ETV Bharat / sitara

ಮತ್ತೆ ರಿಲೀಸ್ ಆಗ್ತಿದೆ ಕೆಜಿಎಫ್​​-1 ಸಿನಿಮಾ: ಇಂದಿನಿಂದಲೇ ಪ್ರದರ್ಶನ ಶುರು - ರಾಕಿಂಗ್​​​ಸ್ಟಾರ್​​ ಯಶ್​​

ಕೆಜಿಎಫ್​​​ ಚಿತ್ರವನ್ನು ಪಿವಿಆರ್​, ಇನಾಕ್ಸ್​​ ಮತ್ತು ಸಿನಿಪೋಲ್​ಗಳಲ್ಲಿ ರೀ ರಿಲೀಸ್​​​ ಮಾಡಲಾಗುತ್ತದೆ. ಇಂದಿನಿಂದ ಸರಿಯಾಗಿ ಒಂದು ವಾರದವರೆಗೆ ಈ ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಬಹುದು.

KGF re release
ಮತ್ತೆ ರಿಲೀಸ್ ಆಗ್ತಿದೆ ಕೆಜಿಎಫ್​​-1 ಸಿನಿಮಾ : ಇಂದಿನಿಂದಲೇ ಪ್ರದರ್ಶನ ಶುರು
author img

By

Published : Oct 23, 2020, 3:59 PM IST

ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ರಾಕಿಂಗ್​ ಸ್ಟಾರ್​ ಯಶ್​​ ಅಭಿನಯದ, ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​​​-1 ಸಿನಿಮಾ ರೀ ರಿಲೀಸ್​ ಆಗುತ್ತಿದೆ. ಈ ಬಗ್ಗೆ ನಿರ್ಮಾಪಕ ರಿತೇಶ್​​​ ಸಿದ್ವಾನಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾ ರೀ ರಿಲೀಸ್​ ಬಗ್ಗೆ ಮಾಹಿತಿ ನೀಡಿರುವ ಅವರು, ಕೆಜಿಎಫ್​​​ ಚಿತ್ರವನ್ನು ಪಿವಿಆರ್​, ಇನಾಕ್ಸ್​​ ಮತ್ತು ಸಿನಿಪೋಲ್​ಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಸ್ಯಾನಿಟೈಸರ್​, ಮಾಸ್ಕ್​​ ಮತ್ತು ಸಾಮಾಜಿಕ ಅಂತರದಲ್ಲಿ ಬಂದು ಸಿನಿಮಾವನ್ನು ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.

ಲಾಕ್​​ಡೌನ್​​ ನಂತ್ರ ಇತ್ತೀಚೆಗಷ್ಟೇ ಚಿತ್ರಮಂದಿರಗಳು ತೆರೆದುಕೊಂಡಿದ್ದು, ಚಿತ್ರ ಪ್ರದರ್ಶನ ನಡೆಯುತ್ತಿದೆ. ಆದ್ರೆ ಸಿನಿಮಾ ವೀಕ್ಷಕರು ಮಾತ್ರ ಹರಿದು ಬರುತ್ತಿಲ್ಲ. ಇದರಿಂದಾಗಿ ಈ ಹಿಂದೆ ದೊಡ್ಡ ಮಟ್ಟದಲ್ಲಿ ಹಿಟ್​​ ಕೊಟ್ಟಿದ್ದ ಸಿನಿಮಾಗಳನ್ನು ರೀ ರಿಲೀಸ್​ ಮಾಡಿದ್ರೆ ಜನರು ಚಿತ್ರಮಂದಿರಗಳತ್ತ ಬರುತ್ತಾರೆ ಎಂಬುದು ಚಿತ್ರಮಂದಿರ ಮಾಲೀಕರ ಮಾತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.