ಕಳೆದ ವರ್ಷ ಡಿಸೆಂಬರ್ 21 ರಂದು ಕೆಜಿಎಫ್ ಭಾಗ -1 ಬಿಡುಗಡೆಯಾಗಿತ್ತು. ಕೆಜಿಎಫ್ಗೆ ವರ್ಷದ ಹರ್ಷ ತುಂಬಿದ ಖುಷಿ ಒಂದೆಡೆಯಾದರೆ ಇದೇ ದಿನ ಕೆಜಿಎಫ್ ಭಾಗ 2ರ ಫಸ್ಟ್ಲುಕ್ ಬಿಡುಗಡೆಯಾಗಿರುವುದು ಅಭಿಮಾನಿಗಳ ಸಂತೋಷವನ್ನು ದುಪ್ಪಟ್ಟುಗೊಳಿಸಿದೆ.
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಭಾಗ- 2ರ ಫಸ್ಟ್ಲುಕ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟರ್ನಲ್ಲಿ ರಾಕಿ ಬಾಯ್ ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ರಕ್ಷಿಸಿ, ಗರುಡ ಸಾಮ್ರಾಜ್ಯ ಒಡೆದು ಹಾಕುವಂತೆ ಕಾಣುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ (ಇಂಗ್ಲೀಷ್), ಮಲಯಾಳಂ ಸೇರಿ ಒಟ್ಟು ಐದು ಭಾಷೆಗಳಲ್ಲಿ ಕೆಜಿಎಫ್ ಚಾಪ್ಟರ್ -2 ಚಿತ್ರದ ಪೋಸ್ಟರ್ ಅನಾವರಣ ಆಗಿದೆ. ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿದ್ದು, ಈ ಪೋಸ್ಟರ್ ಬಿಡುಗಡೆ ಆದ ಕೆಲವೇ ಕ್ಷಣದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದೆ. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣ ಆಗುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.