ಬೆಂಗಳೂರು: ಕನ್ನಡ ಚಿತ್ರರಂಗದ ಹಾಗೂ ಕಿರುತೆರೆಯ ಹಿರಿಯ ಕಲಾವಿದ ಉಮೇಶ್ ಹೆಗ್ಡೆ ಇಂದು ಇಹಲೋಕ ತ್ಯಜಿಸಿದ್ದಾರೆ.
ಉಮೇಶ್ ಹೆಗ್ಡೆಯವರಿಗೆ ನಿನ್ನೆ ಹೃದಯವಾಗಿತ್ತು. ಹೀಗಾಗಿ, ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಅವರು ಕೊನೆಯುಸಿರೆಳೆದಿದ್ದಾರೆ.
ಉಮೇಶ್ ಹೆಗ್ಡೆ ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರು ನೂರಾರು ಧಾರಾವಾಹಿಗಳು, ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಿಂದ ನಟನೆ ಶುರುಮಾಡಿ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದರು.
ಸದ್ಯ ಉಮೇಶ್ ಹೆಗ್ಡೆ, ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಇಡಲಾಗಿದೆ. ಅಂತಿಮ ದರ್ಶನ ಪಡೆದ ನಂತರ ಕುಟುಂಬಸ್ಥರು ಸಂಪ್ರದಾಯದ ಪ್ರಕಾರ ವಿಧಿವಿಧಾನಗಳನ್ನು ನೆರವೇರಿಸಲು ತೀರ್ಮಾನಿಸಿದ್ದಾರೆ.
ಓದಿ: ಹುಟ್ಟುಹಬ್ಬಕ್ಕೆ ಶುಭ ಕೋರಿದ ಅಭಿಮಾನಿಗಳಿಗೆ ಮನೆಯಿಂದ ಹೊರ ಬಂದು ಧನ್ಯವಾದ ಅರ್ಪಿಸಿದ ಬಿಗ್ ಬಿ