ETV Bharat / sitara

ಕೊನೆಗೂ 'ಆರ್​​ಆರ್​​ಆರ್'ಗೆ ಸಿಕ್ಕಳು ನಾಯಕಿ...ಈ ಬಾರಿ ರಾಜಮೌಳಿ ಮಣೆ ಹಾಕಿದ್ದು ಯಾರಿಗೆ ? ​​ - ಎಸ್​​​.ಎಸ್​. ರಾಜಮೌಳಿ

ಖ್ಯಾತ ನಿರ್ದೇಶಕ ಎಸ್​​​.ಎಸ್​. ರಾಜಮೌಳಿ ಅವರ 'ಆರ್​ಆರ್​ಆರ್'​ ಚಿತ್ರಕ್ಕೆ ಬಾಕಿಯಿದ್ದ ನಾಯಕಿ ಪಾತ್ರಕ್ಕೆ ನಟಿ ಸಿಕ್ಕಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಈ ಬಾರಿಯೂ ಹಾಲಿವುಡ್​ ಹುಡ್ಗಿಯೇ ಟಾಲಿವುಡ್​ ಅಂಗಳಕ್ಕೆ ಬರಲಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 23, 2019, 2:29 PM IST

ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್​​ಟಿಆರ್​ ನಟಿಸುತ್ತಿರುವ ಬಿಗ್ ಸಿನಿಮಾಗೆ ಇಬ್ಬರು ನಾಯಕಿಯರ ಆಯ್ಕೆಯಾಗಿತ್ತು. ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಹಾಲಿವುಡ್​​ನ ಡೈಸಿ ಎಡ್ಗರ್​ ಜೊನಾಸ್​ ಫೈನಲ್ ಆಗಿತ್ತು. ಆದರೆ, ಶೂಟಿಂಗ್ ಪ್ರಾರಂಭಕ್ಕೂ ಮುನ್ನವೇ ಬ್ರಿಟಿಷ್ ತಾರೆ ಡೈಸಿ ಚಿತ್ರತಂಡದಿಂದ ಹೊರ ನಡೆದರು. ಈ ಪಾತ್ರ ಪಕ್ಕಕ್ಕಿಟ್ಟು ಚಿತ್ರೀಕರಣ ಮುಂದುವರೆಸಿದ್ದ ರಾಜಮೌಳಿ, ಸೂಕ್ತ ನಟಿಗಾಗಿ ಸರ್ಚಿಂಗ್​ನಲ್ಲಿದ್ದರು. ಈಗ ಕೊನೆಗೂ ಮತ್ತೊಬ್ಬ ಹಾಲಿವುಡ್ ನಟಿಯನ್ನೇ ಚಿತ್ರತಂಡ ಹುಡುಕಿದೆ.

ಬ್ರಿಟಿಷ್ ಮಾಡೆಲ್, ಸಿಂಗರ್ ಹಾಗೂ ನಟಿ ಎಮ್ಮಾ ರಾಬರ್ಟ್ಸ್ ಜತೆ ರಾಜಮೌಳಿ ಮಾತುಕತೆ ನಡೆಸಿದ್ದಾರಂತೆ. ಈಕೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದೇ ಆದರೆ ಟಾಲಿವುಡ್ ತಾರಕ್ ಎನ್​ಟಿಆರ್​ ಜತೆ ಈ ನೀಲಿ ಕಣ್ಗಳ ಬ್ಯೂಟಿ ಡ್ಯುಯೆಟ್ ಹಾಡೋದು ಪಕ್ಕಾ. ಒಂದೇ ಶೆಡ್ಯೂಲ್ಡ್​​ನಲ್ಲಿ ಎಮ್ಮಾ ಭಾಗದ ಚಿತ್ರೀಕರಣ ಮಾಡಿ ಮುಗಿಸುವ ಯೋಚನೆ ಕೂಡ ರಾಜಮೌಳಿ ಮೈಂಡ್​ನಲ್ಲಿದೆಯಂತೆ.

ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮರಾಜು ಹಾಗೂ ಕೋಮರಾಮ್ ಭೀಮ ಬ್ಯಾಕ್​ಡ್ರಾಪ್​ ಕಥೆಯ ಈ ಸಿನಿಮಾ, 300 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಮುಂದಿನ ವರ್ಷ ಜುಲೈ 30 ರಂದು ತೆರೆಗೆ ಬರಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.