ETV Bharat / sitara

ಕೊನೆಗೂ ರಿಲೀಸ್​​ ಆಯ್ತು ಬಿಗ್​ ಬಾಸ್ ಸೀಸನ್​ 8​​ ಪ್ರೋಮೋ - sudeep in kannada bigboss

ಕೆಲವು ದಿನಗಳ ಹಿಂದೆ ಬಿಗ್​ ಬಾಸ್​​ ಪ್ರೋಮೋ ರಿಲೀಸ್​​ ಮಾಡುವುದಾಗಿ ಹೇಳಿದ್ದ ಕಲರ್ಸ್​​ ಕನ್ನಡ ಬ್ಯುಸಿನೆಸ್​ ಹೆಡ್​​ ಪರಮೇಶ್ವರ್​​ ಗುಂಡ್ಕಲ್​​​​​ ಇಂದು ಕನ್ನಡದ ಬಿಗ್​ ಬಾಸ್​ ಪ್ರೋಮೋ ರಿಲೀಸ್​​ ಮಾಡಿದ್ದಾರೆ.

ಕೊನೆಗೂ ರಿಲೀಸ್​​ ಆಯ್ತು ಬಿಗ್​ ಬಾಸ್​​ ಪ್ರೋಮೋ

author img

By

Published : Jan 28, 2021, 6:59 PM IST

ಕನ್ನಡ ಬಿಗ್​ ಬಾಸ್​ ಸೀಸನ್​ 8 ಆಗ ಶುರುವಾಗತ್ತೆ ಈಗ ಶುರುವಾಗತ್ತೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಗುಡ್​​ ನ್ಯೂಸ್​​ ಸಿಕ್ಕಿದೆ. ಕೆಲವು ದಿನಗಳ ಹಿಂದೆ ಬಿಗ್​ ಬಾಸ್​​ ಪ್ರೋಮೋ ರಿಲೀಸ್​​ ಮಾಡುವುದಾಗಿ ಹೇಳಿದ್ದ ಕಲರ್ಸ್​​ ಕನ್ನಡ ಬ್ಯುಸಿನೆಸ್​ ಹೆಡ್​​ ಪರಮೇಶ್ವರ್​​ ಗುಂಡ್ಕಲ್​​​​​ ಇಂದು ಕನ್ನಡದ ಬಿಗ್​ ಬಾಸ್​ ಪ್ರೋಮೋ ರಿಲೀಸ್​​ ಮಾಡಿದ್ದಾರೆ.

ಬಿಗ್​ ಬಾಸ್​​ ಶುರುವಾಗುತ್ತಿದೆ ಎಂಬುದನ್ನು ವಿಶೇಷ ರೀತಿಯಲ್ಲಿ ಪ್ರೋಮೋ ಮೂಲಕ ಹೇಳಲಾಗಿದೆ. ಸುದೀಪ್​​ ಜೆರಾಕ್ಸ್​​ ಮಿಷನ್​​​ ಬಳಿ ನಿಂತು ಒಂದು ಪ್ರಿಂಟ್​​ ತೆಗೆದುಕೊಡು ಎಂದು ಹೇಳುತ್ತಾರೆ. ಆಗ ಅಸಿಸ್ಟೆಂಟ್ ಪಾತ್ರ ಮಾಡಿರುವ ಮಜಾಭಾರತ ಖ್ಯಾತಿಯ ಶಿವು​​​ ಪ್ರಿಂಟ್​​ ತೆಗೆದುಕೊಡುತ್ತಾರೆ. ಅದ್ರಲ್ಲಿ ಪದೇ ಪದೆ 8 ಎಂಬ ಅಕ್ಷರ​​ ಪ್ರಿಂಟ್​​ ಆಗುತ್ತದೆ. ಈ ಮೂಲಕ ಬಿಗ್​ ಬಾಸ್​​ ಸೀಸನ್​​ 8 ಬರುತ್ತಿದೆ ಎಂದು ತಿಳಿಸಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ : 'ಕಿಲಾಡಿ'ಗೆ ವಿಲನ್​​​ ಆಗ್ತಾರಾ ಅರ್ಜುನ್​ ಸರ್ಜಾ?

ಇದೇ ಪ್ರೋಮೋದಲ್ಲಿ ಮತ್ತೊಂದು ಮಾತು ಹೇಳಿರುವ ಸುದೀಪ್​​, ಸ್ವಲ್ಪ ದಿನ ರಿಲ್ಯಾಕ್ಸ್​​​ ಮಾಡ್ಕೊಂಡು ಬರ್ತಿನಿ ಕಣ್ಣಾಕ್ಬಿಡ್ಬೇಡಿ ಎಂದಿದ್ದಾರೆ. ಈ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಬಿಗ್​ ಬಾಸ್​​ ಸೀಸನ್​ 8 ಪ್ರಾರಂಭವಾಗಲಿದೆ ಎಂದು ಸುಳಿವು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.