ಜೋಶ್, ಸುವರ್ಣ ಸುಂದರಿ, ರಮೇಶ್ ಅರವಿಂದ್ ಅವರ 100 ಸಿನಿಮಾಗಳಲ್ಲಿ ನಟಿಸಿರುವ ನಟಿ ಪೂರ್ಣ ಕನ್ನಡ ಪ್ರೇಕ್ಷಕರಿಗೆ ಪರಿಚಯ ಇರುವ ಹುಡುಗಿ. ಇವರು ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಕೂಡಾ ಹೆಚ್ಚು ಸಕ್ರಿಯರಾಗಿದ್ದಾರೆ.
ಪೂರ್ಣ ಅವರ ಪೂರ್ತಿ ಹೆಸರು ಶಮ್ನಾ ಕಸಿಮ್. ಇತ್ತೀಚೆಗೆ ಪೂರ್ಣ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿ ಬೆದರಿಕೆ ಒಡ್ಡಿದ್ಧಾರೆ. ಈ ಸಂಬಂಧ ಪೂರ್ಣ ಪೊಲೀಸರ ಮೊರೆ ಹೋಗಿದ್ದಾರೆ. ಕರೆ ಮಾಡಿದವರು ಪೂರ್ಣ ಅವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಶರತ್, ಅಶ್ರಫ್, ರಫೀಕ್ ಹಾಗೂ ರಮೇಶ್ ಎಂಬುವವರನ್ನು ಬಂಧಿಸಿದ್ದಾರೆ.
ಪೂರ್ಣ ಈಗ 4-5 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ 'ತಲೈವಿ' ಚಿತ್ರದಲ್ಲಿ ಅವರು ಜಯಲಲಿತಾ ಅವರಿಗೆ ಆಪ್ತರಾಗಿದ್ದು ಶಶಿಕಲಾ ಅವರ ಪಾತ್ರ ಮಾಡಿದ್ದು ಶೀಘ್ರದಲ್ಲೇ ಸಿನಿಮಾ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿದೆ.