ವಿಜಯ ಪ್ರಸಾದ್ ನಿರ್ದೇಶನದಲ್ಲಿ ಸೆಟ್ಟೇರಿರುವ ಪರಿಮಳ ಲಾಡ್ಜ್ ರೂಂ.ನಂ.231 ಸಿನಿಮಾ ಸೆನ್ಸಾರ್ ಮಂಡಳಿಯನ್ನು ಕಡೆಗಣಿಸಿದೆ ಎನ್ನಲಾಗುತ್ತಿದೆ. ಮೊನ್ನೆ ಬಿಡುಗಡೆಯಾಗಿರುವ ಪರಿಮಳ ಲಾಡ್ಜ್ ಟೀಸರ್ನಲ್ಲಿ ಬಳಿಸಿರುವ ಸಂಭಾಷಣೆಯೇ ಈ ಗುಮಾನಿಗೆ ಕಾರಣ.
ಪರಿಮಳ ಲಾಡ್ಜ್ ರೂಂ ನಂ. 231 ಟ್ರೈಲರ್ ವೀಕ್ಷಿಸಿದರೆ ಈ ಒಂದು ಗುಮಾನಿ ಬರುತ್ತದೆ. ಅದಕ್ಕೆ ಕಾರಣ ವಿಜಯಪ್ರಸಾದ್ ಅವರು ಬರೆದಿರುವ ಸಂಭಾಷಣೆ. ಮೊನ್ನೆ ಪರಿಮಳ ಲಾಡ್ಜ್ ಟೀಸರ್ ಬಿಡುಗಡೆ ಮಾಡಿ ಮನಸಾರೆ ನಕ್ಕರು ಡಿ ಬಾಸ್ ದರ್ಶನ್.
ಟೀಸರ್ನಲ್ಲೇನಿದೆ ?
ಅದು ಪೊಲೀಸ್ ಸ್ಟೆಷನ್ನಲ್ಲಿ ನಡೆಯುವ ಪ್ರಸಂಗ. ಹಿರಿಯ ನಟ ದತ್ತಣ್ಣ ಪೊಲೀಸ್ ಆಫೀಸರ್ ಖುರ್ಚಿಯಲ್ಲಿ ಆಸೀನರಾಗಿರುತ್ತಾರೆ. ಮೊದಲು ನೀನಾಸಂ ಸತೀಶ್ ಮಾತು,ಅದಕ್ಕೆ ಉತ್ತರವಾಗಿ ಸುಮನ್ ರಂಗನಾಥ್ ಹೇಳುವ ‘ಹೆಲ್ಮೆಟ್’ ವಿಚಾರದ ಮಾತು, ಆಮೇಲೆ ಲೂಸ್ ಮಾದ ಯೋಗಿ ಉಪಯೋಗಿಸುವ ಆಂಗ್ಲ ಪದ, ಆಮೇಲೆ ಬುಲ್ಲೆಟ್ ಮಾತಿಗೆ ದತ್ತಣ್ಣ ಪ್ರತಿಕ್ರಿಯೆ, ನಂತರ ಹೇಮಾ ದತ್ತ್ ಅವರ ಕವಚ ಹಾಗೂ ಕಾಚ ಪದಗಳ ಬಳಕೆ, ಮತ್ತೆ ಬುಲ್ಲೆಟ್ ಪ್ರಕಾಶ್ 'ನನಗೆ ಹೋಟೆಲ್ನಲ್ಲಿ ಪೀಪಿ ಊದುವುದಕ್ಕೆ ಬಿಡುತ್ತಿಲ್ಲ' ಎನ್ನುವ ಸಂಭಾಷಣೆಯ ದೃಶ್ಯ ಸೆನ್ಸಾರ್ ಮಂಡಳಿ ಕಣ್ಣು ತಪ್ಪಿಸಿಯೇ ತೋರಿಸಿದ್ದಾರೆ ಎನ್ನಿಸುತ್ತೆ.
ಸಿನಿಮಾ ಇಲ್ಲ ಒಂದು ಅಥವಾ ಅರ್ಧ ನಿಮಿಷದ ದೃಶ್ಯವೇ ಆಗಲಿ ಅದಕ್ಕೆ ಸೆನ್ಸಾರ್ ಮಾಡಿಸಬೇಕು. ಸೆನ್ಸಾರ್ ಮುಂದೆ ಹೋಗಿದ್ದರೆ ಮೊದಲು ಸೆನ್ಸಾರ್ ಪತ್ರ ತೋರಿಸಬೇಕಿತ್ತು.ಆದರೆ, ಈ ನಿಯಮಗಳನ್ನೆಲ್ಲ ಗಾಳಿಗೆ ತೂರಿದಂತಿರುವ ನಿರ್ದೇಶಕ ವಿಜಯಪ್ರಸಾದ್, ವಿವಾದವನ್ನು ತಲೆ ಮೇಲೆ ಎಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಮುಂದೆ ಈ ಸಿನಿಮಾ ಸೆನ್ಸಾರ್ ಮುಂದೆ ಬಂದಾಗ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ. ಡಬಲ್ ಮೀನಿಂಗ್ 'ಪರಿಮಳ ಲಾಡ್ಜ್'ನಲ್ಲಿ ಕೆಲವು ಮಾತುಗಳನ್ನು ಡೈರೆಕ್ಟ್ ಆಗಿಯೇ ಹೇಳಲಾಗಿದೆ.
ಇನ್ನು ಇದೇ ವರ್ಷದ ದಸರಾ ಸಮಯದಲ್ಲಿ ವಿಜಯ್ ಪ್ರಸಾದ್ ಅವರ ಮತ್ತೊಂದು ಚಿತ್ರ ‘ತೋತಾಪುರಿ... ತೊಟ್ಟು ಕಿಲ್ಬೇಕು ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರು ‘ನೀರ್ ದೋಸೆ’ ನಂತರ ಮತ್ತೆ ವಿಜಯ ಪ್ರಸಾದ್ ನಿರ್ದೇಶನದಲ್ಲಿ ಕಾಣಿಸಿಕೊಂಡಿದ್ದಾರೆ.