1994ರಲ್ಲಿ ಕನ್ನಡ ಸೇರಿದಂತೆ ಬೇರೆ ಭಾಷೆಗಳ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ಲಾಕಪ್ ಡೆತ್ ಸಿನಿಮಾ ದೇವರಾಜ್ ಅಭಿನಯದಲ್ಲಿ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು.
ಇದೀಗ 'ಲಾಕಪ್ ಡೆತ್' ಗಾಂಧಿನಗರದಲ್ಲಿ ಮತ್ತೊಮ್ಮೆ ಸುದ್ದಿಯಾಗ್ತಿದೆ. ಈ ಚಿತ್ರದ ಟೈಟಲ್ ಮರು ಬಳಕೆಯಾಗುತ್ತಿದೆ. ಜಗ್ಗೇಶ್ ಅಭಿನಯದ 8 ಎಂಎಂ ಚಿತ್ರ ನಿರ್ದೇಶನ ಮಾಡಿದ್ದ ಹರಿಕೃಷ್ಣ ಅವರು 'ಲಾಕಪ್ ಡೆತ್' ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗಾಗಲೇ ಶೀರ್ಷಿಕೆಯನ್ನ ಹರಿಕೃಷ್ಣ ಮತ್ತು ಚಿತ್ರತಂಡ ರಿಜಿಸ್ಟರ್ ಮಾಡಿಸಿದ್ದಾರೆ. ಸದ್ಯಕ್ಕೆ ಟೈಟಲ್ ರಿಜಿಸ್ಟರ್ ಮಾಡಿಸಿರೋ ನಿರ್ದೇಶಕ ಹರಿಕೃಷ್ಣ , ಸದ್ಯದಲ್ಲೇ ಚಿತ್ರದ ತಾರಾ ಬಳಗದ ವಿವರ ಹಂಚಿಕೊಳ್ಳಲಿದ್ದಾರೆ.
ಮೋಗ್ಲಿ ಟಾಕೀಸ್ ಬ್ಯಾನರ್ ಅಡಿಯಲ್ಲಿ ಮೋಹನ್ ಗೌಡ ಚಿತ್ರ ನಿರ್ಮಿಸಲಿದ್ದಾರೆ. ಅಂದಿನ 'ಲಾಕಪ್ ಡೆತ್' ಸಿನಿಮಾಗೂ, ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.