ETV Bharat / sitara

ಬರ್ತ್‌ಡೇ ದಿನ ಕೆಜಿಎಫ್ ಮಾಂತ್ರಿಕನಿಗೆ ಚಿತ್ರತಂಡದಿಂದ 'ಸಿನಿಮಾ ಪ್ರೀತಿ'ಯ ಉಡುಗೊರೆ! - undefined

ಇಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದು, ಹೊಂಬಾಳೆ ಫಿಲಮ್ಸ್ ವತಿಯಿಂದ ಪ್ರಶಾಂತ್ ಅವರ ಸಿನಿಮಾ ಕ್ರೇಜ್ ಕುರಿತಾದ ವಿಡಿಯೋವೊಂದನ್ನು ತಯಾರಿಸಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಪ್ರಶಾಂತ್ ನೀಲ್
author img

By

Published : Jun 4, 2019, 11:52 PM IST

ಪ್ರಶಾಂತ್ ನೀಲ್.. ಈ ಹೆಸರು ಕನ್ನಡ ಚಿತ್ರರಂಗ ಅಲ್ಲದೆ ಬಾಲಿವುಡ್​ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚು ಕೇಳಿ ಬರುತ್ತಿದೆ. ಅಂದು ಗಾಂಧಿನಗರದ ಗಲ್ಲಿಯಲ್ಲಿ ಓಡಾಡುತ್ತಿದ್ದ ಪ್ರಶಾಂತ್ ನೀಲ್, ಈಗ ಕೆಜಿಎಫ್ ಸಿನಿಮಾ ಮುಖಾಂತರ ವಿಶ್ವದ ಗಮನ ಸೆಳೆದಿದ್ದಾರೆ.

ಪ್ರಶಾಂತ್ ನೀಲ್ ವಿಡಿಯೋ

2014ರಲ್ಲಿ ತೆರೆಕಂಡ ಶ್ರೀಮುರಳಿ ಅಭಿನಯದ ಉಗ್ರಂ ಚಿತ್ರದಿಂದ ನಿರ್ದೇಶಕರಾಗಿ ಕನ್ನಡ ಸಿನಿರಂಗ ಪ್ರವೇಶಿಸಿದವರು ಪ್ರಶಾಂತ್. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ನಿರ್ದೇಶನದಲ್ಲಿ ತರಬೇತಿ ಪಡೆದಿರುವ ನೀಲ್, ತಮ್ಮ ಸಹೋದರ ಸಂಬಂಧಿಯಾದ ರೋರಿಂಗ್ ಸ್ಟಾರ್ ಶ್ರೀಮುರಳಿಯ ಹಾವಭಾವವನ್ನು ಅಧ್ಯಯನ ಮಾಡಿ ಅವರಿಗಾಗಿಯೇ ಉಗ್ರಂ ಚಿತ್ರದ ಕಥೆ ಬರೆದು ನಿರ್ದೇಶಿಸಿದರು. ಈ ಚಿತ್ರ 2014ರ ಅತಿ ದೊಡ್ಡ ಬ್ಲಾಕ್​​​​​​​​​​​​​​​​​​ ಬ್ಲಸ್ಟರ್ ಆಗಿ ದಾಖಲಾಯಿತು.

ಇದಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಮಾಡಿದ ಕೀರ್ತಿ ಕೂಡಾ ಪ್ರಶಾಂತ್ ನೀಲ್ ಅವರಿಗೆ ಸಲ್ಲಬೇಕು. ತಾನು ಮಾತನಾಡುವುದಕ್ಕಿಂತ ಹೆಚ್ಚಾಗಿ ನನ್ನ ಕೆಲಸ ಮಾತನಾಡಬೇಕು ಎಂಬ ಸಿದ್ಧಾಂತ ಹೊಂದಿರುವ ಪ್ರಶಾಂತ್ ನೀಲ್ ಇಂದು 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೆಜಿಎಫ್​​ ಚಿತ್ರತಂಡ ಪ್ರಶಾಂತ್‌ ನೀಲ್ ಸಿನಿಮಾ ಪ್ಯಾಷನ್ ಬಗ್ಗೆ ವಿಡಿಯೋವೊಂದನ್ನು ಮಾಡಿ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಉಡುಗೊರೆಯನ್ನಾಗಿ ನೀಡಿದೆ.

Intro:ಕೆಜಿಎಫ್ ಮಾಂತ್ರಿಕನಿಗೆ ಚಿತ್ರತಂಡ ಕೊಡ್ತು ಒಲವಿನ ಉಡುಗೊರೆ!!

ಪ್ರಶಾಂತ್ ನೀಲ್....ಈ ಹೆಸ್ರು ಕನ್ನಡ ಚಿತ್ರರಂಗ ಅಲ್ಲದೆ ನ್ಯಾಷನಲ್ ಲೆವೆಲ್ ನಲ್ಲಿ ಹೆಚ್ಚು ಕೇಳಿ ಬರುತ್ತಿರುವ ಹೆಸ್ರು..ಅಂದು ಗಾಂಧಿನಗರದ ಗಲ್ಲಿಯಲ್ಲಿ ಒಡಾಡುತ್ತಿದ್ದ ಪ್ರಶಾಂತ್ ನೀಲ್, ಈಗ ಕೆಜಿಎಫ್ ಸಿನಿಮಾ ಮುಖಾಂತರ ವಿಶ್ವದ ಗಮನ ಸೆಳೆದಿದ್ದಾರೆ..2014 ರಲ್ಲಿ ತೆರೆಕಂಡ ಶ್ರೀಮುರುಳಿ ಅಭಿನಯದ ಉಗ್ರಂ, ಚಿತ್ರದಿಂದ ನಿರ್ದೇಶಕರಾಗಿ ಕನ್ನಡ ಸಿನಿರಂಗ ಪ್ರವೇಶಿಸಿದರು.ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ನಿರ್ದೇಶನದಲ್ಲಿ ತರಬೇತಿ ಪಡೆದಿರುವ ನೀಲ್, ತಮ್ಮ ಸಹೋದರ ಸಂಬಂಧಿಯಾದ ರೋರಿಂಗ್ ಸ್ಟಾರ್ ಶ್ರೀಮುರಳಿಯ ಹಾವಭಾವವನ್ನು ಅಧ್ಯಯನ ಮಾಡಿ ಅವರಿಗಾಗಿಯೇ ಉಗ್ರಂ ಚಿತ್ರದ ಕಥೆ ಬರೆದು ನಿರ್ದೇಶಿಸಿದರು. ಈ ಚಿತ್ರ 2014 ರ ಅತಿದೊಡ್ಡ ಬ್ಲಾಕ ಬ್ಲಸ್ಟರ್ ಆಗಿ ದಾಖಲಾಯಿತು. ಇದಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ನ ನ್ಯಾಷಿನಲ್ ಸ್ಟಾರ್ ಮಾಡಿದ, ಕ್ರೆಡಿಟ್ ಪ್ರಶಾಂತ್ ನೀಲ್ ಸಲ್ಲುತ್ತೆ..Body:ತಾನು ಮಾತನಾಡುವುದಕ್ಕಿಂತ ಹೆಚ್ಚಾಗಿ, ನನ್ನ ಕೆಲಸ ಮಾತನಾಡಬೇಕು ಎಂಬ ಸಿದ್ಧಾಂತ ಹೊಂದಿರುವ ಪ್ರಶಾಂತ್ ನೀಲ್ 39ನೇ ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ..ಈ ಸಂಭ್ರಮವನ್ನ ಕೆಜಿಎಫ್ ಸಿನಿಮಾದ ಹೊಂಬಾಳೆ ಫಿಲ್ಮ್ ತಂಡದಿಂದ ಪ್ರಶಾಂತ್ ನೀಲ್ ಸಿನಿಮಾ ಫ್ಯಾಷನ್ ಬಗ್ಗೆ ವಿಡಿಯೋ ಬಿಡುಗಡೆ ಮಾಡುವ, ಮೂಲಕ ಹುಟ್ಟು ಹಬ್ಬ ಉಡುಗೊರೆಯನ್ನ ನೀಡಿದೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.