ETV Bharat / sitara

ಕೆಮ್ಮೋದು ಕಷ್ಟ ಅಂತಿದ್ದಾರೆ ಸಾಹಿತಿ ಹೆಚ್​.ಎಸ್​.ವಿ... ಈ ಕೆಮ್ಮಿಗೆ ಕಾರಣ ಅನಾರೋಗ್ಯವಲ್ಲ! - ಚಿತ್ರೀಕರಣದ ಅನುಭವ ಹಂಚಿಕೊಂಡ ಹೆಚ್​​​​​​​​​ಎಸ್​​​ವೆಂಕಟೇಶ ಮೂರ್ತಿ

'ಅಮೃತವಾಹಿನಿ' ಚಿತ್ರದಲ್ಲಿ ಅಸ್ತಮಾ ಕಾಯಿಲೆ ಇರುವ ವೃದ್ಧನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಪಾತ್ರಕ್ಕಾಗಿ ಹೆಚ್​​​ಎಸ್​​​​ವಿ ಅವರಿಗೆ ಕೆಮ್ಮುವುದು ಬಹಳ ಕಷ್ಟವಾಗಿತ್ತಂತೆ. ನಿರ್ದೇಶಕ ನರೇಂದ್ರ ಬಾಬು ಕ್ಯಾಮರಾ ಹಿಂದೆ ನಿಂತು ಕೆಮ್ಮಿದಾಗ ಹೆಚ್​​​​​ಎಸ್​​ವಿ ಅವರಿಗೆ ಜ್ಞಾಪಕ ಬಂದು ಕೆಮ್ಮಲು ಶುರು ಮಾಡುತ್ತಿದ್ದರಂತೆ.

Amritavahini movie
'ಅಮೃತವಾಹಿನಿ'
author img

By

Published : Dec 24, 2019, 12:04 PM IST

ಹಿರಿಯ ಸಾಹಿತಿ, ಕವಿ ಹೆಚ್​​​.ಎಸ್​. ವೆಂಕಟೇಶಮೂರ್ತಿ ತಾವು ನಿರ್ದೇಶಿಸಿರುವ 'ಹಸಿರು ರಿಬ್ಬನ್​​​' ಚಿತ್ರಕ್ಕಾಗಿ ಇತ್ತೀಚೆಗೆ ಫಿಲ್ಮ್​​​​ಫೇರ್ ಪ್ರಶಸ್ತಿ ಪಡೆದವರು. ಇದೀಗ 'ಅಮೃತವಾಹಿನಿ' ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Amritavahini audio release function
'ಅಮೃತವಾಹಿನಿ' ಆಡಿಯೋ ಬಿಡುಗಡೆ ಸಮಾರಂಭ

ನರೇಂದ್ರ ಬಾಬು ನಿರ್ದೇಶನದ 'ಅಮೃತವಾಹಿನಿ' ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಸಿನಿಮಾ ಪಾತ್ರಕ್ಕಾಗಿ ಹೆಚ್​​​.ಎಸ್​​​.ವಿ ಸುಮಾರು 12 ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಸಿನಿಮಾ ಚಿತ್ರೀಕರಣದ ವೇಳೆ ಉಂಟಾದ ಅನುಭವವನ್ನು ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಸ್ತಮಾ ಕಾಯಿಲೆ ಇರುವ ವೃದ್ಧನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಪಾತ್ರಕ್ಕಾಗಿ ಹೆಚ್​​​ಎಸ್​​​​ವಿ ಅವರಿಗೆ ಕೆಮ್ಮುವುದು ಬಹಳ ಕಷ್ಟವಾಗಿತ್ತಂತೆ. ನಿರ್ದೇಶಕ ನರೇಂದ್ರ ಬಾಬು ಕ್ಯಾಮೆರಾ ಹಿಂದೆ ನಿಂತು ಕೆಮ್ಮಿದಾಗ ಹೆಚ್​​​​​ಎಸ್​​ವಿ ಅವರಿಗೆ ಜ್ಞಾಪಕ ಬಂದು ಕೆಮ್ಮಲು ಶುರು ಮಾಡುತ್ತಿದ್ದರಂತೆ. ಅದರಲ್ಲೂ ಆ ಕೆಮ್ಮು ವಿಭಿನ್ನವಾಗಿ ಬರಬೇಕಿತ್ತಂತೆ. ಆದರೆ ಸಣ್ಣದಾಗಿ, ಮಧ್ಯಮ, ತಾರಕದಲ್ಲಿ ಕೆಮ್ಮುವುದು ಅವರಿಗೆ ಅಷ್ಟು ಸಲೀಸಾಗಿ ಬರಲಿಲ್ಲ ಎಂದು ಹೆಚ್​​ಎಸ್​ವಿ ಹೇಳಿಕೊಂಡಿದ್ದಾರೆ.

HS Venkatesh murthy
ಹೆಚ್​​​. ಎಸ್​​. ವೆಂಕಟೇಶಮೂರ್ತಿ

ಇದುವರೆಗೂ ಬರವಣಿಗೆಯಲ್ಲಿ ಬ್ಯುಸಿಯಾಗಿದ್ದ ನಾನು ಈಗ 76ನೇ ವಯಸ್ಸಿನಲ್ಲಿ ಅಭಿನಯಿಸಿದ್ದೇನೆ. ಕ್ಯಾಮೆರಾ ಮುಂದೆ ಅಭಿನಯಿಸುವುದು ಕಷ್ಟವೇನಲ್ಲ. ಆದರೆ ಇಂತಹ ಕೆಲವೊಂದು ಸನ್ನಿವೇಶಗಳು ಸುಸ್ತು ಮಾಡಿಬಿಡುತ್ತದೆ. ನನ್ನೊಂದಿಗೆ ಅಭಿನಯಿಸಿರುವ ಬಾಲನಟಿ ಋತ್ವಿಕ, ಮನಮುಟ್ಟುವಂತೆ ಅಭಿನಯಿಸಿದ್ದಾಳೆ ಎಂದು ತಮ್ಮ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ ಹೆಚ್​​​ಎಸ್​​ವಿ. 'ಅಮೃತ ವಾಹಿನಿ' ಚಿತ್ರವನ್ನು ಕೆ. ಸಂಪತ್​ ಕುಮಾರ್, ಅಕ್ಷಯ್ ರಾವ್ ಸೇರಿಸಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಉಪಾಸನಾ ಮೋಹನ್​​​​ ಸಂಗೀತ ನಿರ್ದೇಶನವಿದ್ದು, ಗಿರಿಧರ್ ದಿವಾನ್ ಛಾಯಾಗ್ರಹಣವಿದೆ.

ಹಿರಿಯ ಕವಿ ಡಾ ಎಚ್ ಎಸ್ ವಿ ಅವರಿಗೆ ಕೆಮ್ಮೋದು ಕಷ್ಟ ಅಂತೆ

ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ, ಹಿರಿಯ ಕವಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಗೀತೆ ಹಸಿರು ರಿಬ್ಬನ್ ಚಿತ್ರಕ್ಕೆ ಇತ್ತೀಚಿಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದವರು. 2018 ರಲ್ಲಿ ಬಿಡುಗಡೆ ಆದ ಹಸಿರು ರಿಬ್ಬನ್ ಇಂದ ನಿರ್ದೇಶನಕ್ಕೆ ಸಹ ಅಡಿಯಿಟ್ಟರು.

ಈಗ 2019 ರಲ್ಲಿ ನಾಯಕರಾಗಿ ಸಹ ಅಮೃತವಾಹಿನಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಜನವರಿ 2020 ರಲ್ಲಿ ಬಿಡುಗಡೆ ಆಗಲಿದೆ ನರೇಂದ್ರ ಬಾಬು ನಿರ್ದೇಶನದಲ್ಲಿ.

12 ದಿವಸ ಎಚ್ ಎಸ್ ವಿ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆದರೆ ಅವರಿಗೆ ಪಾತ್ರದಲ್ಲಿ ಆಸ್ತಮಾ ಖಾಯಿಲೆ ಹೊತ್ತ ವೃದ್ದನ ಪಾತ್ರ ಆದ್ದದ್ದರಿಂದ ಆಗಾಗ್ಗೆ ಕೆಮ್ಮ ಬೇಕಾಗಿತ್ತು. ಅದೇ ಈ ಹಿರಿಯ ಸಾಹಿತಿಗೆ ಬಹಳ ಕಷ್ಟ ಅನ್ನಿಸಿದ್ದು ಈ ಮುಖ್ಯ ಪಾತ್ರ ನಿರ್ವಹಿಸುವಾಗ. ನಿರ್ದೇಶಕ ನರೇಂದ್ರ ಬಾಬು ಕ್ಯಾಮರಾ ಹಿಂದೆ ನಿಂತು ಕೆಮ್ಮಿದಾಗ ಎಚ್ ಎಸ್ ವಿ ಅವರಿಗೆ ಅದು ಜ್ಞಾಪಕ ಬಂದು ಕೆಮ್ಮಲು ಶುರು ಮಾಡುತ್ತಾ ಇದ್ದರಂತೆ. ಕೆಮ್ಮುವುದು ಅಂದರೆ ವಿಭಿನ್ನವಾಗಿ ಮೂಡಿಸಬೇಕಿತ್ತು. ಸಣ್ಣದಾಗಿ, ಮಧ್ಯಮದಲ್ಲಿ, ತಾರಕದಲ್ಲಿ ಕೆಮ್ಮುವುದು ಅಷ್ಟು ಸಲೀಸು ಅನ್ನಿಸಲಿಲ್ಲ. ಈ 76 ರ ವಯಸ್ಸಿನಲ್ಲಿ ಮಾಡಿದ್ದೇನೆ ಎನ್ನುವ ಎಚ್ ಎಸ್ ವಿ ಕೆಲವು ದಿವಸ ಮಧ್ಯ ರಾತ್ರಿ ಸಹ ಚಿತ್ರೀಕರಣ ಮಾಡಿದ್ದು ಇದೆ ಈ ಅಮೃತವಾಹಿನಿ’… ಹೃದಯದ ಹಾದಿ ಚಿತ್ರಕ್ಕೆ.

ಮಿಕ್ಕಂತೆ ಬರಹಗಾರ ಒಬ್ಬ ಅಂತರಂಗ ನಟ ಅದನ್ನು ನಾನು ಬಹಿರಂಗ ಮಾಡಿದ್ದೇನೆ. ಆ ಪಾತ್ರ ಆಗಿ ಬರವಣಿಗೆ ಮಾಡುವುದರಿಂದ ಕ್ಯಾಮರಾ ಮುಂದೆ ನಿಂತು ಅಭಿನಯಿಸೋದು ಕಷ್ಟ ಅಲ್ಲ. ಆದರೆ ಚಿತ್ರೀಕರಣದ ಬಗೆ ಸುಸ್ತು ಮಾಡಿಸಿಬಿಡುತ್ತದೆ. ಪುಟ್ಟ ಬಾಲಕಿ  ಋತ್ವಿಕ ಒಂದು ಹಂತದಲ್ಲಿ ಚಿತ್ರಕ್ಕೆ ತಿರುವು ನಿಡುವುದಿದೆ. ಆ ಪುಟ್ಟ ಮಗು ಹೃದಯ ತಟ್ಟುವ ಹಾಗೆ ಅಭಿನಯಿಸಿದೆ ಎಂಬುದು ಹೇಳಿಕೊಂಡರು ಎಚ್ ಎಸ್ ವಿ ಅವರ 76 ವಯಸ್ಸಿನ ಸಾಹಸದ ಬಗ್ಗೆ.

ಅಮೃತವಾಹಿನಿ ಚಿತ್ರವನ್ನ ಕೆ ಸಂಪತ್ ಕುಮಾರ್, ಅಕ್ಷಯ್ ರಾವ್ ನಿರ್ಮಾಣ ಮಾಡಿದ್ದಾರೆ. ಉಪಾಸನಾ ಮೋಹನ್ ಸಂಗೀತ (ಇವರು 70 ಎಚ್ ಎಸ್ ವಿ ಕವನಗಳನ್ನು ರಾಗ ಸಂಯೋಜನೆ ಮಾಡಿರುವರು), ಗಿರಿಧರ್ ದಿವಾನ್ ಛಾಯಾಗ್ರಹಣ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.