ನಿರೀಕ್ಷಿತ ಬಿಗ್ ಬಾಸ್ ಸೀಸನ್ 8ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೌದು, ಫೆಬ್ರವರಿಯಲ್ಲಿ ಆರಂಭವಾಗಲಿದೆ ಎಂಬ ಮಾತು ಈಗ ನಿಜವಾಗಲಿದೆ. ಯಶಸ್ವಿಯಾಗಿ ಏಳು ಸೀಸಸ್ಗಳನ್ನು ಪೂರೈಸಿರುವ ಬಿಗ್ ಬಾಸ್ ಇದೀಗ ಎಂಟನೇ ಸೀಸನ್ ಆರಂಭಕ್ಕೆ ಅಣಿಯಾಗಿದೆ.
ಕಿಚ್ಚ ಸುದೀಪ್ ನಿರೂಪಣೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಫೆಬ್ರವರಿ 21ರಿಂದ ಆರಂಭವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9 ಗಂಟೆಯಿಂದ 10.30ರ ವರೆಗೆ ಪ್ರಸಾರವಾಗಲಿದೆ.
![ಅಂತೂ ಹೊರಬಿತ್ತು ಬಿಗ್ ಬಾಸ್-8 ಆರಂಭದ ದಿನ](https://etvbharatimages.akamaized.net/etvbharat/prod-images/kn-bng-01-bb8-datefix-photo-ka10018_30012021222426_3001f_1612025666_470.jpg)
ವಿಭಿನ್ನ ಪ್ರೋಮೋ ಮೂಲಕ ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಪ್ರೋಮೋದಲ್ಲಿ ನಂಬರ್ 8ರ ಕಾನ್ಸೆಪ್ಟ್ ಇಟ್ಟುಕೊಂಡು ಬಿಗ್ ಬಾಸ್ ಫೆಬ್ರವರಿಯಿಂದ ಶುರುವಾಗ್ತಿದೆ ಎಂಬ ಸಂದೇಶ ನೀಡಿದ್ದರು ಕಿಚ್ಚ ಸುದೀಪ್.
ಸೀಸನ್ 1ರಿಂದ ಇಲ್ಲಿವರೆಗಿನ ಇಲ್ಲಿಯವರೆಗಿನ ಸೀಸನ್ಗಳಲ್ಲಿ ಕಳೆದ ಸೀಸನ್ ವಿಭಿನ್ನವಾಗಿ ಮೂಡಿಬಂದು ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು.
![ಅಂತೂ ಹೊರಬಿತ್ತು ಬಿಗ್ ಬಾಸ್-8 ಆರಂಭದ ದಿನ](https://etvbharatimages.akamaized.net/etvbharat/prod-images/kn-bng-01-bb8-datefix-photo-ka10018_30012021222426_3001f_1612025666_467.jpg)
ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಪ್ರತೀ ಬಾರಿಯಂತೆ ಈ ಬಾರಿಯೂ ವಿಭಿನ್ನವಾಗಿ ಪ್ರೋಮೋ ಮೂಡಿಬಂದಿತ್ತು. ಒಟ್ಟಿನಲ್ಲಿ ಬಿಗ್ ಬಾಸ್ ಮತ್ತೆ ಬರುತ್ತಿದ್ದು, ಈ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ದೊಡ್ಡ ಮನರಂಜನೆಯ ಕಿಕ್ ಸಿಗಲಿದೆ.