ETV Bharat / sitara

ಹಿತಾ ಚಂದ್ರಶೇಖರ್​-ಹಾಗೇ ಸುಮ್ಮನೆ ಖ್ಯಾತಿಯ ಕಿರಣ್​ ಮ್ಯಾರೇಜ್​ಗೆ ಗ್ರೀನ್​ ಸಿಗ್ನಲ್​​​​ - ಸಿಹಿ-ಕಹಿ ಚಂದ್ರು

ಬಿಗ್ ಸ್ಕ್ರೀನ್  ಹಾಗೂ ಸ್ಮಾಲ್ ಸ್ಕ್ರೀನ್​ನಲ್ಲಿ ನಟಿಸಿರುವ ನಟ ‘ಹಾಗೇಸುಮ್ಮನೇ’ ಖ್ಯಾತಿಯ ಕಿರಣ್ ಶ್ರೀನಿವಾಸ್ ಜೊತೆ ಹಿತಾ ಚಂದ್ರಶೇಖರ್ ಮದುವೆಯಾಗುತ್ತಿದ್ದಾರೆ.

ಹಿತಾ
author img

By

Published : Feb 9, 2019, 1:07 PM IST

ಸ್ಯಾಂಡಲ್‍ವುಡ್​ನಲ್ಲಿ ಅನೇಕ ಸ್ಟಾರ್ ನಟ-ನಟಿಯರು ಸ್ಕ್ರೀನ್ ಮೇಲೆ ಅಲ್ಲದೆ ರಿಯಲ್ ಲೈಫ್​ನಲ್ಲೂ ಪೇರ್​ಗಳಾಗುತ್ತಿದ್ದಾರೆ. ಹಾಗೆಯೇ ಈಗ ಹಿರಿಯ ನಟ ಸಿಹಿ-ಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ವೈವಾಹಿಕ ಜೀವನಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಬಿಗ್ ಸ್ಕ್ರೀನ್ ಹಾಗೂ ಸ್ಮಾಲ್ ಸ್ಕ್ರೀನ್​ನಲ್ಲಿ ನಟಿಸಿರುವ ನಟ ‘ಹಾಗೇಸುಮ್ಮನೇ’ ಖ್ಯಾತಿಯ ಕಿರಣ್ ಶ್ರೀನಿವಾಸ್ ಜೊತೆ ಹಿತಾ ಚಂದ್ರಶೇಖರ್ ಮದುವೆಯಾಗುತ್ತಿದ್ದಾರೆ. ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿಯನ್ನು ನಟ ಸಿಹಿ ಕಹಿ ಚಂದ್ರು ಈನಾಡುಗೆ ತಿಳಿಸಿದ್ದಾರೆ.

ಈ ಜೋಡಿಗಳ ಮದುವೆಗೆ ಮನೆಯವರು ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲದೆ ಮನೆಯವರು ಒಳ್ಳೆ ದಿನ ನೋಡ್ತಿದ್ದು, ಎಲ್ಲಾ ಅಂದು ಕೊಂಡಂತೆ ಆದ್ರೆ ಈ ವರ್ಷದ ಅಂತ್ಯದಲ್ಲಿ ಈ ತಾರಾ ಜೋಡಿ ವೈವಾಹಿಕ ಜೀವನಕ್ಕೆ ಎಂಟ್ರಿಕೊಡಲಿದೆ. ಇನ್ನು ಈ ವಿಚಾರವಾಗಿ ಹಿತಾ ಚಂದ್ರಶೇಖರ್ ಈನಾಡು ಜೊತೆ ಮಾತನಾಡಿ, ನಾನು ಮತ್ತು ಸೋನು ‘ಒಂಥರಾ ಬಣ್ಣಗಳು’. ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದೆವು. ಈ ಸಿನಿಮಾದ ಮೂಲಕ ಕಿರಣ್ ಪರಿಚಯವಾಗಿದ್ದು, ಎರಡು ಕುಟುಂಬದವರ ನಡುವೆ ಉತ್ತಮ ಒಡನಾಟವಿದೆ. ಕಿರಣ್, ನಾನು ಉತ್ತಮ‌ ಸ್ನೇಹಿತರು. ಇತ್ತೀಚೆಗಷ್ಟೆ ಕಿರಣ್ ಮ್ಯಾರೇಜ್ ವಿಷಯವನ್ನು ಪ್ರಸ್ತಾಪಿಸಿದರು. ಹಾಗಾಗಿ ಮದುವೆ ಆಗಲು ನಿರ್ಧರಿಸಿದ್ದೇವೆ ಎಂದು ಹಿತಾ ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದಾರೆ.

ನಮ್ಮ ಮದುವೆಯ ವಿಚಾರವನ್ನು ಎರಡು ಕುಟುಂಬದವರಿಗೂ ತಿಳಿಸಿದಾಗ ಅವರು ಕೂಡ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಎರಡು ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ. ಅಂದಿನ ದಿನವೇ ನಮ್ಮ ಮದುವೆಯ ಬಗ್ಗೆ ಅಧಿಕೃತವಾಗಿ ಹೇಳಬೇಕು ಎಂದುಕೊಂಡಿದ್ದೆವು ಅಂತ ಹಿತಾ ಹೇಳಿದ್ದಾರೆ.

ಕಿರಣ್ 2008ರಲ್ಲಿ ಪ್ರೀತಂ‌ಗುಬ್ಬಿ ನಿರ್ದೇಶನದ ‘ಹಾಗೇ ಸುಮ್ಮನೆ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್ ಎಂಟ್ರಿ ಕೊಟ್ಟಿದ್ರು. ಅಲ್ಲದೆ ‘ಚಿರು’, ‘ಮುಗಿಲ ಮಲ್ಲಿಗೆಯೋ’, ‘ಕಾಂಚನಾ’ ಹಾಗೂ ಒಂಥರ ಬಣ್ಣಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಿರಣ್ ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ಹಿತಾ ಚಂದ್ರಶೇಖರ್ 2016ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡ್ಯಾನ್ಸಿಂಗ್ ಸ್ಟಾರ್’ ಸೀಸನ್ 3ರಲ್ಲಿ ವಿಜೇತೆಯಾಗಿದ್ದರು. ನಂತರ ‘ಕಾಲ್ ಕೆಜಿ ಪ್ರೀತಿ’ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು.

undefined

ಹೀತಾ  ಚಂದ್ರಶೇಖರ್ ಹಾಗೂ ಹಾಗೇ ಸುಮ್ಮನೆ ಖ್ಯಾತಿಯ ಕಿರಣ್ ಮ್ಯಾರೇಜ್

ಸ್ಯಾಂಡಲ್‍ವುಡ್ ನಲ್ಲಿಅನೇಕ ಸ್ಟಾರ್  ನಟ-ನಟಿಯರು ಸ್ಕ್ರೀನ್  ಮೇಲೆ ಅಲ್ಲದೆ  ರಿಯಲ್ ಲೈಫ್ ನಲ್ಲೂ ಪೇರ್ ಗಳಾಗುತ್ತಿದ್ದಾರೆ. ಎಸ್ ಈಗ ಹಿರಿಯ ನಟ ಸಿಹಿ-ಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್  ವೈವಾಹಿಕ ಜೀವನಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಬಿಗ್ ಸ್ಕ್ರೀನ್  ಹಾಗೂ ಸ್ಮಾಲ್ ಸ್ಕ್ರೀನ್‌ ನಲ್ಲಿ  ನಟಿಸಿರುವ ನಟ ‘ಹಾಗೆ ಸುಮ್ಮನೇ’ ಖ್ಯಾತಿಯ ಕಿರಣ್ ಶ್ರೀನಿವಾಸ್ ಜೊತೆ ಹಿತಾ ಚಂದ್ರಶೇಖರ್ ಮದುವೆಯಾಗುತ್ತಿದ್ದಾರೆ. ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿಯನ್ನು  ನಟ ಸಿಹಿ ಕಹಿ ಚಂದ್ರು ಈ ನಾಡುಗೆ ತಿಳಿಸಿದ್ದಾರೆ. ಈ ಜೋಡಿಗಳ ಮದುವೆಗೆ ಮನೆಯವರು ಈಗಾಗಲೇ ಗ್ರೀನ್ ಸಿಗ್ನಲ್ ಕೊಟಿದ್ದಾರೆ. ಅಲ್ಲದೆ ಮನೆಯವರು ಒಳ್ಳೆ ದಿನ ನೋಡ್ತಿದ್ದು ಎಲ್ಲಾ ಅಂದು ಕೊಂಡಂತೆ ಆದ್ರೆ ಈ ವರ್ಷದ ಅಂತ್ಯದಲ್ಲಿ ಈ ತಾರಾ ಜೋಡಿ ವೈವಾಹಿಕ ಜೀವನಕ್ಕೆ ಎಂಟ್ರಿಕೊಡಲಿದ್ದಾರೆ. ಇನ್ನೂ ಈ ವಿಚಾರವಾಗಿ ಹಿತಾ ಚಂದ್ರುಶೇಖರ್ ಈ ನಾಡು ಜೊತೆ  ಮಾತನಾಡಿ ನಾನು ಮತ್ತು ಸೋನು  ‘ಒಂಥರಾ ಬಣ್ಣಗಳು’ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದೆವು. ಈ ಸಿನಿಮಾದ ಮೂಲಕ ಕಿರಣ್ ಪರಿಚಯವಾಗಿದ್ದು, ಆದರೆ ಕಿರಣ್ ನಮ್ಮ ಕುಟುಂಬದವರಿಗೆ ಪರಿಚಯವಿದ್ದಾರೆ. ಎರಡು ಕುಟುಂಬದವರ ನಡುವೆ ಉತ್ತಮ ಒಡನಾಟವಿದೆ. ಕಿರಣ್, ನಾನು ಉತ್ತಮ‌ ಸ್ನೇಹಿತರು . ಇತ್ತೀಚೆಗಷ್ಟೆ  ಕಿರಣ್  ಮ್ಯಾರೇಜ್ ವಷಯವನ್ನು ಪ್ರಸ್ತಾಪಿಸಿದರು ಹಾಗಾಗಿ ಮದುವೆ ಆಗಲು   ನಿರ್ಧರಿಸಿದ್ದೇವೆ ಎಂದು ಹಿತಾ ಅವರು ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದಾರೆ.ನಮ್ಮ ಮದುವೆಯ  ವಿಚಾರವನ್ನು ಎರಡು ಕುಟುಂಬದವರಿಗೂ ತಿಳಿಸಿದಾಗ ಅವರು ಕೂಡ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಇನ್ನೂ ಎರಡು ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ. ಅಂದಿನ ದಿನವೇ ನಮ್ಮ ಮದುವೆಯ ಬಗ್ಗೆ ಅಧಿಕೃತವಾಗಿ ಹೇಳಬೇಕು ಎಂದುಕೊಂಡಿದ್ದೆವು ಅಂತ ಹಿತಾ ಅವರು ತಿಳಿಸಿದ್ದಾರೆ.ಕಿರಣ್ 2008ರಲ್ಲಿ  ಪ್ರೀತಂ‌ಗುಬ್ಬಿ ನಿರ್ದೇಶನದ ‘ ಹಾಗೇ ಸುಮ್ಮನೆ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್  ಎಂಟ್ರಿ ಕೊಟ್ಟಿದ್ರು .ಅಲ್ಲದೆ  ‘ಚಿರು’, ‘ಮುಗಿಲ ಮಲ್ಲಿಗೆಯೋ’, ‘ಕಾಂಚನಾ’  ಹಾಗೂ ಒಂಥರ ಬಣ್ಣಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಿರಣ್ ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. .ಇನ್ನೂ ಹಿತಾ ಚಂದ್ರಶೇಖರ್ 2016ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡಾನ್ಸಿಂಗ್ ಸ್ಟಾರ್’ ಸೀಸನ್ 3ರಲ್ಲಿ ವಿಜೇತೆಯಾಗಿದ್ದರು. ನಂತರ ‘ಕಾಲ್ ಕೆಜಿ ಪ್ರೀತಿ’ ಮೂಲಕ  ಚಂದನವನಕ್ಕೆ  ಪಾದಾರ್ಪಣೆ ಮಾಡಿದ್ದರು.

ಸತೀಶ ಎಂಬಿ

ಹೀತಾ ಚಂದ್ರಶೇಖರ್ ಹಾಗೂ ಕಿರಣ್ ಫೋಟೋ ☝☝
ETV Bharat Logo

Copyright © 2025 Ushodaya Enterprises Pvt. Ltd., All Rights Reserved.