ETV Bharat / sitara

ಮಹೇಶ್​ ಬಾಬು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಾರಾ ಕೆಜಿಎಫ್​ ಡೈರೆಕ್ಟರ್​​....? - ಕೆಜಿಎಫ್-2

ಟಾಲಿವುಡ್ ನಟ ಜ್ಯೂ. ಎನ್​ಟಿಆರ್​​​​​​​​​​​​​​​​​​​​​​​​​​​​​​​​​​ ಜೊತೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಜೊತೆ ಜೊತೆಗೆ ಇದೀಗ ಮಹೇಶ್ ಬಾಬು ಅಭಿನಯದ ಸಿನಿಮಾವೊಂದನ್ನು ಕೂಡಾ ಪ್ರಶಾಂತ್ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಶಾಂತ್ ನೀಲ್, ಮಹೇಶ್ ಬಾಬು
author img

By

Published : Sep 10, 2019, 1:02 PM IST

ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ಮೂಲಕ ಹೆಸರು ಮಾಡಿರುವ ನಿರ್ದೇಶಕ. ಈ ಮುನ್ನ ಪ್ರಶಾಂತ್ ನೀಲ್ ನಿರ್ದೇಶಿಸಿದ್ದ 'ಉಗ್ರಂ' ಬ್ಲಾಕ್​ ಬಸ್ಟರ್ ಪಟ್ಟಿಗೆ ಸೇರಿದ್ದರೂ ಕೂಡಾ ಅವರ ಹೆಸರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯವಾಗಿದ್ದು ಕೆಜಿಎಫ್ ಮೂಲಕ ಅನ್ನೋದು ತಿಳಿದ ವಿಚಾರ.

ಸದ್ಯಕ್ಕೆ ಪ್ರಶಾಂತ್ ನೀಲ್ ಕೆಜಿಎಫ್ ಸೀಕ್ವೆಲ್​​​​​ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಸದ್ಯಕ್ಕೆ ಹೈದರಾಬಾದ್​​​​ನಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಕೆಜಿಎಫ್ ಬಿಡುಗಡೆಯಾದ ನಂತರ ಪ್ರಶಾಂತ್ ನೀಲ್ ತೆಲುಗು ನಟ ಜ್ಯೂ. ಎನ್​​ಟಿಆರ್​ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಅದು ನಿಜವಾ ಎಂದುಕೊಳ್ಳುತ್ತಿದ್ದಂತೆ ಜ್ಯೂ. ಎನ್​​​ಟಿಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುವುದು ಗ್ಯಾರಂಟಿ ಎಂಬ ವಿಷಯ ಹೊರಬಿತ್ತು. ಕೆಜಿಎಫ್-2 ಮುಗಿಯುತ್ತಿದ್ದಂತೆ ಈ ತೆಲುಗು ಸಿನಿಮಾ ಆರಂಭವಾಗಲಿದ್ದು, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸಲಿದೆ. ಇತ್ತೀಚಿನ ಮೂಲಗಳ ಪ್ರಕಾರ ಪ್ರಶಾಂತ್ ನೀಲ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಕೂಡಾ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮಹೇಶ್​​​ಗೆ ಪ್ರಶಾಂತ್ ಕಥೆ ಹೇಳಿದ್ದು, ಅವರಿಗೂ ಕಥೆ ಇಷ್ಟವಾಗಿದೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

Intro:Body:

mahesh prashant

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.