ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾಗಿ ಒಂದು ವರ್ಷ ಕಳೆದು ಹೋಯಿತು. ಅಭಿಮಾನಿಗಳಿಗೆ ಈಗಿರುವ ಒಂದು ಕುತೂಹಲ ಅಂದ್ರೆ ದೀಪ್ ವೀರ್ಗೆ ಯಾವಾಗ ಮಗುವಾಗುತ್ತೆ ಅಂತ.
ಹೌದು, ಈ ಕುತೂಹಲವನ್ನು ಇನ್ನೂ ಹೆಚ್ಚಿಸುವಂತೆ ಮಾಡಿದೆ ದೀಪಿಕಾ ಪಡುಕೋಣೆ ಮಾಡಿರುವ ಈ ಪೋಸ್ಟ್. ಪದ್ಮಾವತಿ ತಮ್ಮ ಬಾಲ್ಯದ ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ದೀಪಿಕಾ ಪಡುಕೋಣೆ ಗರ್ಭಿಣಿಯಾದ್ರಾ ಎಂದು ಆಶ್ಚರ್ಯವಾಗಿದ್ದಾರೆ.
ಇದ್ದಕ್ಕಿದ್ದಂತೆ ಬಾಲ್ಯದ ಎರಡು ಫೋಟೋಗಳನ್ನು ಪೋಸ್ಟ್ ಮಾಡಿರುವ ದೀಪಿಕಾ ಪಡುಕೋಣೆ, ಇದು ದೀಪಾವಳಿ ಸಂಭ್ರಮ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಏನೇ ಇರಲಿ, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ದೀಪಿಕಾ ಪ್ರಗ್ನೆಂಟ್ ಆದ್ರಾ? ಅಂತ ಕೇಳ್ತಿದ್ದಾರೆ. ಈ ಕುತೂಹಲಕ್ಕೆ ದೀಪ್ ವೀರ್ ಮಾತ್ರ ತೆರೆ ಎಳೆಯಬೇಕಿದೆ.
- " class="align-text-top noRightClick twitterSection" data="
">