ETV Bharat / sitara

'ರೇಮೊ' ಬಿಡುಗಡೆಗೂ ಮುನ್ನವೇ ಮತ್ತೊಂದು ಹೊಸ ಪ್ರಾಜೆಕ್ಟ್​​​​ಗೆ ಸಹಿ ಹಾಕಿದ ಇಶಾನ್​​​​​​​​​​ - Ishan acting in Telugu web series

ತೆಲುಗು ವೆಬ್ ಸೀರೀಸ್​​​​​ನಲ್ಲಿ ಇಶಾನ್ ನಟಿಸುತ್ತಿದ್ದು ಬಾಹುಬಲಿ ಚಿತ್ರವನ್ನು ನಿರ್ಮಿಸಿದ್ದ ಅರ್ಕಾ ಮೀಡಿಯಾ ವರ್ಕ್ಸ್ ಈ ಸೀರೀಸ್ ನಿರ್ಮಿಸುತ್ತಿದೆ. ಸದ್ಯಕ್ಕೆ ಇಶಾನ್ ಪವನ್ ಒಡೆಯರ್ ನಿರ್ದೇಶನದಲ್ಲಿ 'ರೇಮೊ' ಚಿತ್ರದಲ್ಲಿ ನಟಿಸುತ್ತಿದ್ದು ಈ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಮುಂದಿನ ಪ್ರಾಜೆಕ್ಟ್​​​​ನಲ್ಲಿ ಭಾಗಿಯಾಗಲಿದ್ದಾರೆ.

Ishan signed for new project
ಇಶಾನ್​​​​​​​​​​
author img

By

Published : Dec 16, 2020, 6:57 AM IST

ಪವನ್ ಒಡೆಯರ್ ನಿರ್ದೇಶಿಸುತ್ತಿರುವ 'ರೇಮೊ' ಸಿನಿಮಾ ಬಹುತೇಕ ಪೂರ್ಣಗೊಂಡಿದೆ ಮುಂದಿನ ವರ್ಷ ಜನವರಿಯಲ್ಲಿ ಉಳಿದ ಭಾಗದ ಚಿತ್ರೀಕರಣ ಮುಗಿಸಿ ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಪವನ್ ಒಡೆಯರ್ ತಿಳಿಸಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಇಶಾನ್​​​​ ಮತ್ತೊಂದು ಹೊಸ ಪ್ರಾಜೆಕ್ಟ್​​​ಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

Ishan signed for new project
ಇಶಾನ್​​​​​​​​​​

ಇಶಾನ್​​​​​ಗೆ 'ರೇಮೊ' ಎರಡನೇ ಚಿತ್ರ. ಇದಕ್ಕೂ ಮುನ್ನ ಅವರು ಪುರಿ ಜಗನ್ನಾಥ್ ನಿರ್ದೇಶನದ 'ರೋಗ್' ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದರು. ಇಶಾನ್ ನೋಡಲು ಬಾಲಿವುಡ್​​​ ಹೀರೋನಂತೆ ಕಾಣುತ್ತಾರೆ. ಆದರೆ ಅವರು ಬೆಂಗಳೂರು ಹುಡುಗ. ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ. ವಜ್ರಕಾಯ, ದಿ ವಿಲನ್ ಸಿನಿಮಾಗಳ ನಿರ್ಮಾಪಕ ಸಿ.ಆರ್. ಮನೋಹರ್​​​​ ಅವರ ಸೋದರ ಸಂಬಂಧಿ ಇಶಾನ್. ವೈಜಾಗ್​​​ನಲ್ಲಿ ಒಂದು ವರ್ಷದ ಕಾಲ ಆ್ಯಕ್ಟಿಂಗ್ ತರಬೇತಿ ಪಡೆದಿರುವ ಇಶಾನ್, ತರಬೇತಿ ಮುಗಿಯುತ್ತಿದ್ದಂತೆ ಪುರಿ ಜಗನ್ನಾಥ್ ನಿರ್ದೇಶನದ ಚಿತ್ರದಲ್ಲಿ ನಾಯಕನಾಗಿ ಆಯ್ಕೆಯಾದರು. ಅದಕ್ಕೂ ಮುನ್ನ ಅವರು ಉಪೇಂದ್ರ ಅಭಿನಯದ 'ಶಿವಂ' ಚಿತ್ರದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ನಟಿಸಿದ್ದರು. 'ರೋಗ್'​ ಸಿನಿಮಾ ಕನ್ನಡದೊಂದಿಗೆ ತೆಲುಗಿನಲ್ಲಿ ಕೂಡಾ ಬಿಡುಗಡೆಯಾಗಿತ್ತು. ತೆಲುಗು ಪ್ರೇಕ್ಷಕರಿಗೂ ಇಶಾನ್ ಪರಿಚಯವಿರುವುದರಿಂದ 'ರೇಮೊ' ಸಿನಿಮಾ ಕೂಡಾ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ.

Ishan signed for new project
'ರೋಗ್' ಚಿತ್ರೀಕರಣದ ವೇಳೆ ಪುರಿ ಜಗನ್ನಾಥ್ ಜೊತೆ ಇಶಾನ್

ಇದನ್ನೂ ಓದಿ: ಅಮೀರ್ ಖಾನ್ ಪುತ್ರ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ: ಜುನೈದ್​ ಖಾನ್​ ಚೊಚ್ಚಲ ಚಿತ್ರ ಯಾವುದು ಗೊತ್ತೆ?

'ರೇಮೊ' ಸಿನಿಮಾ ಬಿಡುಗಡೆಯಾಗುವ ಮುನ್ನವೇ ಇಶಾನ್ ಮತ್ತೊಂದು ತೆಲುಗು ಪ್ರಾಜೆಕ್ಟ್​​ಗೆ ಸಹಿ ಹಾಕಿದ್ದಾರೆ. ಇನ್ನೂ ಹೆಸರಿಡದ ತೆಲುಗು ವೆಬ್​ ಸೀರೀಸ್​​​ನಲ್ಲಿ ಇಶಾನ್ ನಟಿಸುತ್ತಿದ್ದಾರೆ. ಇದು ಬಿಗ್ ಬಜೆಟ್ ವೆಬ್ ಸೀರೀಸ್ ಆಗಿದ್ದು 'ಬಾಹುಬಲಿ' ಚಿತ್ರವನ್ನು ನಿರ್ದೇಶಿಸಿದ್ದ ಅರ್ಕಾ ಮೀಡಿಯಾ ವರ್ಕ್ಸ್​​​ ಈ ವೆಬ್ ಸೀರೀಸ್ ನಿರ್ಮಿಸುತ್ತಿದೆ. ತಮಿಳು ನಟ ಶರತ್ ಸೇರಿದಂತೆ ಈ ಸೀರೀಸ್​​ನಲ್ಲಿ ದೊಡ್ಡ ತಾರಾಗಣವೇ ಇರಲಿದ್ದು 'ರೇಮೊ' ಚಿತ್ರೀಕರಣ ಮುಗಿಯುತ್ತಿದ್ದಂತೆ ವೆಬ್ ಸೀರೀಸ್​​ನಲ್ಲಿ ಭಾಗವಹಿಸಲು ಇಶಾನ್​​​ ಹೈದರಾಬಾದ್​​​ಗೆ ತೆರಳಲಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.