ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಿರುವ ಸರಿಗಮಪ ಸೀಸನ್ 17ರಲ್ಲಿ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದಿವ್ಯಾಂಗ ಹೆಣ್ಣುಮಕ್ಕಳು ಹಾಡಿ ಎಲ್ಲರ ಗಮನ ಸೆಳೆದಿದ್ದರು. ಈ ಇಬ್ಬರು ಹೆಣ್ಣು ಮಕ್ಕಳ ಕಷ್ಟ ಕೇಳಿದ ನಟ ಜಗ್ಗೇಶ್ ಮನೆ ಕಟ್ಟಿಕೊಡುವುದಾಗಿ ಹೇಳಿದ್ರು. ಇದೀಗ ಜಗ್ಗೇಶ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಜಗ್ಗೇಶ್, ರತ್ನಮ್ಮ ಮತ್ತು ಮಂಜಮ್ಮನವರಿಗೆ ಮನೆಯನ್ನು ಕಟ್ಟಿಸಿದ್ದಾರೆ. ಇದೇ ಮಾರ್ಚ್ 12ರಂದು ಆ ಮನೆಯ ಗೃಹ ಪ್ರವೇಶವಿದೆ. ಈ ಕಾರ್ಯಕ್ರಮಕ್ಕೆ ನಟ ಜಗ್ಗೇಶ್ ಮತ್ತು ಪತ್ನಿ ಪರಿಮಳ ಭಾಗವಹಿಸಲಿದ್ದಾರೆ. ಈ ಬಗ್ಗೆ ಸ್ವತಃ ಜಗ್ಗೇಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮನೆ ನಿರ್ಮಿಸಿಕೊಟ್ಟ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಈಗಾಗಲೇ ಜಗ್ಗೇಶ್ ಬರುವಿಕೆಗೆ ಮಧುಗಿರಿ ತಾಲೂಕಿನ ಡಿವಿಹಳ್ಳಿಯಲ್ಲಿ ಸ್ವಾಗತದ ಬ್ಯಾನರ್ಗಳು ರಾರಾಜಿಸುತ್ತಿವೆ.