ETV Bharat / sitara

'ಕೂಗಿ ಕರೆದರೂ ಕೇಳದಷ್ಟು ದೂರದಲ್ಲಿದ್ದೀರಿ,ನನ್ನನ್ನು ಕ್ಷಮಿಸಿ ಬಿಡಿ' ಜಗ್ಗಣ್ಣ ಹೀಗೆ ಹೇಳಿದ್ದೇಕೆ?

ಅಪ್ಪನ ಬಿರುನುಡಿಯಿಂದ ಕೋಪಗೊಂಡಿದ್ದ ಜಗ್ಗೇಶ್​, ರಾತ್ರೋರಾತ್ರಿ ಮನೆ ಬಿಟ್ಟು ಮೈಸೂರು ಸೇರಿದ್ದರಂತೆ. ಆಟೋರಿಕ್ಷಾ ಓಡಿಸುತ್ತ ಬದುಕಿನ ಕನಸು ಕಾಣುತ್ತಿದ್ದ ಅವರು, ​ ಒಂದು ಸ್ವಂತ ಆಟೋ ಖರೀದಿಸಿ ದಿನ 100ರೂ ದುಡಿಯುತ್ತಿದ್ದರಂತೆ. ತನ್ನನ್ನು ಅಪಮಾನಿಸಿದ ಅಪ್ಪನ ಮುಂದೆ ಮೀಸೆ ತಿರುವಿ ಬದುಕಬೇಕು ಎಂಬುದು ಅವರ ಅಂದು ಮಾಡಿದ ಶಪಥ.

ಜಗ್ಗೇಶ್
author img

By

Published : May 11, 2019, 1:44 PM IST

ನವರಸ ನಾಯಕ ಜಗ್ಗೇಶ್​ ಈಗ ಕನ್ನಡದ ಮೇರು ಕಲಾವಿದ. ಚಿತ್ರರಂಗದಲ್ಲಿ ಮೂರು ದಶಕಗಳನ್ನು ಸವೆಸಿರುವ ಈ ಹಾಸ್ಯ ನಟ, ಜೀವನದಲ್ಲಿ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ!

ಜಗ್ಗೇಶ್​, ಸಮಯ ಸಿಕ್ಕಾಗಲೆಲ್ಲಾ ತನ್ನ ನೋವಿನ ದಿನಗಳನ್ನು ಬಿಚ್ಚಿಡುತ್ತಿರುತ್ತಾರೆ. ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಗಾಂಧಿ ನಗರ ಸುತ್ತಾಡಿದ್ದು. ದೊಡ್ಡವರಿಂದ ಬೈಗುಳ ತಿಂದಿದ್ದನ್ನು ಜಗ್ಗಣ್ಣ ಯಾವತ್ತೂ ಮರೆತಿಲ್ಲ. ಬಣ್ಣದ ಲೋಕಕ್ಕೆ ಬರುವ ಮುಂಚೆಯೇ ಜೀವನ ಕಟ್ಟಿಕೊಳ್ಳಲು ಆಟೋ ರಿಕ್ಷಾ ಓಡಿಸಿದ್ದರಂತೆ. ಈ ವಿಚಾರವನ್ನು ನಿನ್ನೆಯಷ್ಟೇ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.

ಅದು 1979/80 ಕಾಲ. 'ನಿನ್ನ ಅನ್ನ ನೀನೇ ದುಡಿದು ತಿನ್ನು' ಎನ್ನುವ ಅಪ್ಪನ ಬಿರುನುಡಿಯಿಂದ ಕೋಪಗೊಂಡಿದ್ದ ಜಗ್ಗೇಶ್​, ರಾತ್ರೋರಾತ್ರಿ ಮನೆಬಿಟ್ಟು ಮೈಸೂರು ಸೇರಿದ್ದರಂತೆ. ಆಟೋರಿಕ್ಷಾ ಓಡಿಸುತ್ತ ಜೀವನದ ಕನಸು ಕಾಣುತ್ತಿದ್ದ ಅವರು, ​ ಒಂದು ಸ್ವಂತ ಆಟೋ ಪಡೆದು ಪ್ರತಿ ದಿನ 100 ರೂಪಾಯಿ ದುಡಿಯುವ ಮನುಷ್ಯನಾಗಿ, ಅಪಮಾನಿಸಿದ ಅಪ್ಪನ ಮುಂದೆ ಮೀಸೆ ತಿರುವಿ ಬದುಕಬೇಕು ಎಂದು ಶಪಥ ಮಾಡಿದ್ದರಂತೆ. ಆದರೆ, ಜಗ್ಗೇಶ್​ ಇಂದು ನೂರಾರು ಆಟೋಗಳ ಮಾಲೀಕನಾಗುವಷ್ಟು ಬೆಳೆದಿದ್ದಾರೆ.

ಅಂದು ಅಪ್ಪನ ಬುದ್ಧಿಯ ಮಾತುಗಳನ್ನು ಇಂದು ನೆನಪಿಸಿಕೊಳ್ಳುವ ಜಗ್ಗೇಶ್​, 'ಮಗ ಬದುಕು ಕಲಿಯಲಿ ಎಂದು ಅಪ್ಪ ಆಗ ಆಡಿದ ಮಾತೆಲ್ಲಾ ಅಣಕ ಅಪಮಾನದಂತೆ ಕೇಳುತ್ತಿತ್ತು. ಅದರೆ ಈಗ? ನೀವು ಬೈದು ಬುದ್ಧಿ ಹೇಳುತ್ತಿದ್ದ ಮಗ ಇಂದು ತಾತನಾಗಿ ಬದುಕಿನ ಪುಟಗಳ ಮೆಲುಕು ಹಾಕಿದಾಗ ಅಪ್ಪ ನೀನು ಎಂಥ ಶ್ರೇಷ್ಟ ಮನುಜ ಅನ್ನಿಸಿತು. ತಪ್ಪಾಯಿತು ಕ್ಷಮಿಸಿ ಅಂದರೂ ಕೇಳದಷ್ಟು ದೂರದೂರಿಗೆ ಹೋಗಿಬಿಟ್ಟೆ. ಕ್ಷಮೆ ಕೇಳಲು ನಾನು ನೀನಿರುವ ಜಾಗಕ್ಕೆ ಬರಬೇಕು! ಇನ್ನು ಅನೇಕ ಕಾರ್ಯವಿದೆ ಮುಗಿಸಿ ಮಾಗಿದಾಗ ನಿನ್ನಲ್ಲಿಗೆ ಬರುವೆ! ಆಗಲಾದರು ಕ್ಷಮಿಸು!ಎಷ್ಟೇ ಆದರು ನಾನು ನಿನ್ನ ಮಗನಲ್ಲವೇ ?' ಎಂದು ಭಾವನೆಗಳಿಗೆ ಬರಹರೂಪ ಕೊಟ್ಟಿದ್ದಾರೆ.

'ಒಂದಂತೂ ನಿನಗೆ ಸಮಾಧಾನ ಆಗುತ್ತದೆ. ಅಪ್ಪ, ನಾನು ಶ್ರಮಪಟ್ಟು ನಿನ್ನ ವಂಶದ ಹೆಸರು ಉಳಿಸಿರುವೆ. ನೀನು, ಅಮ್ಮ ಗರ್ವಪಡುತ್ತೀರಿ ನನ್ನ ಸಾಧನೆ ಕಂಡು! love you pa..ever loving son. ತಂದೆತಾಯಿ ನಡೆದಾಡುವ ದೇವರು, ಬದುಕಿದ್ದಾಗಲೇ ಅವರನ್ನು ಗೌರವಿಸಿ. ಕಳೆದುಕೊಂಡ ಮೇಲೆ ಪರಿತಪಿಸಿದರೂ ಮತ್ತೆ ಸಿಗಲಾರರು' ಎಂದು ಜನರಲ್ಲಿ ಕಳಕಳಿಯಿಂದ ಕೇಳಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.