ಬಾಲಿವುಡ್ನ ನಟಿ ಲಾರಾ ದತ್ತ ಹಂಡ್ರೆಡ್ ಎಂಬ ವೆಬ್ ಸಿರೀಸ್ನಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಹಾಟ್ ಬೆಡಗಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿರುವುದಾಗಿ ತಿಳಿಸಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಇವರು, ಈ ಬದುಕಿನಲ್ಲಿ ಜನರ ಜೊತೆ ಹೋರಾಟ ಮಾಡಿ ಹೇಗೆ ಬದುಕಬೇಕು ಎಂಬುದೇ ನನ್ನ ಪಾತ್ರ ಎಂದಿದ್ದಾರೆ. ಈ ವೆಬ್ ಸಿರೀಸ್ನಲ್ಲಿ ಎಸಿಪಿ ಸೌಮ್ಯ ಪಾತ್ರಕ್ಕೆ ಲಾರಾ ಬಣ್ಣಹಚ್ಚಿದ್ದಾರೆ. ಇನ್ನು ತಾವು ಪೊಲೀಸ್ ಪಾತ್ರ ಮಾಡಲು ಕುತೂಹಲಕರವಾಗಿದ್ದರು ಎಂಬುದನ್ನೂ ತಿಳಿಸಿದ್ದಾರೆ.
- " class="align-text-top noRightClick twitterSection" data="">
ಚಿತ್ರಕ್ಕೆ ರುಚಿ ನರೈನ್, ಅಶುತೋಶ್ ಆಕ್ಷನ್ ಕಟ್ ಹೇಳಿದ್ದು, ಲಾರಾ ದತ್ತ ಜೊತೆ ರಿಂಕು ರಾಜ್ಗುರು ಕೂಡ ಬಣ್ಣ ಹಚ್ಚಿದ್ದಾರೆ. ಈಗಗಲೇ ಈ ವೆಬ್ ಸಿರೀಸ್ನ ಟ್ರೈಲರ್ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ.