ETV Bharat / sitara

ಮಾಲ್ಡೀವ್ಸ್​​​ ಸುಂದರ ಕ್ಷಣಗಳನ್ನು ಹಂಚಿಕೊಂಡ ಕಾಜಲ್ ಅಗರ್​​ವಾಲ್ - Kajal Aggarwal Honeymoon in Maldives

ಮಗಧೀರ ಖ್ಯಾತಿಯ ನಟಿ ಕಾಜಲ್ ಅಗರ್​​ವಾಲ್ ತಮ್ಮ ಪತಿ ಗೌತಮ್ ಕಿಚ್ಲು ಅವರೊಂದಿಗೆ ಮಾಲ್ಡೀವ್ಸ್​ ತೆರಳಿದ್ದಾರೆ. ಅಲ್ಲಿನ ಕೆಲವೊಂದು ಫೋಟೋಗಳನ್ನು ಕಾಜಲ್ ಅಗರ್​ವಾಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Kajal Aggarwal in Maldives
ಕಾಜಲ್ ಅಗರ್​​ವಾಲ್
author img

By

Published : Nov 10, 2020, 1:06 PM IST

ಅಕ್ಟೋಬರ್​​ 30 ರಂದು ಗೌತಮ್ ಕಿಚ್ಲು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್​ ನಟಿ ಕಾಜಲ್ ಅಗರ್​​ವಾಲ್​ ಇದೀಗ ಪತಿಯೊಂದಿಗೆ ಮಾಲ್ಡೀವ್ಸ್​​​​​​​ಗೆ ಹಾರಿದ್ಧಾರೆ. ಮಾಲ್ಡೀವ್ಸ್​ ಸುಂದರ ತಾಣಗಳಲ್ಲಿ ಈ ಜೋಡಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.

Kajal Aggarwal in Maldives
ಗೌತಮ್ ಕಿಚ್ಲು ಜೊತೆ ಕಾಜಲ್ ಅಗರ್​​​ವಾಲ್

ಕಳೆದ ತಿಂಗಳು ಮುಂಬೈನಲ್ಲಿ ಕಾಜಲ್ ಹಾಗೂ ಗೌತಮ್, ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಮೂರು ದಿನಗಳ ಹಿಂದೆ ಮಾಲ್ಡೀವ್ಸ್​​​ಗೆ ತೆರಳಿರುವ ಈ ಜೋಡಿ, ಸಮುದ್ರ ತೀರದಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾಜಲ್ ಅಗರ್​ವಾಲ್ ಕೆಂಪು ಔಟ್​​ಫಿಟ್​​​​ನಲ್ಲಿ ಬಹಳ ಗ್ಲ್ಯಾಮರಸ್ ಆಗಿ ಫೋಸ್ ನೀಡಿದ್ಧಾರೆ. ಪತಿಯೊಡನೆ ನಿಂತಿರುವ ಮತ್ತೊಂದು ಫೋಟೋವನ್ನು ಕಾಜಲ್ ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ಕಾಜಲ್ ಅಗರ್​​ವಾಲ್ ಜನಿಸಿದ್ದು ಪಂಜಾಬಿ ಕುಟುಂಬದಲ್ಲಾದರೂ ಆಕೆ ಹೆಸರು ಮಾಡಿದ್ದು ತೆಲುಗು ಚಿತ್ರರಂಗದಲ್ಲಿ. ಹಿಂದಿಯ ಕೌನ್​ ಹೋ ಗಯಾ ಚಿತ್ರದ ಮೂಲಕ ಸಿನಿಜರ್ನಿ ಆರಂಭಿಸಿದ ಕಾಜಲ್ ಅಗರ್​​ವಾಲ್​ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ಟಾಲಿವುಡ್​​ಗೆ ಬಂದರು. ತಮಿಳು ಚಿತ್ರಗಳಲ್ಲೂ ಕಾಜಲ್ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಅವಕಾಶಗಳು ದೊರೆತದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ. ಮಗಧೀರ, ಆರ್ಯ 2, ಡಾರ್ಲಿಂಗ್, ಮಿ.ಪರ್ಫೆಕ್ಟ್, ಬ್ಯುಸ್ನೆಸ್ ಮ್ಯಾನ್, ಮಾರಿ, ಬ್ರಹ್ಮೋತ್ಸವಂ, ಕೈದಿ ನಂ 150 ಹಾಗೂ ಇನ್ನಿತರ ಸಿನಿಮಾಗಳು ಕಾಜಲ್​​​ಗೆ ಒಳ್ಳೆ ಹೆಸರು ತಂದುಕೊಟ್ಟ ಚಿತ್ರಗಳು.

Kajal Aggarwal in Maldives
ಕಾಜಲ್ ಅಗರ್​​ವಾಲ್ ಮದುವೆ ಸಂಭ್ರಮ

ಮದುವೆಯಾದ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸುತ್ತೇನೆ ಎಂದು ಈಗಾಗಲೇ ಹೇಳಿರುವ ಕಾಜಲ್, ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ. ಆಚಾರ್ಯ, ಮೋಸಗಾಳ್ಳು, ಇಂಡಿಯನ್ 2, ಪ್ಯಾರಿಸ್ ಪ್ಯಾರಿಸ್ ಚಿತ್ರಗಳಲ್ಲಿ ಕಾಜಲ್ ನಟಿಸುತ್ತಿದ್ದಾರೆ.

Kajal Aggarwal in Maldives
ಮಗಧೀರ ಚಿತ್ರದಲ್ಲಿ ಕಾಜಲ್ ಅಗರ್​​ವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.