ETV Bharat / sitara

'KGF-2' ತೆಲುಗು, ತಮಿಳು ಟ್ರೈಲರ್ ಬಿಡುಗಡೆ ಮಾಡಲಿರುವ ರಾಮ್ ಚರಣ್, ಸೂರ್ಯ - KGF-2 Movie latest update

ಸಂಜೆ 6.45ಕ್ಕೆ 'ಕೆಜಿಎಫ್ ಚಾಪ್ಟರ್ 2' ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ತೆಲುಗು ಆವೃತ್ತಿಯನ್ನು ತೆಲುಗ ನಟ ರಾಮ್ ಚರಣ್ ಮತ್ತು ತಮಿಳು ಆವೃತ್ತಿಯನ್ನು ನಟ ಸೂರ್ಯ ಬಿಡುಗಡೆ ಮಾಡುವರು.

KGF-2 Trailer Launch By Ramacharan and Suriya
ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿರುವ ರಾಮ್ ಚರಣ್-ತಮಿಳು ಸ್ಟಾರ್ ನಟ ಸೂರ್ಯ
author img

By

Published : Mar 27, 2022, 1:44 PM IST

ನಟ ಯಶ್ ಮುಖ್ಯ ಭೂಮಿಕೆಯ, ಪ್ರಶಾಂತ್ ನೀಲ್ ನಿರ್ದೇಶನ, ವಿಜಯ್ ಕಿರಗಂದೂರ್ ನಿರ್ಮಾಣದ ಬಹುನಿರೀಕ್ಷಿತ 'ಕೆಜಿಎಫ್ ಚಾಪ್ಟರ್-2' ಸಿನಿಮಾ ಟ್ರೈಲರ್ ಇಂದು ಸಂಜೆ ಬಿಡುಗಡೆಯಾಗಲಿದೆ. ಬೆಂಗಳೂರಿನ ಹೋಟೆಲ್​ನಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಅವತರಣಿಕೆಯ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ಕನ್ನಡ ಆವೃತ್ತಿಯನ್ನು ನಟ ಶಿವರಾಜ್ ಕುಮಾರ್​​, ಹಿಂದಿ ಆವೃತ್ತಿಯನ್ನು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್, ತೆಲುಗು ಆವೃತ್ತಿಯನ್ನು ನಟ ರಾಮ್ ಚರಣ್ ಮತ್ತು ತಮಿಳು ಆವೃತ್ತಿಯನ್ನು ನಟ ಸೂರ್ಯ ಬಿಡುಗಡೆ ಮಾಡಲಿದ್ದಾರೆ. ಈ ವಿಷಯವನ್ನು ಚಿತ್ರತಂಡ ತಿಳಿಸಿದೆ.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಅಭಿನಯಿಸಿದ ಬಾಲಿವುಡ್‌ನ ಸಂಜಯ್ ದತ್, ರವೀನಾ ಟಂಡನ್, ಯಶ್, ಶ್ರೀನಿಧಿ ಶೆಟ್ಟಿ, ಮಲಯಾಳಂ ನಟ ಪೃಥ್ವಿರಾಜ್, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಉಪಸ್ಥಿತರಿರುವರು.

'ಕೆಜಿಎಫ್ ಚಾಪ್ಟರ್-2' ಸಿನಿಮಾ ಏ.14ರಂದು ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ.

ಇದನ್ನೂ ಓದಿ: ಮಾ.27ಕ್ಕೆ KGF-2 ಚಿತ್ರದ ಟ್ರೈಲರ್ ಬಿಡುಗಡೆ ಮಾಡ್ತಾರೆ ಕರುನಾಡ ಚಕ್ರವರ್ತಿ-ಕರಣ್ ಜೋಹರ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.