ಸ್ಯಾಂಡಲ್ವುಡ್ನ ಟ್ರೆಂಡ್ ಸೆಟ್ಟರ್ ನಟ ಹಾಗು ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು 'ಬಾಜಿ' ಚಿತ್ರದ ನಂತರ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದರು. ಈಗ ಮತ್ತೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಹೊಸ ಚಿತ್ರದ ಟೈಟಲ್ ಪೊಸ್ಟರ್ ಅನ್ನು ಸೂಪರ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿ ತಮ್ಮ ಗುರುಗಳ ಮಗನ ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.
ಅಭಿಮನ್ಯು ನಟಿಸ್ತಿರುವ ಈ ಚಿತ್ರಕ್ಕೆ 'ಎಲ್ಲಿಗೆ ಪಯಣ ಯಾವುದೋ ದಾರಿ' ಎಂಬ ಕುತೂಹಲಭರಿತ ಟೈಟಲ್ ಇಡಲಾಗಿದೆ. ಈ ಟೈಟಲ್ಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗದಲ್ಲಿ ಕಾಶಿನಾಥ್ ಟ್ರೆಂಡ್ ಸೆಟ್ಟರ್ ಆಗಿದ್ರು. ಈಗ ಅವರ ಜಾಗಕ್ಕೆ ಮಗ ಅಭಿಮನ್ಯು ಬಂದಿದ್ದಾನೆ. ಅಭಿಮನ್ಯುವಿಗೆ ಜವಾಬ್ದಾರಿ ಜಾಸ್ತಿ ಇದೆ. ಅಪ್ಪನ ಹೆಸರು ಉಳಿಸುವ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದ್ರು.
ಇನ್ನೂ ಈ ಚಿತ್ರಕ್ಕೆ, 'ದೇವಕಿ' ಹಾಗೂ 'ಮಮ್ಮಿ' ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್ ಸೂರ್ಯ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಚಿಕ್ಕಮಗಳೂರಿನ ಹುಡುಗಿ ಸ್ಪೂರ್ತಿ ಆಯ್ಕೆ ಆಗಿದ್ದಾರೆ. ನವಂಬರ್ ಅಂತ್ಯದಲ್ಲಿ ಶೂಟಿಂಗ್ ಶುರು ಮಾಡಲು ನಿರ್ದೇಶಕ ಕಿರಣ್ ಸೂರ್ಯ ಪ್ಲಾನ್ ಮಾಡಿಕೊಂಡಿದ್ದಾರೆ.