ಕೊರೊನಾ ಪರಿಣಾಮ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಸಿನಿಮಾ ಚಿತ್ರೀಕರಣ ಬಂದ್ ಮಾಡಲಾಗಿತ್ತು. ಇದೀಗ ಸರ್ಕಾರ ಶೂಟಿಂಗ್‌ಗೆ ಅನುಮತಿ ನೀಡಿದ್ದು, ಹೈದ್ರಾಬಾದ್ನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ಫ್ಯಾಂಟಮ್ ಸಿನಿಮಾ ಚಿತ್ರೀಕರಣ ಆರಂಭಿಸಲಾಗಿದೆ. ಸೆಟ್‌ಗೆ ಸುದೀಪ್ ಆಗಮಿಸಿದ ವೇಳೆ ಚಿತ್ರತಂಡ ಗುಮ್ಮ ಬಂದ ಗುಮ್ಮ ಎಂಬ ಬ್ಯಾಗ್ರೌಂಡ್ ಸ್ಕ್ವೇರ್ ಮೂಲಕ ಅದ್ಧೂರಿ ವೆಲ್ಕಮ್ ನೀಡಿದೆ.
ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಸರ್ಕಾರದ ಮಾರ್ಗಸೂಚಿಯೊಂದಿಗೆ ಫ್ಯಾಂಟಮ್ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಸುದೀಪ್, ವಿಕ್ರಾಂತ್ ರೋಣಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.