ಬಾಲಿವುಡ್ ಗಾಸಿಪ್‌ಗಳಲ್ಲಿ 'ಗಲ್ಲಿ ಬಾಯ್' ಖ್ಯಾತಿಯ ರಣವೀರ್ ಸಿಂಗ್ ಕೂಡ ಒಬ್ಬರು. ಇವರ ಸಿನಿಮಾಗಳು, ಫೋಟೋಗಳು, ಡೇಟಿಂಗ್, ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ಗಳು ಟ್ರೋಲಿಗರಿಗೆ ಆಗಾಗ ಆಹಾರವಾಗುತ್ತಿದೆ. ಇದೀಗ ಇಂತಹದ್ದೇ ಕುತೂಹಲಕಾರಿ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
WWE ಖ್ಯಾತಿಯ ಜಾನ್ ಸೀನ ಯಾರಿಗೆ ಗೊತ್ತಿಲ್ಲ ಹೇಳಿ? ಇವರ ಬಡಿದಾಟ ನೋಡಲು ಯುವಕರಿಂದ ಹಿಡಿದು ಎಲ್ಲಾ ವಯೋಮಾನದವರೂ ಕಾತರದಿಂದ ಕಾಯ್ತಾರೆ. ಇದೀಗ ಇದೇ ಜಾನ್ಸೀನ ನೆಟ್ಟಿಗರು ಹುಬ್ಬೇರುವಂತೆ ಮಾಡಿದ್ದಾರೆ.
ಸೀನ ಇದ್ದಕ್ಕಿದ್ದಂತೆ ಬಾಲಿವುಡ್ ಸೆಲೆಬ್ರಿಟಿ ರಣವೀರ್ ಸಿಂಗ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಈ ಪೋಸ್ಟ್ಗೆ ಯಾವುದೇ ಕ್ಯಾಪ್ಶನ್ ನೀಡಿಲ್ಲ. ತನ್ನದೇ ಫೋಟೋಗೆ ಕಮೆಂಟ್ ಮಾಡಿರುವ ರಣವೀರ್, can't see me (ನಾನು ಕಾಣಿಸ್ತಿಲ್ಲ) ಎಂದು ಬರೆದಿದ್ದಾರೆ.
- " class="align-text-top noRightClick twitterSection" data="
">
ಜಾನ್ ಸೀನ ಹಾಕಿರುವ ಫೋಟೋದಲ್ಲಿ ರಣವೀರ್ ಸಿಂಗ್ ಕಲರ್‌ಫುಲ್ ಅಂಗಿ ಧರಿಸಿದ್ದು, ಡಿಫರೆಂಟ್ ಲುಕ್ನಲ್ಲಿ ಕಾಣಿಸಿದ್ದಾರೆ. ಜಾನ್ ಸೀನ ರಣವೀರ್ ಫೋಟೋ ಮಾತ್ರವಲ್ಲದೆ ಈ ಹಿಂದೆ ಶಿಲ್ಪಾ ಶೆಟ್ಟಿ, ಸುಶಾಂತ್ ಸಿಂಗ್ ರಜಪೂತ್, ಶಾರುಕ್ ಖಾನ್ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.