ಕಳೆದ ಕೆಲ ದಿನಗಳ ಹಿಂದೆ ತಾನು ಗರ್ಭಿಣಿಯಾದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ಬಾಲಿವುಡ್ ನಟಿ ಕಲ್ಕಿ ಕೊಚ್ಲಿನ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಗು ಜನನದ ಸಂತಸದಲ್ಲಿರುವ ಕಲ್ಕಿ ಪುಟ್ಟ ಕಂದಮ್ಮನಿಗೆ 'ಸಫೊ' ಎಂದು ಹೆಸರಿಟ್ಟಿದ್ದು, ತಮಗೆ ಶುಭ ಕೋರಿದ ಎಲ್ಲ ಸ್ನೇಹಿತರಿಗೂ ಇನ್ಸ್ಟಾಗ್ರಾಂನಲ್ಲಿ ಧನ್ಯವಾದಗಳನ್ನ ತಿಳಿಸಿದ್ದಾರೆ. "ದಯವಿಟ್ಟು ಸಫೊ ಅವರನ್ನು ಸ್ವಾಗತಿಸಿ. ಜನನ 07/02/20. ಅವಳು ನನ್ನ ಗರ್ಭಾಶಯದಲ್ಲಿ ಮೆಮೊನಂತೆ ಸುತ್ತಿ 9 ತಿಂಗಳುಗಳನ್ನು ಕಳೆದಿದ್ದಾಳೆ. ಅವಳಿಗೆ ಈಗ ಸ್ವಲ್ಪ ಜಾಗವನ್ನು ನೀಡೋಣ" ಎಂಬ ಅಡಿಬಹರವನ್ನು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಮಗುವಿಗೆ ಜನ್ಮ ನೀಡುವುದು ಸುಲಭವಲ್ಲ. ಇಂತಹ ಭಯಾನಕ ನೋವನ್ನು ಅನುಭವಿಸಿ ಒಂದು ಜೀವಕ್ಕೆ ಜನ್ಮನೀಡುವ ಎಲ್ಲ ಮಹಿಳೆಯರನ್ನು ನಾನು ಗೌರವಿಸುತ್ತೇನೆ. ಈ ಪ್ರಕ್ರಿಯೆಯಲ್ಲಿ ಮಹಿಳೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ನೋವು ಅನುಭವಿಸುತ್ತಾರೆ. ಮಗುವಿನ ಜನನದ ನಂತರ ಮಹಿಳೆಯರು ಗುಣಮುಖವಾಗಲೂ ಸಾಕಷ್ಟು ಸಮಯ ಬೇಕಾಗುತ್ತದೆ. ಈ ವೇಳೆ, ಅವರಿಗೆ ಇಡೀ ಸಮುದಾಯ ಬೆಂಬಲ ನೀಡಬೇಕು ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ ಕಲ್ಕಿ ಎರಡು ಪಾದಗಳ ಚಿತ್ರವನ್ನೂ ಸಹ ಪೋಸ್ಟ್ ಮಾಡಿದ್ದಾರೆ. ಮಗುವಿನ ತಂದೆಯಾದ ಕಲ್ಕಿಯ ಗೆಳೆಯ ಗೈ ಹರ್ಷ್‌ಬರ್ಗ್ ಕೂಡ ಅದೇ ಚಿತ್ರವನ್ನು ಪೋಸ್ಟ್ ಮಾಡಿಕೊಂಡು ಸಂತಸವನ್ನ ಶೇರ್ ಮಾಡಿಕೊಂಡಿದ್ದಾರೆ.