ್ರಭು ಜೊತೆ ಕಿಚ್ಚ ಸಿನಿಮಾ ಮಾಡ್ತಾರಾ ಅನ್ನೋದು ಸುದೀಪ್ ಹುಟ್ಟುಹಬ್ಬದ ದಿನ ಗೊತ್ತಾಗಲಿದೆ. ಇನ್ನು, ಕೊರೊನಾ ಹಾವಳಿ ನೋಡಿಕೊಂಡು ಈ ವರ್ಷದ ಅಂತ್ಯದೊಳಗೆ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆ ಆಗುವ ಲಕ್ಷಣಗಳಿವೆ.

ಇದನ್ನೂ ಓದಿ : You Marry Me ಎಂದ ಅಭಿಮಾನಿ: ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.