ಶೀಘ್ರದಲ್ಲೇ ಹೊಸ ರಾಜಕೀಯ ಪಕ್ಷವನ್ನು ಘೋಷಿಸುತ್ತೇನೆ. ಆದ್ರೆ ನಾನು ಸಿಎಂ ಬಗ್ಗೆ ಯೋಚಿಸಿಲ್ಲ ಎಂದು ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕರ್ತರು ಮತ್ತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಜಿನಿ, ಈ ಹಿಂದೆ ತಮಿಳುನಾಡು ರಾಜಕೀಯದಲ್ಲಿ ಇಬ್ಬರು ಪ್ರಬಲರು ಇದ್ದರು. ಒಬ್ಬರು ಜಯಲಲಿತಾ ಮತ್ತೊಬ್ಬರು ಕಲೈಗ್ನಾರ್. ಇವರ ನಂತರ ರಾಜ್ಯದ ರಾಜಕೀಯ ನಿರ್ವಾತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹದ ಸುದ್ದಿಗಳಿದ್ದವು. 1996ರಿಂದಲೂ ಇಂತಹ ಊಹೆಗಳು ಹರಿದಾಡುತ್ತಿದ್ದವು. 2017ರಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದೆ ಎಂದರು.
ನಂತರ ಮಾತನಾಡಿದ ತಲೈವಾ ಯಾವ ಸರ್ಕಾರದ ಕೆಲಸಗಳೂ ಸರಿಯಾಗಿ ನಡೆಯುತ್ತಿಲ್ಲ. ಈ ವ್ಯವಸ್ಥೆ ಬದಲಾಯಿಸುವ ಕೆಲಸವನ್ನು ನಾವು ಮಾಡುತ್ತೇವೆ. ಯುವಕರರು ರಾಜಕೀಯಕ್ಕೆ ಧುಮುಕಬೇಕು. ವ್ಯಕ್ತಿ ಕೇಂದ್ರಿತ ಸರ್ಕಾರ, ಪಕ್ಷ ಕೇಂದ್ರಿತ ರಾಜಕೀಯ ಸರಿಯಲ್ಲ ಎಂದರು.