ETV Bharat / sitara

'ಗಾಯಗೊಂಡ ಸಿಂಹ'ಕ್ಕೆ ಬಿಡುಗಡೆ ಮುನ್ನವೇ ಡಿಮ್ಯಾಂಡ್ : ಕೋಟಿ ಕೋಟಿ ಬೆಲೆ ಬಾಳುವ ಕೆಜಿಎಫ್ ಚಾಪ್ಟರ್-2 - download kgf chapter 2 full

ಯಾಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಇಷ್ಟೊಂದು ಡಿಮ್ಯಾಂಡ್ ಅನ್ನೋದಿಕ್ಕೆ, ಅದ್ದೂರಿ ಮೇಕಿಂಗ್, ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿರೋದು. ಇನ್ನು, ಈ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಅಭಿನಯ ಮಾಡಿದ್ದಾರೆ. ಇದರ ಜೊತೆಗೆ ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ತೆಲುಗು ನಟ ರಾವ್ ರಮೇಶ್ ಸೇರಿದಂತೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ..

kgf-chapter-2
ಕೆಜಿಎಫ್ ಚಾಪ್ಟರ್ 2
author img

By

Published : Jul 31, 2021, 8:18 PM IST

ಕೆಜಿಎಫ್ ಚಾಪ್ಟರ್-2 ಟೀಸರ್‌ನಿಂದಲೇ ವಿಶ್ವದಾಖಲೆ ನಿರ್ಮಿಸಿರುವ ಕನ್ನಡದ ಹೆಮ್ಮೆಯ ಸಿನಿಮಾ. ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನ ಧೂಳೀಪಟ ಮಾಡಿರೋ ಕೆಜಿಎಫ್ ಚಾಪ್ಟರ್ 2 ಚಿತ್ರ, ಯಾವಾಗ ರಿಲೀಸ್ ಆಗುತ್ತದೆ ಎಂದು ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಅಂತಾ ಕರೆಯಿಸಿಕೊಂಡ ಕೆಜಿಎಫ್ ಮೊದಲ ಸಿಕ್ವೇಲ್ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ಕಲೆಕ್ಷನ್ ಮಾಡುವ ಮೂಲಕ ಪರಭಾಷೆಯ ಸಿನಿಮಾಗಳನ್ನ ಸೈಡ್ ಹೊಡೆದಿತ್ತು. ಈಗ ಇದರ ಮುಂದುವರೆದ ಭಾಗ ಕೆಜಿಎಫ್ ಚಾಪ್ಟರ್ 2 ರಿಲೀಸ್​ಗೂ ಮುನ್ನವೇ ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2ನಲ್ಲಿ ಕಾಣಿಸಿಕೊಂಡಿರುವ ಪರಿ, ನಿರ್ದೇಶಕ ಪ್ರಶಾಂತ್ ನೀಲ್ ಮೇಕಿಂಗ್, ಬಾಲಿವುಡ್ ನಟ ಸಂಜಯ್ ದತ್ ಹಾಗೂ ರವೀನಾ ಟಂಡನ್ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್‌ನಿಂದ, ಕೆಜಿಎಫ್-2ಗೆ, ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ.

ಬಿಡುಗಡೆಗೂ ಮುನ್ನವೇ ಹಲವು ರೆಕಾರ್ಡ್​ಗಳನ್ನ ಕ್ರಿಯೇಟ್​​ ಮಾಡಿ ಇತಿಹಾಸ ಸೃಷ್ಟಿಸಿರುವ ಕೆಜಿಎಫ್ ಸಿನಿಮಾದ ಡಬ್ಬಿಂಗ್ ರೈಟ್ಸ್ ಹಾಗೂ ಟಿವಿ ರೈಟ್ಸ್​ಗೆ ಸಿಕ್ಕಾಪಟ್ಟೇ ಡಿಮ್ಯಾಂಡ್ ಬಂದಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಳಯಾಳಂ ಭಾಷೆಯಲ್ಲಿ ಮೂಡಿ ಬರ್ತಿರೋ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್​ಗೂ ಮುಂಚೆ ಡಬ್ಬಿಂಗ್ ರೈಟ್ಸ್ ಹಾಗೂ ಟಿವಿ ರೈಟ್ಸ್​ಗೆ ಕೋಟಿ ಕೋಟಿ ಹಣ ಕೊಡಲು, ಪ್ರತಿಷ್ಠಿತ ಡಿಸ್ಟ್ರಿಬ್ಯೂಟರ್ ಕಂಪನಿಗಳು ಹಾಗೂ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆಯಂತೆ.

ಸದ್ಯ ಗಾಂಧಿನಗರದಲ್ಲಿ ಸಿನಿಮಾ ಪಂಡಿತರು ಹೇಳುವ ಹಾಗೇ, ಹಿಂದಿಯ ಸೋನಿ ಕಂಪನಿ, ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹಿಂದಿ ಟಿವಿ ರೈಟ್ಸ್ ಹಾಗೂ ಡಬ್ಬಿಂಗ್ ರೈಟ್ಸ್‌ನ 25 ಕೋಟಿ ಕೊಟ್ಟು ಖರೀದಿಸಲು ಮುಂದಾಗಿದೆಯಂತೆ.

ಈಗಾಗ್ಲೇ ಹೊಂಬಾಳೆ ಫಿಲ್ಮ್ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಂಗದೂರ್ ಜೊತೆ ಸೋನಿ ಕಂಪನಿ ಒಂದು ಸುತ್ತಿನ ಮಾತುಕತೆ ಮಾಡಿದ್ದಾರಂತೆ. ಹಾಗೇನಾದರೂ ಕೆಜಿಎಫ ಚಾಪ್ಟರ್ 2 ಸಿನಿಮಾ ಡಬ್ಬಿಂಗ್ ಹಾಗೂ ಟಿವಿ ರೈಟ್ಸ್ 25 ಕೋಟಿಗೆ ಮಾರಾಟವಾದರೆ, ಈ ಮೂಲಕ ಕೆಜಿಎಫ್ ಚಾಪ್ಟರ್ 2 ಸಿನಿಮಾ, ಹೊಸ ದಾಖಲೆ ಬರೆಯಲಿದೆ.

ಯಾಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಇಷ್ಟೊಂದು ಡಿಮ್ಯಾಂಡ್ ಅನ್ನೋದಿಕ್ಕೆ, ಅದ್ದೂರಿ ಮೇಕಿಂಗ್, ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿರೋದು. ಇನ್ನು, ಈ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಅಭಿನಯ ಮಾಡಿದ್ದಾರೆ. ಇದರ ಜೊತೆಗೆ ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ತೆಲುಗು ನಟ ರಾವ್ ರಮೇಶ್ ಸೇರಿದಂತೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಅದ್ದೂರಿ ಮೇಕಿಂಗ್‌ನಿಂದ ಕೂಡಿರೋ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನ ಹೊಂಬಾಳೆ ಫಿಲ್ಮ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಈ ಚಿತ್ರ ಇಷ್ಟೊಂದು ಡಿಮ್ಯಾಂಡ್ ಬರುವಂತೆ ಮಾಡಿದೆ. ಇತ್ತೀಚೆಗೆ ಲಹರಿ ಸಂಸ್ಥೆ 7 ಕೋಟಿ ರೂಪಾಯಿ ಕೊಟ್ಟು ಆಡಿಯೋ ಹಕ್ಕನ್ನ ಖರೀದಿಸಿತ್ತು.

ಈಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಡಬ್ಬಿಂಗ್ ಹಾಗೂ ಟಿವಿ ರೈಟ್ಸ್‌ಗೆ ಇಷ್ಟು ಕೇಳ್ತಾ ಇರೋದು ಭಾರತೀಯ ಸಿನಿಮಾರಂಗದಲ್ಲಿ ಇದೇ ಮೊದಲು ಅನ್ನೋದು ಗಾಂಧಿನಗರದ ಸಿನಿಮಾ ಪಂಡಿತರ ಮಾತು. ಇಷ್ಟೆಲ್ಲಾ ಹೈಲೆಟ್ಸ್ ಇರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ, ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಪ್ರೇಕ್ಷಕರಿಗೆ ಅನುಮತಿ ಸಿಕ್ಕರೆ ಯಶ್ ಲಕ್ಕಿ ತಿಂಗಳು ಡಿಸೆಂಬರ್​ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.