ಬೆಂಗಳೂರು: ಈಗಾಗಲೇ ಸ್ಯಾಟಲೈಟ್ಗೆ ಮಾರಾಟವಾಗಿರುವ ಹಳೆಯ ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗದಂತೆ ನಿರ್ಮಾಪಕರ ಸಂಘ ಹೈಕೋರ್ಟ್ನಿಂದ ತಡಯಾಜ್ಞೆ ತಂದಿದೆ.
ಒಟಿಟಿ ವಿಚಾರವಾಗಿ ನಿರ್ಮಾಪಕರ ಸಂಘದ ಸಭೆ ನಡೆಸಿದ್ದು, ಬಳಿಕ ಮಾತನಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ಈಗಾಗಲೇ ಟಿವಿಗೆ ಮಾರಾಟವಾಗಿರುವ ಸಿನಿಮಾಗಳನ್ನು ಅಕ್ರಮವಾಗಿ ಒಟಿಟಿಯಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಯಾವುದೇ ಸಿನಿಮಾವನ್ನು ಹತ್ತರಿಂದ ಹದಿನೈದು ವರ್ಷಗಳ ಕಾಲಾವಧಿಗೆ ಚಿತ್ರ ನಿರ್ಮಾಪಕರು ಸ್ಯಾಟಲೈಟ್ ರೈಟ್ಸ್ ಸೇಲ್ ಮಾಡಿರುತ್ತಾರೆ. ಆದ್ರೆ ಸ್ಯಾಟಲೈಟ್ ರೈಟ್ಸ್ ಖರೀದಿ ಮಾಡಿರುವವರು ಆ ಸಿನಿಮಾಗಳನ್ನು ಈಗ ಒಟಿಟಿಗೆ ಸೇಲ್ ಮಾಡಿದ್ದಾರೆ. ಇದು ಅಕ್ರಮವಾಗಿದೆ ಎಂದರು.
ವಾಹಿನಿಗಳಿಗೆ ಸ್ಯಾಟಲೈಟ್ ಹಕ್ಕನ್ನು ಮಾತ್ರ ನೀಡಿರುತ್ತೇವೆ. ಅದರೆ ಅವರು ನಮ್ಮ ಅನುಮತಿ ಇಲ್ಲದೆ ಒಟಿಟಿ ಫ್ಲ್ಯಾಟ್ಫಾರ್ಮ್ ಗೆ ಸೇಲ್ ಮಾಡಿದ್ದಾರೆ. ಹಿಗಾಗಿ ಹೈಕೋರ್ಟ್ನಲ್ಲಿ ಕೇಸ್ ದಾಖಲಿಸಿ ಅಕ್ರಮ ಪ್ರಸಾರಕ್ಕೆ ತಡೆಯಾಜ್ಙೆ ತಂದಿರುವುದಾಗಿ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ತಿಳಿಸಿದ್ದಾರೆ.
ಈಗ ಹೈಕೋರ್ಟ್ನಲ್ಲಿ ಅಕ್ರಮ ಪ್ರಸಾರ ತಡೆಹಿಡಿಯಲು ಸೂಚಿಸಲಾಗಿದೆ. ಇನ್ಮುಂದೆ ಯಾವುದೇ ಫ್ಲ್ಯಾಟ್ಫಾರ್ಮ್ನಲ್ಲಿ ಅಕ್ರಮ ಪ್ರಸಾರ ಮಾಡಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಪ್ರವೀಣ್ ತಿಳಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ ವಾಣಿಜ್ಯ ಮಂಡಳಿ ಸದಸ್ಯರು, ನಿರ್ಮಾಪಕ ಕೆ. ಮಂಜು, ಅಧ್ಯಕ್ಷ ಪ್ರವೀಣ್, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.