ಬಾಲಿವುಡ್ ನಟಿ ಆ್ಯಮಿ ಜಾಕ್ಸನ್ ಡಬಲ್ ಖುಷಿಯಲ್ಲಿದ್ದಾರೆ. ಒಂದು ಕಡೆ ಮದುವೆ ಸಂಭ್ರಮ. ಮತ್ತೊಂದೆಡೆ ತಾಯಿ ಆಗುತ್ತಿರುವ ಸಂತೋಷ.
ಈ ಬ್ರಿಟನ್ ಬ್ಯೂಟಿ ಆ್ಯಮಿ ಜಾಕ್ಸ್ನ್ ಮದುವೆ ಮುಂಚೆಯೇ ಅಮ್ಮ ಆಗುತ್ತಿರುವುದು ಎಲ್ಲರಿಗೂ ಗೊತ್ತು. ಅವರೇ ಈ ವಿಚಾರವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಎಲ್ಲರೆದರು ಹೇಳಿಕೊಂಡಿದ್ದರು. ಇದರಲ್ಲಿ ಬಚ್ಚಿಡುವುದೇನಿದೆ ಹೇಳಿ? ಎಲ್ಲರೂ ಮದುವೆ ಬಳಿಕ ಮಗು ಪಡೆಯುತ್ತಾರೆ. ಆದರೆ, ನಾವು ಮದುವೆ ಮುನ್ನ ಪಡೆಯುತ್ತಿದ್ದೇವೆ ಅಷ್ಟೇ ಎಂದಿದ್ದರು.
ಆ್ಯಮಿ ಕಳೆದ ವರ್ಷ ತಮ್ಮ ಬಾಯ್ಫ್ರೆಂಡ್ ಜಾರ್ಜ್ ಜತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡು, ನಾನು ಆಲ್ ರೆಡಿ ಎಂಗೇಜ್ ಅಂತಾ ಪರೋಕ್ಷವಾಗಿ ಹೇಳಿಕೊಂಡಿದ್ದರು. ಕೆಲವೊಂದು ಪ್ರೈವೇಟ್ ಪಾರ್ಟಿ, ಪಬ್ಗಳಲ್ಲಿ ಕಾಣಿಸಿಕೊಂಡು ತಮ್ಮ ರಿಲೇಷನ್ಶಿಪ್ನ್ನು ಹಚ್ಚು ಹಸಿರಾಗಿಸಿಕೊಂಡಿದ್ದರು. ಕಳೆದ ತಿಂಗಳು ಇನ್ಸ್ಟಾಗ್ರಾಂನಲ್ಲಿ ತಮ್ಮ ಪ್ರಗ್ನೆನ್ಸಿ ರಿವೀಲ್ ಮಾಡಿದ್ದ ಈ ನಟಿ, ಜಾರ್ಜ್ ಜತೆಗಿನ ಪ್ರೀತಿಯ ಗುಟ್ಟನ್ನು ರಟ್ಟು ಮಾಡಿದ್ರು.
- View this post on Instagram
What a spectacular #PronoviasFashionShow Congratulations Amandine and the entire @pronovias team ✨
">
ಸದ್ಯ ತಾಯ್ತನದ ಪೂರ್ವದ ದಿನಗಳ ಪ್ರತಿ ಕ್ಷಣಗಳನ್ನು ಎಂಜಾಯ್ ಮಾಡುತ್ತಿರುವ ಆ್ಯಮಿ, ವುಡ್ಬಿ ಜತೆ ಸುತ್ತಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಫ್ಯಾಷನ್ ಶೋವೊಂದರಲ್ಲೂ ಹಾಜರಾಗಿದ್ದರು. ಬಾರ್ಸಿಲೋನಾದಲ್ಲಿ ನಡೆದ ಒನ್ಓಸಿಯನ್ ಕ್ಲಬ್ ಫ್ಯಾಷನ್ ಶೋನಲ್ಲಿ ತುಂಬು ಗರ್ಭ ಹೊತ್ತುಕೊಂಡೇ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಖುಷಿ ಖುಷಿಯಾಗೇ ಹಂಚಿಕೊಂಡಿದ್ದಾರೆ.
ಇನ್ನು ಆ್ಯಮಿ ಜಾಕ್ಸನ್ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಕನ್ನಡದ ದಿ ವಿಲನ್ ಚಿತ್ರಕ್ಕೂ ಆ್ಯಮಿ ನಾಯಕಿಯಾಗಿದ್ದರು. ಇದೇ ಮೇ 5 ಕ್ಕೆ ಲಂಡನ್ನಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಿದೆ.