ETV Bharat / sitara

ಬ್ಯಾಟ್​ ಹಿಡಿದ ಜಾಹ್ನವಿ ಕಪೂರ್: 'ಮಿಸ್ಟರ್ ಅಂಡ್ ಮಿಸ್ ಮಹಿ'ಗಾಗಿ ಫುಲ್​ ಮಿಂಚಿಂಗ್​ - ರಾಜ್‌ಕುಮಾರ್ ರಾವ್ ಚಿತ್ರ

ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಕಳೆದ ವರ್ಷ ‘ಮಿಸ್ಟರ್ ಅಂಡ್ ಮಿಸಸ್ ಮಹಿ’ ಚಿತ್ರವನ್ನು ಘೋಷಿಸಿತ್ತು. ನಿನ್ನೆ ಚಿತ್ರತಂಡ ಶೂಟಿಂಗ್ ಸಮಯದಲ್ಲಿನ ಹಲವು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಕುರಿತಾದ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ಮಿಸ್ಟರ್ ಅಂಡ್ ಮಿಸ್ ಮಹಿ
ಮಿಸ್ಟರ್ ಅಂಡ್ ಮಿಸ್ ಮಹಿ
author img

By

Published : Jan 27, 2022, 6:59 AM IST

ಮುಂಬೈ: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಿನಿಮಾಗಳಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. 'ದೋಸ್ತಾನಾ 2' ಸಿನಿಮಾದಲ್ಲಿ ನಟಿಸುತ್ತಿರುವ ಜಾಹ್ನವಿ, ಇದೀಗ ಮತ್ತೊಂದು ಚಿತ್ರ 'ಮಿಸ್ಟರ್ ಅಂಡ್ ಮಿಸ್ ಮಹಿ' ಶೂಟಿಂಗ್​ಗೆ ರೆಡಿಯಾಗುತ್ತಿದ್ದಾರೆ.

ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಕಳೆದ ವರ್ಷ ‘ಮಿಸ್ಟರ್ ಅಂಡ್ ಮಿಸಸ್ ಮಹಿ’ ಚಿತ್ರವನ್ನು ಘೋಷಿಸಿತ್ತು. ಸಿನಿಮಾ ಘೋಷಣೆಯಾದಾಗಿನಿಂದ ಅಭಿಮಾನಿಗಳು ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ನಿನ್ನೆ ಚಿತ್ರತಂಡ ಶೂಟಿಂಗ್ ಸಮಯದಲ್ಲಿನ ಹಲವು ಫೋಟೋಗಳನ್ನು ಹಂಚಿಕೊಂಡಿದ್ದು, ಜಾಹ್ನವಿ ಕಪೂರ್ ಸಹ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫಸ್ಟ್​ ಲುಕ್​ ಶೇರ್​ ಮಾಡಿದ್ದಾರೆ.

ಮಿಸ್ಟರ್ ಅಂಡ್ ಮಿಸ್ ಮಹಿ ಚಿತ್ರದ ಫಸ್ಟ್​ ಲುಕ್​ ಬಿಡುಗಡೆ

ಕ್ರಿಕೆಟ್ ಕಥಾಂಶವಿರುವ ಈ ಚಿತ್ರಕ್ಕಾಗಿ ಜಾಹ್ನವಿ ಕಪೂರ್ ತರಬೇತಿ ಪಡೆಯುತ್ತಿದ್ದಾರಂತೆ. ಚಿತ್ರದಲ್ಲಿ ಜಾಹ್ನವಿ ಕಪೂರ್ ಜೊತೆ ರಾಜ್‌ಕುಮಾರ್ ರಾವ್ ನಟಿಸಿದ್ದಾರೆ. ಇವರಿಬ್ಬರೂ ಈ ಹಿಂದೆ 'ರೂಹಿ' ಸಿನಿಮಾದಲ್ಲಿ ನಟಿಸಿದ್ದರು. ಮಿಸ್ಟರ್ ಅಂಡ್ ಮಿಸ್ ಚಿತ್ರವನ್ನು ಶರಣ್ ಶರ್ಮಾ ನಿರ್ದೇಶಿಸಲಿದ್ದಾರೆ. ಎಲ್ಲ ಅಂದುಕೊಂಡತೆ ಆದರೆ, 2022ರ ಅಕ್ಟೋಬರ್​ 7 ರಂದು ಚಿತ್ರ ತೆರೆಕಾಣಲಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.