ಮೈಸೂರು: ಯುವ ದಸರಾ ವೇದಿಕೆ ಮೇಲೆ ಪ್ರೇಮ ನಿವೇದನೆ ಮಾಡಿ ಟೀಕೆಗಳಿಗೆ ಗುರಿಯಾಗಿದ್ದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸೋಮವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
![Chandan Shetty and Nivedita Gowda](https://etvbharatimages.akamaized.net/etvbharat/prod-images/kn-mys-05-engagement-vis-ka10003_20102019230145_2010f_1571592705_406.jpg)
ಯುವ ದಸರಾದ ಐದನೇ ದಿನ ಅಂದರೆ ಅಕ್ಟೋಬರ್ 5 ರಂದು ಕಾರ್ಯಕ್ರಮ ನೀಡುತ್ತಿದ್ದ ಚಂದನ್ ಶೆಟ್ಟಿ, ನೆರೆದಿದ್ದ ಪ್ರೇಕ್ಷಕರಿಗೆ ನಿಮೆಗೆಲ್ಲ ಸಪ್ರೈಸ್ ಕೊಡುತ್ತೀನಿ ಎಂದು ಹೇಳಿ, ರಾತ್ರಿ 12ರ ಸಮಯದಲ್ಲಿ ನಿವೇದಿತಾಳನ್ನು ಕಾರ್ಯಕ್ರಮದ ವೇದಿಕೆ ಮೇಲೆ ಕರೆಸಿ, ಪ್ರೇಮ ನಿವೇದನೆ ಮಾಡಿದ್ದರು.
ಈ ಕುರಿತು ರಾಜ್ಯದಲ್ಲಿ ಪರ-ವಿರೋಧ ಚರ್ಚೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೊಮಣ್ಣ ಅವರು ಕೂಡ ಇಬ್ಬರ ಜೋಡಿಯ ವರ್ತನೆಗೆ ಬೇಸರಗೊಂಡಿದ್ದರು. ಇದೀಗ ಈ ಜೋಡಿ ಸೋಮವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.