ಚಂದನವನದ ತಾರೆಯರಾದ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಡಿ-ಬಾಸ್ ದರ್ಶನ್, ಪ್ರಜ್ವಲ್ ದೇವರಾಜ್, ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್, ಗಣೇಶ್, ದುನಿಯಾ ವಿಜಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಟಿ ನಿತ್ಯಾ ಮೆನನ್, ರಚಿತಾ ರಾಮ್, ರಶ್ಮಿಕಾ ಮಂದಣ್ಣ ಹೀಗೆ ಸಾಕಷ್ಟ ನಟ-ನಟಿಯರ ಇಳಿವಯಸ್ಸಿನ ಚಿತ್ರಗಳು ಹರಿದಾಡುತ್ತಿವೆ.
ವಯಸ್ಸಾದ ಮೇಲೆ ನಾವು ಹೇಗೆ ಕಾಣಿಸುತ್ತೇವೆ ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇರುತ್ತೆ. ಈಗ ಬಂದಿರುವ ಫೇಸ್ ಆ್ಯಪ್ ಜನರ ಈ ಕುತೂಹಲ ತಣಿಸುತ್ತಿದೆ. ಯಂಗ್ ಏಜ್ನ ತಮ್ಮ ಚಿತ್ರಗಳನ್ನು ಓಲ್ಡ್ ಏಜ್ ಆಗಿ ಪರಿವರ್ತಿಸಿ ಅಚ್ಚರಿ ಮೂಡಿಸುತ್ತಿದೆ.
ಮತ್ತೊಂದು ವಿಶೇಷ ಏನಂದ್ರೆ ಈ ಆ್ಯಪ್ ಎಲ್ಲರನ್ನು ಮುದುಕರನ್ನಾಗಿಸುತ್ತದೆ. ಆದರೆ,ಸೆಂಚುರಿ ಸ್ಟಾರ್ ಶಿವಣ್ಣ, ರಮೇಶ್ ಅರವಿಂದ್ ಹಾಗೂ ಸುಮನ್ ರಂಗನಾಥ್ ಅವರ ಲುಕ್ಗಳು ಮಾತ್ರ ಅಷ್ಟೆನೂ ಚೇಂಜ್ ಆಗಿಲ್ಲ. 57 ನೇ ವಯಸ್ಸಿನ ಶಿವಣ್ಣ ಚಿರಯುವಕನಂತೆ ಕಂಗೊಳಿಸ್ತಿದ್ದಾರೆ. 54 ರ ಹರೆಯದಲ್ಲೂ ರಮೇಶ್ ಅರವಿಂದ್ಗೆ ಸ್ಟಿಲ್ ಯಂಗ್ ಆಗಿದ್ದಾರೆ. ಹಾಫ್ ಸೆಂಚೂರಿ ಬಾರಿಸಿರುವ ಸುಮನ್ ರಂಗನಾಥ್ ಕಾಲೇಜ್ ಹುಡುಗಿಯಂತೆ ಕಾಣ್ತಾರೆ. ಇದು ಅವರ ಅಭಿಮಾನಿಗಳ ಕುತೂಹಲ ಕೆರಳಿಸುವುದರ ಜತೆಗೆ ನಮ್ಮ ನಟರು ಯಾವಾಗಲೂ ಯಂಗ್ ಎಂದು ಹೇಳಿಕೊಳ್ಳುವಂತೆ ಮಾಡಿದೆ.