ಧನುಷ್ ಅಭಿನಯದ ಬಹುನಿರೀಕ್ಷಿತ 'ಜಗಮೇ ತಂತ್ರಂ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಟೀಸರ್ಗೆ ಧನುಷ್ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಬಿಡುಗಡೆಯಾದ 5 ಗಂಟೆ ಅವಧಿಯಲ್ಲಿ 1.7 ಮಿಲಿಯನ್ ಮಂದಿ ಈ ಟೀಸರ್ ವೀಕ್ಷಿಸಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ಇಷ್ಟು ದಿನ ಎಲ್ಲಿದ್ರು ಪೂಜಾ ಗಾಂಧಿ? ಈಗೇನು ಮಾಡ್ತಿದಾರೆ ಅಂತಾ ಅವರೇ ಹೇಳ್ತಾರೆ ಕೇಳಿ!
'ಜಗಮೇ ತಂತ್ರಂ' ಚಿತ್ರದಲ್ಲಿ ಧನುಷ್ ಸುರುಳಿ ಎಂಬ ಗ್ಯಾಂಗ್ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಹುತೇಕ ಭಾಗ ಲಂಡನ್ನಲ್ಲಿ ಚಿತ್ರೀಕರಣವಾಗಿದ್ದು 1:16 ನಿಮಿಷದ ಈ ಟೀಸರ್ನಲ್ಲಿ ಆ್ಯಕ್ಷನ್ ಥ್ರಿಲ್ಲರ್ ದೃಶ್ಯಗಳನ್ನು ನೋಡಬಹುದು. ಇದು ಧನುಷ್ ಹಾಗೂ ಕಾರ್ತಿಕ್ ಸುಬ್ಬರಾಜು ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮೊದಲನೆ ಸಿನಿಮಾವಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಆದರೆ ಕೊರೊನಾ ಲಾಕ್ಡೌನ್ ಕಾರಣ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಈ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಸುಮಾರು 190 ದೇಶಗಳಲ್ಲಿ ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಪ್ರಸಾರವಾಗಲಿದ್ದು ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ. ಚಿತ್ರವನ್ನು ಎಸ್.ಶಶಿಕಾಂತ್ ನಿರ್ಮಿಸಿದ್ದು, ಚಕ್ರವರ್ತಿ ರಾಮಚಂದ್ರ ಸಹ ನಿರ್ಮಾಪಕರಾಗಿದ್ದಾರೆ. ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಈ ಸಿನಿಮಾಗೆ ಕಥೆ ಬರೆದಿದ್ದಾರೆ.