ETV Bharat / sitara

ಚೀನಾದ ನಾಯಿ ಮಾಂಸ ಉತ್ಸವದ ವಿರುದ್ಧ ಧ್ವನಿ ಎತ್ತಿದ ನಟ ಕಾರ್ತಿಕ್​ ಆರ್ಯನ್​ - ನಾಯಿ ಮಾಂಸ ಹಬ್ಬದ ವಿರುದ್ಧ ಕಾರ್ತಿಕ್

ಚೀನಾದ ಯುಲಿನ್ ನಗರದಲ್ಲಿ ನಡೆದ ನಾಯಿ ಮಾಂಸ ಸೇವನೆಯ ಉತ್ಸವವನ್ನು ನಟ ಕಾರ್ತಿಕ್ ಆರ್ಯನ್ ಖಂಡಿಸಿದ್ದು, ತನ್ನ ಸಾಕು ನಾಯಿಗಳನ್ನು ಅಪ್ಪಿಕೊಂಡು ನಗುತ್ತಿರುವ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

kartik-aaryan-raises-voice-against-dog-meat-festival-in-yulin
ನಟ ಕಾರ್ತಿಕ್​ ಆರ್ಯನ್
author img

By

Published : Jun 24, 2020, 5:45 PM IST

ಮುಂಬೈ: ಚೀನಾದ ಯುಲಿನ್​​ ನಗರದಲ್ಲಿ ನಡೆದ ನಾಯಿ ಮಾಂಸ ಉತ್ಸವದ ವಿರುದ್ಧ ನಟ ಕಾರ್ತಿಕ್ ಆರ್ಯನ್ ಧ್ವನಿ ಎತ್ತಿದ್ದಾರೆ.

ಇನ್ಸ್ಟಾ ಗ್ರಾಮ್​ನಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಲವ್ ಆಜ್ ಕಲ್ ನಟ ನಾಯಿ ಮಾಂಸ ಸೇವನೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಫೊಟೋದಲ್ಲಿ, ಆರ್ಯನ್ ತನ್ನ ಎರಡು ಸಾಕು ನಾಯಿಗಳನ್ನು ತನ್ನ ತೋಳುಗಳಲ್ಲಿ ಅಪ್ಪಿಕೊಂಡಿದ್ದಾರೆ.

ಚಿತ್ರದ ಜೊತೆಗೆ "ಹರ್ ಸಾಲ್ ದಿಲ್ ಟೋಡ್ಟೆ ಹೈನ್ ಯೆ ಯುಲಿನ್ ಫೆಸ್ಟಿವಲ್ ವೇಲ್ (ಪ್ರತಿವರ್ಷ ಈ ಯುಲಿನ್ ಹಬ್ಬದ ಜನರು ನನ್ನ ಹೃದಯವನ್ನು ಮುರಿಯುತ್ತಾರೆ) #ಸ್ಟಾಪ್​​ಯುಲಿನ್​ #ಯುಲಿನ್​ಕೆಎಂಕೆಬಿ ಎಂದು ಬರೆದುಕೊಂಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಇವರ ಪೋಸ್ಟ್​ನ್ನು ಕಂಡು ಅನುಷ್ಕಾ ಶರ್ಮಾ ಮತ್ತು ಭೂಮಿ ಪೆಡ್ನೇಕರ್ ಸೇರಿದಂತೆ ಹಲವಾರು ಅಭಿಮಾನಿಗಳು ಹಾಗೂ ಅನುಯಾಯಿಗಳು ವಿವಾದಾತ್ಮಕ ಉತ್ಸವವನ್ನು ನಿಲ್ಲಿಸುವಂತೆ ಧ್ವನಿ ಎತ್ತಿದ ಆರ್ಯನ್ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.