ರಣಬೀರ್ ಕಪೂರ್ ನಟನೆಯ 'ಏ ದಿಲ್ ಹೇ ಮುಷ್ಕಿಲ್' ಚಿತ್ರ ನಿರ್ದೇಶಿಸಿದ್ದೇ ಕೊನೆ, ಆ ನಂತರ ಚಿತ್ರ ನಿರ್ದೇಶನದಿಂದ ದೂರವೇ ಉಳಿದುಬಿಟ್ಟಿದ್ದರು ಕರಣ್ ಜೋಹರ್. ಇದಕ್ಕೆ ಆ ಚಿತ್ರ ಫ್ಲಾಪ್ ಆಗಿದ್ದು ಒಂದು ಕಾರಣವಾದರೆ, ಧರ್ಮ ಪ್ರೊಡಕ್ಷನ್ಸ್ ಮೂಲಕ ಸತತವಾಗಿ ನಿರ್ಮಾಣದಲ್ಲೇ ತೊಡಗಿಸಿಕೊಂಡಿದ್ದು ಇನ್ನೊಂದು ಕಾರಣ. ಹಾಗಾಗಿ, ಚಿತ್ರ ನಿರ್ದೇಶನಕ್ಕೊಂದು ತಾತ್ಕಾಲಿಕ ವಿರಾಮ ಕೊಟ್ಟಿದ್ದರು ಕರಣ್.
ಇದೀಗ ಲಾಕ್ಡೌನ್ ಮುಗಿಯುತ್ತಿದ್ದಂತೆಯೇ, ಕರಣ್ ಜೋಹರ್ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು ಚಿತ್ರವನ್ನು ನಿರ್ಮಿಸುತ್ತಿರುವುದಷ್ಟೇ ಅಲ್ಲ. ಐದು ವರ್ಷಗಳ ನಂತರ ನಿರ್ದೇಶನವನ್ನೂ ಮಾಡಲು ಮುಂದಾಗಿದ್ದಾರೆ. ತಮ್ಮ ಟ್ರೇಡ್ಮಾರ್ಕ್ ಆಗಿರುವ ರೊಮ್ಯಾಂಟಿಕ್ ಕಾಮಿಡಿಯೊಂದನ್ನು ಅವರು ಕೈಗೆತ್ತಿಕೊಂಡಿದ್ದು, ಚಿತ್ರಕ್ಕೆ 'ರಾಕಿ ಔರ್ ರಾಣಿ ಕೇ ಪ್ರೇಮ್ ಕಹಾನಿ' ಎಂಬ ಹೆಸರನ್ನು ಇಟ್ಟಿದ್ದಾರೆ.
-
This ensemble cast makes this story even closer to my heart. Meet my all time favourite actors and the extraordinary family of Rocky and Rani! Coming to your screens in 2022! #RockyAurRaniKiPremKahani #RRKPK@aapkadharam #JayaBachchan @azmishabana @RanveerOfficial @aliaa08 pic.twitter.com/6jU2iiUCoR
— Karan Johar (@karanjohar) July 6, 2021 " class="align-text-top noRightClick twitterSection" data="
">This ensemble cast makes this story even closer to my heart. Meet my all time favourite actors and the extraordinary family of Rocky and Rani! Coming to your screens in 2022! #RockyAurRaniKiPremKahani #RRKPK@aapkadharam #JayaBachchan @azmishabana @RanveerOfficial @aliaa08 pic.twitter.com/6jU2iiUCoR
— Karan Johar (@karanjohar) July 6, 2021This ensemble cast makes this story even closer to my heart. Meet my all time favourite actors and the extraordinary family of Rocky and Rani! Coming to your screens in 2022! #RockyAurRaniKiPremKahani #RRKPK@aapkadharam #JayaBachchan @azmishabana @RanveerOfficial @aliaa08 pic.twitter.com/6jU2iiUCoR
— Karan Johar (@karanjohar) July 6, 2021
ವಿಶೇಷವೆಂದರೆ, ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇಬ್ಬರನ್ನೂ ಜೊತೆಯಾಗಿ ತೆರೆಮೇಲೆ ತರಲಿದ್ದಾರೆ. ರಣವೀರ್ ಮತ್ತು ಆಲಿಯಾ ಜೊತೆಯಾಗಿ ನಟಿಸುತ್ತಿರುವುದು ಹೊಸದೇನಲ್ಲ. ಇದಕ್ಕೂ ಮುನ್ನ ಗಲ್ಲಿಬಾಯ್ ಚಿತ್ರದಲ್ಲಿ ಇಬ್ಬರೂ ಜೋಡಿಯಾಗಿ ಕಾಣಿಸಿದ್ದರು. ಆ ಚಿತ್ರದ ನಂತರ ಮತ್ತೆ ಯಾವ ಚಿತ್ರದಲ್ಲಿ ಈ ಜೋಡಿ ರಿಪೀಟ್ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ರಾಕಿ-ರಾಣಿಯಾಗಿ ಅವರಿಬ್ಬರೂ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.
'ರಾಕಿ ಔರ್ ರಾಣಿ ಕೇ ಪ್ರೇಮ್ ಕಹಾನಿ' ಈ ಚಿತ್ರದಲ್ಲಿ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಆಜ್ಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ. ಈ ಪೈಕಿ ರಣವೀರ್ ಸಿಂಗ್ನ ಅಜ್ಜಿಯಾಗಿ ಜಯಾ ಬಚ್ಚನ್ ನಟಿಸಿದರೆ, ಆಲಿಯಾಳ ಅಜ್ಜ-ಅಜ್ಜಿಯಾಗಿ ಧರ್ಮೇಂದ್ರ ಮತ್ತು ಶಬಾನಾ ಆಜ್ಮಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇಬ್ಬರೂ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸುವುದರಲ್ಲಿ ಬ್ಯುಸಿಯಾಗಿದ್ದು, ಅದು ಮುಗಿಯುತ್ತಿದ್ದಂತೆಯೇ, ಸೆಪ್ಟೆಂಬರ್ನಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.