ETV Bharat / sitara

'ತೋತಾಪುರಿ' ತಿನ್ನಿಸುವುದಕ್ಕೆ ಬರ್ತಾ ಇದ್ದಾರೆ ನವರಸ ನಾಯಕ : ಜ.24ರಂದು ಆಡಿಯೋ ಟೀಸರ್ ಬಿಡುಗಡೆ - Jaggesh acted movie 'Thotapuri'

'ತೋತಾಪುರಿ' ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯಲ್ಲಿಯೂ ಹೆಚ್ಚು ಸದ್ದು ಮಾಡುತ್ತಿರುವ ಸಿನಿಮಾ. 'ನೀರ್ ದೋಸೆ' ಸಿನಿಮಾ ಬಳಿಕ ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ ಪ್ರಸಾದ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಕಾಮಿಡಿ ವಿತ್ ಫ್ಯಾಮಿಲಿ ಸಿನಿಮಾ ಇದಾಗಿದೆ..

Jaggesh acted movie 'Thotapuri'
'ತೋತಾಪುರಿ' ತಿನ್ನಿಸುವುದಕ್ಕೆ ಬರ್ತಾ ಇದ್ದಾರೆ ನವರಸ ನಾಯಕ
author img

By

Published : Jan 21, 2022, 6:51 PM IST

'ನೀರ್ ದೋಸೆ' ಮೂಲಕ ಮೋಡಿ ಮಾಡಿರುವ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ ಪ್ರಸಾದ್, ಇದೀಗ 'ತೋತಾಪುರಿ' ಮೂಲಕ ಹವಾ ಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ 'ತೋತಾಪುರಿ' ಚಿತ್ರತಂಡದಿಂದ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ.

'ತೋತಾಪುರಿ' ತಿನ್ನಿಸುವುದಕ್ಕೆ ಬರ್ತಾ ಇದ್ದಾರೆ ನವರಸ ನಾಯಕ

ಯಾವಾಗ 'ತೋತಾಪುರಿ' ಸಿನಿಮಾದ ಟೀಸರ್ ಬಿಡುಗಡೆ ಆಗುತ್ತೆ ಅಂತಾ ಕಾಯುತ್ತಿದ್ದ ಜಗ್ಗೇಶ್ ಅಭಿಮಾನಿಗಳಿಗೆ ಈ ವಿಷ್ಯ ಕೇಳಿದ್ರೆ ಖುಷಿಯಾಗೋದಂತು ಖಂಡಿತಾ.

Jaggesh acted movie 'Thotapuri'
'ತೋತಾಪುರಿ' ತಿನ್ನಿಸುವುದಕ್ಕೆ ಬರ್ತಾ ಇದ್ದಾರೆ ನವರಸ ನಾಯಕ

'ತೋತಾಪುರಿ' ಆಡಿಯೋ ಹಾಗೂ ಟೀಸರ್ ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಇದೇ ಜನವರಿ 24ರಂದು 'ತೋತಾಪುರಿ' ಆಡಿಯೋ ಟೀಸರ್ ಬಿಡುಗಡೆ ಆಗುತ್ತಿದೆ. ನವರಸ ನಾಯಕ ಜಗ್ಗೇಶ್ ಜೊತೆ ಅದಿತಿ ಪ್ರಭುದೇವ ಜೋಡಿಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಬಹು ನಿರೀಕ್ಷಿತ 'ಜೇಮ್ಸ್' ಸಿನಿಮಾದಲ್ಲಿ ಅಣ್ಣಾವ್ರ ಮಕ್ಕಳ ಸಮಾಗಮ!!

ಇದರ ಜೊತೆಗೆ ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್, ರೋಹಿತ್ ಪದಕಿ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ.

'ತೋತಾಪುರಿ' ಸಿನಿಮಾ ಪಾರ್ಟ್ ಒನ್ ಹಾಗೂ ಪಾರ್ಟ್ 2 ಅಂತಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಈ ಚಿತ್ರದ ಹಾಡುಗಳಿಗೆ ವಿಜಯಪ್ರಸಾದ್ ಸಾಹಿತ್ಯವಿದೆ.

ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಈ ಹಿಂದೆ ಶ್ರಾವಣಿ ಸುಬ್ರಮಣ್ಯ ಹಾಗೂ ಶಿವಲಿಂಗ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಕೆ ಎ ಸುರೇಶ್ ಈ ಸಿನಿಮಾವನ್ನ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಟೈಟಲ್ ಹಾಗೂ ಸಣ್ಣ ತುಣುಕುಗಳಿಂದ ಸದ್ದು ಮಾಡುತ್ತಿರುವ 'ತೋತಾಪುರಿ' ಸಿನಿಮಾವನ್ನು ಕೊರೊನಾ ಕಡಿಮೆ ಆದ ಬಳಿಕ, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ಕೆ ಎ ಸುರೇಶ್​​ ಪ್ಲ್ಯಾನ್​​ ಮಾಡಿದ್ದಾರೆ.

ಜಾಹೀತಾರು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.