2020 ಹೊಸವರ್ಷದ ಆರಂಭದಲ್ಲೇ ಸ್ಯಾಂಡಲ್ವುಡ್ನಲ್ಲಿ ಅತ್ಯುತ್ತಮ ಕಥೆಯ ಚಿತ್ರಗಳು ಬರುತ್ತಿದ್ದು, ಪ್ರೇಕ್ಷಕ ಪ್ರಭುಗಳು ಹೊಸಬರ ಚಿತ್ರಗಳನ್ನು ಕೈಹಿಡಿದು ಮುನ್ನಡೆಸುತ್ತಿದ್ದಾರೆ.
ಈಗಾಗಲೇ ಲವ್ ಮಾಕ್ಟೈಲ್, ಜಂಟಲ್ ಮನ್, ದಿಯಾ ಚಿತ್ರಗಳಿಗೆ ಪ್ರೇಕ್ಷಕರು ಮನಸೋತಿದ್ದು, ಮೂರು ಚಿತ್ರಗಳು ಉತ್ತಮ ಪ್ರದರ್ಶನ ಕಾಣ್ತಿವೆ. ಇದಲ್ಲದೆ ಇಂದು 11 ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಇವುಗಳಲ್ಲಿ ಕುತೂಹಲ ಮೂಡಿಸಿದ್ದ 'ಸಾಗುತ ದೂರ ದೂರ' ಚಿತ್ರತಂಡವು ಗುರುವಾರ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಗಾಗಿ ಪ್ರೀಮಿಯರ್ ಶೋ ಏರ್ಪಡಿಸಿತ್ತು.
ಚಿತ್ರ ನೋಡಿದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಚಿತ್ರವನ್ನು ಹಾಡಿ ಹೊಗಳಿದರು. ಸಿನಿಮಾದಲ್ಲಿ ನಟಿಸಿರುವ ಪ್ರತಿಯೊಂದು ಪಾತ್ರವೂ ಅವರ ಪಾತ್ರಗಳಿಗೆ ಜೀವ ತುಂಬಿದ್ದು, ತಾಯಿ ಮಗನ ಸೆಂಟಿಮೆಂಟ್ ನೋಡಿದವರ ಪ್ರತಿಯೊಬ್ಬರ ಕಣ್ಣಂಚನ್ನು ಒದ್ದೆ ಮಾಡುತ್ತೆ ಎಂದಿದ್ದಾರೆ.
ಇನ್ನು 'ಸಾಗುತ ದೂರ ದೂರ' ಚಿತ್ರವನ್ನು ಕಿರುತೆರೆಯಲ್ಲಿ ಪಳಗಿರುವ ರವಿತೇಜ, ಕಿರುತೆರೆಯ ಬರಹಗಾರ ವೆಂಕಟ್ ಜೊತೆ ಸೇರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಹೇಶ್ ಸಿದ್ದು ,ನವೀನ್, ಜಾಹ್ನವಿ ಜ್ಯೋತಿ, ಅಪೇಕ್ಷಾ ಪುರೋಹಿತ್, ಉಷಾ ಭಂಡಾರಿ ಹಾಗೂ ಮಾಸ್ಟರ್ ಆಶಿಕ್ ಆರ್ಯ ಅಭಿನಯಿಸಿದ್ದು, ಮಣಿಕಾಂತ್ ಕದ್ರಿ ಸಂಗೀತ ಚಿತ್ರಕ್ಕೆ ಜೀವ ತುಂಬಿದೆ.
ಇಂದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗ್ತಿದ್ದು, ಪ್ರೇಕ್ಷಕ ಪ್ರಭುಗಳು ಈ ಚಿತ್ರದ ಜೊತೆ ಸಾಗ್ತಾರ ಕಾದು ನೋಡಬೇಕಿದೆ.